ಚೀನೀ ಆ್ಯಪ್​ಗಳನ್ನ ನಿಷೇಧಿಸಿ ಪ್ರಧಾನಿ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ: ಜಗದೀಶ್ ಶೆಟ್ಟರ್

ಪರ್ಯಾಯ ಆ್ಯಪ್ಗಳನ್ನು ಮಾಡಲು ಸ್ಟಾರ್ಟ್ಅಪ್ ಕಂಪನಿಗಳಿಗೆ ಬೆಂಬಲ ಕೊಡುತ್ತಿದ್ದೇವೆ. ಸ್ಟಾರ್ಟ್ಅಪ್ ಕಂಪನಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೈಗಾರಿಕಾ ಸಚಿವರು ಹೇಳಿದ್ದಾರೆ.

news18-kannada
Updated:June 30, 2020, 10:35 PM IST
ಚೀನೀ ಆ್ಯಪ್​ಗಳನ್ನ ನಿಷೇಧಿಸಿ ಪ್ರಧಾನಿ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ: ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್
  • Share this:
ಹುಬ್ಬಳ್ಳಿ(ಜೂನ್ 30): ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡುವ ಮೂಲಕ ಒಳ್ಳೆಯ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಜಿಯವರು ಮಾಡಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಚೀನಾಕ್ಕೆ ತಕ್ಕ ಪಾಠ ಕಲಿಸುವುದಾಗಿ ಪ್ರಧಾನಿ ಹೇಳಿದ್ದರು. ಈಗ ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದು ಶೆಟ್ಟರ್ ಕೊಂಡಾಡಿದ್ದಾರೆ.

ಪರ್ಯಾಯಗಳು ಸದಾಕಾಲ ಹುಟ್ಟಿಕೊಳ್ಳುತ್ತವೆ. ನಮ್ಮಲ್ಲಿ ಮೊದಲು ವೆಂಟಿಲೇಟರ್, ಮಾಸ್ಕ್ ಪ್ರೊಡಕ್ಷನ್ ಕಡಿಮೆಯಿತ್ತು. ಈಗ ರಫ್ತು ಮಾಡುವಷ್ಟು ಉತ್ಪಾದನೆ ಮಾಡುತ್ತಿದ್ದೇವೆ. ಅವಶ್ಯಕತೆ ಬಂದಾಗ ಎದ್ದೇಳುವುದು ಭಾರತದ ಗುಣ. ಪರ್ಯಾಯ ಆ್ಯಪ್‌ಗಳನ್ನು ಮಾಡಲು ಸ್ಟಾರ್ಟ್‌ಅಪ್ ಕಂಪನಿಗಳಿಗೆ ಬೆಂಬಲ ಕೊಡುತ್ತಿದ್ದೇವೆ. ಸ್ಟಾರ್ಟ್‌ಅಪ್‌ ಕಂಪನಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ‌. ದೇಶದಲ್ಲಿ ಸ್ಟಾರ್ಟ್‌ಅಪ್‌ಗೆ ಮೊದಲು ಚಾಲನೆ ಕೊಟ್ಟಿದ್ದು ಬೆಂಗಳೂರು. ಅತೀಹೆಚ್ಚು ಸ್ಟಾರ್ಟ್‌ಅಪ್ ಕಂಪನಿಗಳಿರುವುದು ಬೆಂಗಳೂರಿನಲ್ಲಿ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಆಗ ಕೂಲಿಕಾರ್ಮಿಕರಿಗೆ ಆಪದ್ಬಾಂಧವ; ಈಗ ಪೊಲೀಸರಿಗೆ ಧೈರ್ಯ; ಎಸಿಪಿ ಕರಿಬಸವನಗೌಡಗೆ ಮೆಚ್ಚುಗೆಯ ಮಹಾಪೂರ

ಖಾಸಗಿ ಆಸ್ಪತ್ರೆಗಳೂ ಸೇವಾ ಮನೋಭಾವ ತೋರಿಸಲಿ:

ಖಾಸಗಿ ಆಸ್ಪತ್ರೆಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಕೊರೊನಾ ವಿರುದ್ಧ ಯುದ್ಧ ಪರಿಸ್ಥಿತಿಯಿದ್ದು ಸರ್ಕಾರದ ನೆರವಿಗೆ ಬರುವುದು ವೈದ್ಯರ ಜವಾಬ್ದಾರಿ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳ ಪ್ರಮುಖರ ಸಭೆ ಮಾಡಿ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಏನೇ ಸಮಸ್ಯೆಯಿದ್ದರೂ ನೇರವಾಗಿ ಮಾತನಾಡಲು ಹೇಳಿದ್ದೆವು. ಸರ್ಕಾರ ನಿಗದಿಪಡಿಸಿದ ದರ ಪಟ್ಟಿಯ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ‌. ಕೊರೋನಾ ಚಿಕಿತ್ಸೆಗೆ ಶೇಕಡಾ ಐವತ್ತರಷ್ಟು ಬೆಡ್ ಮೀಸಲಿಡಲು ತಿಳಿಸಿದ್ದೇವೆ ಎಂದು ಕೈಗಾರಿಕಾ ಸಚಿವರು ಮಾಹಿತಿ ನೀಡಿದ್ಧಾರೆ.

ಸಚಿವ ಸುಧಾಕರ್ ಬದಲಾವಣೆ ಸಿಎಮ್ ನಿರ್ಧಾರವಾಗಿದ್ದು, ಇದು ಕೇವಲ ಬೆಂಗಳೂರಿಗೆ ಮೀಸಲಾಗಿದೆ. ಸಂಪೂರ್ಣ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಪಾಸಿಟಿವ್ ಬಂದ ಕಡೆಗಳಲ್ಲಿ ಮಾತ್ರ ಸೀಲ್‌ಡೌನ್ ಮಾಡಲಾಗುತ್ತಿದೆ. ಜುಲೈ 7ರ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶೆಟ್ಟರ್ ತಿಳಿಸಿದ್ದಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading