• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಲಾಕ್​​ಡೌನ್​​ನಲ್ಲಿ ಸಮಯ ಕಳೆಯಲು ಚಿತ್ರ ಬರೆದ ಧಾರವಾಡದ ಯುವಕ: ಪ್ರಧಾನಿ ಮೋದಿಯಿಂದ ಪ್ರಶಂಸೆ

ಲಾಕ್​​ಡೌನ್​​ನಲ್ಲಿ ಸಮಯ ಕಳೆಯಲು ಚಿತ್ರ ಬರೆದ ಧಾರವಾಡದ ಯುವಕ: ಪ್ರಧಾನಿ ಮೋದಿಯಿಂದ ಪ್ರಶಂಸೆ

ಚಿತ್ರ ಬಿಡಿಸುತ್ತಿರುವ ಸಚಿನ್​​

ಚಿತ್ರ ಬಿಡಿಸುತ್ತಿರುವ ಸಚಿನ್​​

ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿ ಸುಮ್ಮನೇ ಕೂಡಲಾಗದೇ ಚಿತ್ರಕಲೆ ಬಿಡಿಸೋ ಮೂಲಕ ಸಮಯ ಕಳೆಯಲು ನಿರ್ಧರಿಸಿದಾಗ ಸಚಿನ್ ನ ನಿಜವಾದ ಪ್ರತಿಭೆ ಬಯಲಿಗೆ ಬಂತು.

  • Share this:

ಧಾರವಾಡ : ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಆ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಬೆಳೆಸೋರು ಅತೀ ವಿರಳ‌.  ಬೆಣ್ಣೆನಗರಿಯ 16 ರ ಈ ಬಾಲಕನ ಪ್ರತಿಭೆಯನ್ನು ನೋಡಿ ಪ್ರಧಾನಿ ಮೋದಿಯವರೇ ಪ್ರಶಂಸನಾ ಪತ್ರವನ್ನು ಕಳಿಸಿಕೊಟ್ಟಿದ್ದಾರೆ. ಆ ಮೂಲಕ ಬಾಲಕನ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ. ಧಾರವಾಡ ತಾಲೂಕಿನ ಮಾರಡಗಿ ಗ್ರಾಮದ ಸಚಿನ್ ಬಳ್ಳಾರಿ ಎಂಬ ಬಾಲಕನಿಗೆ ಪ್ರಧಾನಿ‌ಮೋದಿ ಅವರು ಪ್ರಶಂಸೆಯ ಪತ್ರ ಕಳಿಸಿದ್ದು, ಎಲ್ಲರ ಗಮನ ಸೆಳೆದಿದೆ. 


ಸಧ್ಯ ಧಾರವಾಡದ ಕೊಪ್ಪದಕೇರಿ ಬಡಾವಣೆಯಲ್ಲಿ ವಾಸವಾಗಿರೋ ಶಿವರಾಜ್ ಹಾಗೂ ಭುವನೇಶ್ವರಿ ದಂಪತಿಯ ಕಿರಿಯ ಮಗನಾಗಿರೋ ಸಚಿನ್ ಗೆ ಮೊದಲಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಸಚಿನ್ ಬಳ್ಳಾರಿ ಸದ್ಯ ಪಿಯುಸಿ  ವ್ಯಾಸಾಂಗ ಮಾಡುತ್ತಿದ್ದಾನೆ. ಎರಡನೇ ತರಗತಿಯಲ್ಲಿ ಓದುವಾಗಲೇ ಚಿತ್ರಗಳನ್ನು ಸೊಗಸಾಗಿ ಬಿಡುತ್ತಿದ್ದ. ಇದನ್ನು ಗಮನಿಸಿದ ತಂದೆ ಶಿವರಾಜ್ ಚಿತ್ರಕಲೆಗೆ ಸಂಬಂಧಿಸಿದ ಪುಸ್ತಕಗಳನ್ನು ತಂದು ನೀಡುತ್ತಿದ್ದರು. ಆದರೆ ನಿಜವಾಗಿರೂ ಸಚಿನ್ ಪ್ರತಿಭೆ ಹೊರಬರಲು ಕಾರಣವಾಗಿದ್ದು ಕಳೆದ ವರ್ಷದ ಲಾಕ್ ಡೌನ್. ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿ ಸುಮ್ಮನೇ ಕೂಡಲಾಗದೇ ಚಿತ್ರಕಲೆ ಬಿಡಿಸೋ ಮೂಲಕ ಸಮಯ ಕಳೆಯಲು ನಿರ್ಧರಿಸಿದಾಗ ಸಚಿನ್ ನ ನಿಜವಾದ ಪ್ರತಿಭೆ ಬಯಲಿಗೆ ಬಂತು.


ಈ ಲಾಕ್ ಡೌನ್ ಅವಧಿಯಲ್ಲಿ ಸಚಿನ್ 70 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ ಅಚ್ಚರಿ ಮೂಡಿಸಿದ. ಈ ಚಿತ್ರಗಳನ್ನು ಹಿರಿಯ ಕಲಾವಿದರಿಗೆ ತೋರಿಸಲಾಗಿದ್ದು, ಅವರು ಕೂಡ ಆಶ್ಚರ್ಯ ಪಟ್ಟಿದ್ದಾರೆ. ಏಕೆಂದರೆ ಯಾವುದೇ ಚಿತ್ರಕಲೆಯ ಶಿಕ್ಷಣ ಇಲ್ಲದೇ ಇಷ್ಟೊಂದು ಅದ್ಭುತವಾಗಿ ಚಿತ್ರ ಬಿಡಿಸಿದ್ದನ್ನು ಗಮನಿಸಿದ ಹಿರಿಯ ಕಲಾವಿದರು ಸಚಿನ್ ಗೆ ಕೆಲ ಹಿಂಟ್ ಗಳನ್ನು ನೀಡಿದರು. ಅದು ಮತ್ತಷ್ಟು ಅದ್ಭುತವಾಗಿ ಚಿತ್ರ ಬಿಡಿಸಲು ಅನುಕೂಲವಾಯಿತು.


ಇದನ್ನೂ ಓದಿ: ಸಂಚಾರಿ ವಿಜಯ್​​ರಂತೆ ನಾನೂ ನೋವು ಅನುಭವಿಸಿದ್ದೆ : ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ಅನಿರುದ್ಧ್!


ಇತ್ತೀಚಿಗೆ ಸಚಿನ್ ಐದು ಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಕಳಿಸಿಕೊಟ್ಟಿದ್ದ. ಮೋದಿ ತಾಯಿಯೊಂದಿಗೆ ಇರುವ ಚಿತ್ರ, ಕ್ರಿಕೆಟಿಗ ವಿರಾಟ್ ಕೊಹ್ಲಿ, ವಲ್ಲಭ ಭಾಯಿ ಪಟೇಲ್, ವಿವೇಕಾನಂದ ಹಾಗೂ ಗಾಂಧೀಜಿ ಫೋಟೋಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಚ್ಚರಿಯಾಗಿದೆ. ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಅದ್ಭುತ ಫೋಟೋಗಳನ್ನು ಬಿಡಿಸಿರೋದನ್ನು ಗಮನಿಸಿ, ಪ್ರಧಾನಿ ನರೇಂದ್ರ ಮೋದಿ ಸಚಿನ್ ಗೆ ಪ್ರಶಂಸನಾ ಪತ್ರವನ್ನು ಕಳಿಸಿಕೊಟ್ಟಿದ್ದಾರೆ.


ತಾನು ಬಿಡಿದ ಚಿತ್ರಗಳನ್ನು ನೋಡಿ ತನಗೆ ಪತ್ರ ಕಳಿಸಿದ ಪ್ರಧಾನಿಗಳು ಅವರಿಗೆ ಧನ್ಯವಾದ ಹೇಳಿದ ಸಚಿನ್, ನಾನು ಕಳಿಸಿದ ಐದು ಚಿತ್ರಗಳನ್ನು ಮೂರ ಚಿತ್ರಗಳಿಗೆ ಪ್ರಧಾನಿ‌ಮೋದಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಇದೇ‌ರೀತಿಯಾಗಿ ಹವ್ಸಾಸ ಇಟ್ಟುಕೊಂಡು ಉತ್ತಮ ಸಾಧನೆ ಮಾಡುವಂತೆ ಪತ್ರದ ಮೂಲಕ ತಿಳಿಸಿದ್ದು ತುಂಬಾ ಸಂತದ‌ತಂದೆ ಅನ್ನುತ್ತಾನೆ ಸಚಿನ್.


ತಮ್ಮ‌ಮಗ ಎರಡನೇ‌ ಕ್ಲಾಸ್ ಇರುವಾಗಲ್ಲೆ ಚಿತ್ರಗಳನ್ನು ಬಿಡಿಸುತ್ತಿದ್ದ, ಅವರಿಗೆ ಅನುಕೂಲವಾಗಲೇಂದು ಕೆಲವು ಬುಕ್ಸ್ ತಂದುಕೊಟಿದ್ದೆ. ಆದ್ರೆ ಕಳೆದ ವರ್ಷದ ಲಾಕ್ ಡೌನ್ ನಿಂದ ಹೆಚ್ಚಾಗಿ ಚಿತ್ರಗಳನ್ನ ಬಿಡಿಸುವಲ್ಲಿ ತೊಡಗಿಕೊಂಡ, ಅದರಲ್ಲಿಯೂ ಪೆನ್ಸಿಲ್ ಸೇಡ್ ಚಿತ್ರಗಳೇ ಹೆಚ್ಚಾಗಿ ತೆಗೆಯುತ್ತಿದ್ದಾನೆ. ಪ್ರಧಾನಿ ಅವರಿಗೆ ಐದು ಚಿತ್ರಗಳನ್ನು ಕಳಿಸಲಾಗಿತ್ತು, ಅವುಗಳನ್ನು‌ ನೋಡಿದ ಪ್ರಧಾನಿ ಅವರು ಮರಳು ಪ್ರಶಂಸೆಯ ಪತ್ರ ಕಳಿಸಿತ್ತು ನಮಗೆ ಹಾಗೂ ನಮ್ಮ‌ ಕುಟುಂಬದಲ್ಲಿ ಸಂತಸ‌ಮೂಡಿಸಿದೆ ಎನ್ನುತ್ತಾರೆ ಸಚಿನ್ ತಂದೆ ಶಿವರಾಜ ಬಳ್ಳಾರಿ.


ಸಾಮಾನ್ಯವಾಗಿ ಇಷ್ಟು ಸಣ್ಣ ವಯಸ್ಸಿನಲ್ಲಿ, ಚಿತ್ರಕಲೆಯ ಶಿಕ್ಷಣವಿಲ್ಲದೇ ಅದ್ಭುತವಾಗಿ ಪೆನ್ಸಿಲ್ ಚಿತ್ರಗಳನ್ನು ಬಿಡಿಸೋ ಈ ಬಾಲಕ ಮುಂದಿನ ದಿನಗಳಲ್ಲಿ ದೊಡ್ಡ ಚಿತ್ರಕಲಾವಿದನಾಗೋದರಲ್ಲಿ ಯಾವುದೇ ಅನುಮಾನವೇ ಇಲ್ಲ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು