ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಪಿಕ್ ಅಂಡ್ ಡ್ರಾಪ್ ಸರ್ವಿಸ್; ಸರ್ಕಾರದ ಕೋವಿಡ್ ರೂಲ್ಸ್ ಬ್ರೇಕ್

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಹಾಗೂ ಕಾಗವಾಡ ತಾಲೂಕಿನ ಗಡಿಯಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಮಾಡಿ ಮಹಾರಾಷ್ಟ್ರದಿಂದ ಬರುವವರ ಕೋವಿಡ್ ರಿಪೋರ್ಟ್ ತಪಾಸಣೆ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದ್ರೆ ಗಡಿಯಲ್ಲಿ ಮಾತ್ರ ಕಾಟಾಚಾರಕ್ಕೆ ಎಂಬತ್ತೆ ತಪಾಸಣೆ ನಡೆಸಲಾಗುತ್ತದೆ.

ಕರ್ನಾಟಕ-ಮಹಾರಾಷ್ಟ್ರ ಗಡಿ.

ಕರ್ನಾಟಕ-ಮಹಾರಾಷ್ಟ್ರ ಗಡಿ.

  • Share this:
ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೆ ಅಲೆ ಶುರುವಾಗಿದ್ದು  ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಲ್ಲೆ ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈಗಾಗಲೆ ಮಹಾರಾಷ್ಟ್ರದಲ್ಲಿ  ನಿತ್ಯವೂ 20 ಸಾವಿರಕ್ಕೂ ಮೇಲ್ಪಟ್ಟ ಕೇಸ್ ಗಳು ದಾಖಲಾಗುತ್ತಿದ್ದು ಕೆಲ ಜಿಲ್ಲೆಗಳನ್ನ ಲಾಕ್​ಡೌನ್ ಮಾಡಲಾ ಗಿದೆ. ಇನ್ನು ಈ ಸಮಸ್ಯೆ ನಮ್ಮ ರಾಜ್ಯಕ್ಕೂ ಬಿಟ್ಟಿಲ್ಲಾ ಈಗಾಗಲೆ ನಿತ್ಯದ ಪಾಸಿಟಿವ್ ಸಂಖ್ಯೆ ಸಾವಿರದ ಗಡಿ ದಾಟಿದ್ದು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕ ಕಾಡುತ್ತಿದೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿಸರ್ಕಾರ ಟಫ್ ರೂಲ್ಸ್ ಜಾರಿಗೆ ತಂದಿದೆ.‌ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿಯಾಗಬೇಕಾದರೆ  ಕೋವಿಡ್ ರಿಪೋರ್ಟ್ ಕಡ್ಡಾಯ ಮಾಡಿದ್ರು ಸಹ ಗಡಿಯಲ್ಲಿ ಮಾತ್ರ ಯಾವುದೆ ರೂಲ್ಸ್ ಗಳನ್ನ ಪಾಲನೆ ಮಾಡುತ್ತಿಲ್ಲಾ. ಸ್ವತಃ ಜಿಲ್ಲಾಡಳಿತವೆ ಸರ್ಕಾರದ ರೂಲ್ಸ್ ಗಳನ್ನ ಜಾರಿಗೆ ತರುವಲ್ಲಿ ವಿಫಲವಾಗಿದೆ.

ಹೌದು.. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಹಾಗೂ ಕಾಗವಾಡ ತಾಲೂಕಿನ ಗಡಿಯಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಮಾಡಿ ಮಹಾರಾಷ್ಟ್ರದಿಂದ ಬರುವವರ ಕೋವಿಡ್ ರಿಪೋರ್ಟ್ ತಪಾಸಣೆ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದ್ರೆ ಗಡಿಯಲ್ಲಿ ಮಾತ್ರ ಕಾಟಾಚಾರಕ್ಕೆ ಎಂಬತ್ತೆ ತಪಾಸಣೆ ನಡೆಸಲಾಗುತ್ತದೆ. ಜನ ಅಧಿಕಾರಿಗಳ ಮುಂದೆಯೆ ರಾಜಾರೋಷವಾಗಿ ಗಡಿ ದಾಟಿಕೊಂಡು ಬಂದರು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಸರ್ಕಾರಿ ಬಸ್ ಹತ್ತಲು ಕೋವಿಡ್ ರಿಪೋರ್ಟ್ ತಪಾಸಣೆ ನಡೆಸುತ್ತಿರುವ ಹಿನ್ನಲೆ ಮಹಾರಾಷ್ಟ್ರದ ಸರ್ಕಾರಿ ಸಾರಿಗೆ ಹಾಗೂ ಖಾಸಗಿ ವಾಹನಗಳು ಗಡಿಯವರೆಗೆ ಜನರನ್ನ ತಂದು ಬಿಟ್ಟು ಹೋಗುತ್ತಿವೆ. ಗಡಿಯಲ್ಲಿ ಇಳಿದ ಜನ ಕಾಲ್ನಡಿಗೆ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡಿ ಬಳಿಕ ಖಾಸಗಿ ಹಾಗೂ ಸರ್ಕಾರಿ ಬಸ್ ಗಳ ಮೂಲಕ ಮತ್ತೆ ಪ್ರಯಾಣ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಚೆಕ್ ಪೋಸ್ಟ್ ಎದುರಿನಲ್ಲಿ ನಡೆದ್ರು ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳುತ್ತಿಲ್ಲ.

ಇದನ್ನೂ ಓದಿ: ಕೊಡಗು: ಮೂವರ ಬಲಿ ಪಡೆದಿದ್ದ ನರಭಕ್ಷಕ ಹುಲಿ, ಕೊನೆಗೂ ಗುಂಡೇಟು ತಿಂದು ಸಾವು!

ಇನ್ನು ಈ ವಿಚಾರವಾಗಿ ಕಾಗವಾಡ ತಹಶಿಲ್ದಾರ ಪ್ರಮೀಳಾ ದೇಶಪಾಂಡೆ ಅವರನ್ನ ಕೇಳಿದ್ರೆ "ಈಗಾಗಲೆ ನಾವು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದೇವೆ ಜನ ಕಳ್ಳ ದಾರಿಗಳ ಮೂಲಕ ಬರ್ತಾರೆ. ಬಸ್ ಮೂಲಕ ಬಂರ್ತಿದ್ದಾರೆ ಸರ್ಕಾರದ ಆದೇಶದಂತೆ ಚೆಕ್ ಪೊಸ್ಟ್ ನಿರ್ಮಾಣ ಮಾಡಲಾಗಿದೆ ಬಸ್, ನಡೆದುಕೊಂಡು ಗಡಿ ದಾಟಿದರೆ ನಾವೇನು ಮಾಡೊನ ಹೇಳಿ. ಸರ್ಕಾರ ಬಸ್ ಗಳನ್ನ ಬಂದ್ ಮಾಡಬೇಕು ಅವರು ಬಂದ್ ಮಾಡುತ್ತಿಲ್ಲಾ ನಮಗೆ ಇದೊಂದೆ ಕೆಲಸ ಇಲ್ಲಾ. ಲಾಕಡೌನ ಸಂದರ್ಭದಲ್ಲಿ ಒಂದೆ ಕೆಲಸ ಇತ್ತು ಆವಾಗ ಕಟ್ಟುನಿಟ್ಟಾಗಿ ಮಾಡಲಾಗಿತ್ತು ಈಗ ಅಧಿವೇಶನ ನಡೆಯುತ್ತಿದೆ. ಪ್ರಶ್ನೆಗಳ ಮಾಹಿತಿ ನೀಡಬೇಕು ನಮಗೆ ಸಾಕಷ್ಟು ಬೇರೆ ಕೆಲಸಗಳಿದ್ದಾವೆ" ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರವೇನೋ ಜನರ ಹಿತದೃಷ್ಠಿಯಿಂದ ಸ್ಟ್ರಿಕ್ಟ್ ರೂಲ್ಸ್ ಆಂಡ್ ರೆಗ್ಯೂಲೇಷನ್ಸ್ ತರುತ್ತಲೆ ಇದೆ.‌ ಆದ್ರೆ ಇದಕ್ಕೆ ಬೇಕಾದ ವ್ಯವಸ್ಥೆಗಳನ್ನ ಮಾತ್ರ ಮಾಡುತ್ತಿಲ್ಲ. ಈಗಲೂ ಸಹ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೆಪ ಮಾತ್ರಕ್ಕೆ ತಪಾಸಣೆ ನಡೆಯುತ್ತಿದ್ದು ಜನ ಕಳ್ಳ ಮಾರ್ಗಗಳನ್ನ ಕಂಡುಕೊಂಡಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶ ಮಾಡಲು 10 ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ರಸ್ತೆಗಳಿದ್ದು ಆ ಮೂಲಕ ರಾಜ್ಯಕ್ಕೆ ಜನ ಆಗಮಿಸುತ್ತಿದ್ದಾರೆ.
Published by:MAshok Kumar
First published: