HOME » NEWS » District » PHYSICALLY CHALLENGED PERSON JAGDISH STANDING WITH THE HELP OF THE COVID FRONT LINE WARRIOR DKK MAK

Corona Warrior: ಕೈ ಇಲ್ಲದಿದ್ದರೇನಂತೆ ಕೋವಿಡ್ ಪ್ರಂಟ್ ಲೈನ್ ವಾರಿಯರ್ ಸಹಾಯಕ್ಕೆ ನಿಂತ ಜಗದೀಶ್

ಕೈತುಂಬ ಹಣ ಇದ್ದು ಕೊಟ್ಯಾದಿಪತಿಗಳೆ ಇವತ್ತು ಸಹಾಯದ ರೂಪದಲ್ಲಿ ಸಾವಿರ ರೂಪಾಯಿ ಹಣ ನೀಡಬೇಕಾದರು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಜಗದೀಶ ಇಂತವರ ನಡುವೆ ಯಾರಿಗೂ ಸಾಟಿಯಾಗದ ಅಪರೂದಲ್ಲಿ ಅಪರೂಪದ ವ್ಯಕ್ತಿಯೇ ಆಗಿದ್ದಾನೆ.

news18-kannada
Updated:May 11, 2021, 7:23 PM IST
Corona Warrior: ಕೈ ಇಲ್ಲದಿದ್ದರೇನಂತೆ ಕೋವಿಡ್ ಪ್ರಂಟ್ ಲೈನ್ ವಾರಿಯರ್ ಸಹಾಯಕ್ಕೆ ನಿಂತ ಜಗದೀಶ್
ಜಗದೀಶ್​.
  • Share this:
ಕಾರವಾರ: ಕಳೆದ ವರ್ಷದ ಲಾಕ್​ಡೌನ್ ಕಷ್ಟದ ದಿನಗಳು ಮರೆಯುವ ಮುನ್ನವೇ ಈಗ ಮತ್ತೊಂದು ಲಾಕ್​ಡೌನ್ ಜಾರಿಯಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಇಲ್ಲ, ರಸ್ತೆಗಳಲ್ಲಿ ಜನ ಸಂಚಾರ ಇಲ್ಲ, ಈ ಎಲ್ಲದರ ನಡುವೆ ದುಡಿದು ತಿನ್ನುವ ಕಾರ್ಮಿಕರಿಗೆ ದುಡಿತ ಇಲ್ಲ, ಈ ಎಲ್ಲ ಒಂದು ಕಡೆ ಆದ್ರೆ ಇಂತ ಕಷ್ಟದ ಸಮಯದಲ್ಲಿ ಪ್ರಂಟ್ ಲೈನ್ ವಾರಿಯರ್ ಗಳ ದಾಹ ತೀರಿಸಿ ಹೊಟ್ಟೆ ತಣ್ಣಗಿಡಲು ಕಾರವಾರದಲ್ಲಿ ಜಗದೀಶ್ ಎನ್ನುವ ವ್ಯಕ್ತಿ ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು.. ಹೀಗೆ ಒಂದು ಕೈ ಕಳೆದುಕೊಂಡ್ರೂ ಯಾರ ಹಂಗಿಲ್ಲದೆ ಸ್ವಾಭಿಮಾನಿಯಾಗಿ ಜೀವನ ಸಾಗಿಸುವ ಈತ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನವ, ಕಳೆದ 20 ವರ್ಷದಿಂದ ಕಾರವಾರದಲ್ಲಿ ಉದ್ಯೋಗ ಕಂಡು ಕೊಂಡು ಸಣ್ಣ ಪುಟ್ಟ ಅಂಗಡಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾನೆ.

ಈತನ ಹೆಸರು ಜಗದೀಶ ಅಂತಾ..ಈಗ ಈತನಿಗೂ ಕೆಲಸ ಇಲ್ಲ ದುಡಿಮೆ ಇಲ್ಲ ಆದ್ರೆ ಈತ ಇದ್ಯಾವುದು ಲೆಕ್ಕಿಸದೆ ಇವನ್ನೆಲ್ಲ ಬದಿಗೆ ಒತ್ತಿ ಕಾರವಾರದಲ್ಲಿ ಕೋವಿಡ್ ಪ್ರಂಟ್ ಲೈನ್ ವಾರಿಯರ್ ಆಗಿ ಕೆಲಸ ನಿರ್ವಹಿಸುವ ಪೋಲಿಸರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮುಂಜಾನೆ ನೀರು ಕೊಡುತ್ತಾನೆ. ಸಂಜೆ ಆಗುತ್ತಿದ್ದಂತೆ ಬಿಸ್ಕೆಟ್ ಮತ್ತು ಚಹ ನೀಡುತ್ತಾನೆ. ಇವೆಲ್ಲ ಸಹಾಯ ತನ್ನ ಸ್ವಂತ ಖರ್ಚಿನಲ್ಲೆ ಮಾಡುತ್ತಿದ್ದು ಈತನ ಈ ಸಹಾಯಕ್ಕೆ ಪೋಲಿಸ್ ಇಲಾಖೆ ಸಿಬ್ಬಂದಿ ಹೆಮ್ಮೆಯಿಂದ ಶ್ಲಾಘಿಸುತ್ತಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಈತ ನಗರದಲ್ಲಿ ಕರ್ತವ್ಯದಲ್ಲಿ ಇರುವ ಎಲ್ಲ ಪೋಲಿಸರಿಗೂ ನೀರಿನ ಬಾಟಲಿ ನೀಡಿ ಅವರಿಗೆ ನೀರಿನ ದಾಹ ತೀರಿಸಿ ಹೊಟ್ಟೆ ತಣ್ಣಗಿಡಿಸುವ ಪ್ರಯತ್ನ ಮಾಡುತ್ತಿದ್ದಾನೆ.

ಜಗದೀಶನ ಕೆಸಕ್ಕೆ ಜನಮೆಚ್ವುಗೆ:

ಕೈತುಂಬ ಹಣ ಇದ್ದು ಕೊಟ್ಯಾದಿಪತಿಗಳೆ ಇವತ್ತು ಸಹಾಯದ ರೂಪದಲ್ಲಿ ಸಾವಿರ ರೂಪಾಯಿ ಹಣ ನೀಡಬೇಕಾದರು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಜಗದೀಶ ಇಂತವರ ನಡುವೆ ಯಾರಿಗೂ ಸಾಟಿಯಾಗದ ಅಪರೂದಲ್ಲಿ ಅಪರೂಪದ ವ್ಯಕ್ತಿಯೇ ಆಗಿದ್ದಾನೆ. ಇನ್ನೂ ಕಳೆದ ವರ್ಷದ ಲಾಕ್​ಡೌನ್ ಸಮಯದಲ್ಲೂ ಈತ ಇಂತದ್ದೆ ಸಾಮಾಜಿಕ ಸೇವೆ ಮಾಡಿದ್ದ ಆದ್ರೆ ಯಾವುದೆ ಪ್ರಚಾರ ಬಯಸದೆ ಮಾದ್ಯಮದಿಂದ ದೂರ ಇದ್ದಿದ್ದ.

ಇದನ್ನೂ ಓದಿ: Covid Vaccine Shortage: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಗಳ ಕೊರತೆ; 45 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ವಾಕ್ಸಿನೇಷನ್!

ಯಾವುದೇ ಪ್ರಚಾರ ಮತ್ತು ಫಲಾಪೇಕ್ಷೆ ಇಲ್ಲದೆ ಈತ ಇವತ್ತು ಕೋವಿಡ್ ಸಂಕಷ್ಟದಲ್ಲಿ ದುಡಿಯುವ ಪ್ರಂಟ್ ಲೈನ್ ವಾರಿಯರ್ ಗೆ ನೀರು ಚಹಾ ತಿಂಡಿ  ನೀಡುತ್ತಿರೋದು ಶ್ಲಾಘನೀಯ. ಇದರ ಜತೆಗೆ ನಗರದಲ್ಲಿ ಇರುವ ಬಿಕ್ಷಕರಿಗೂ ಕೂಡಾ ಈತ ಸಹಾಯ ಹಸ್ತ ಚಾಚಿ ಅವರಿಗೂ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾನೆ. ರಸ್ತೆ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡ ಈತನಿಗೆ ತನ್ನ ಸಂಸಾರದ ನೌಕೆ ಸಾಗಿಸೋದೆ ಕಷ್ಟ ಹೀಗಿರುವಾಗ ಇವತ್ತು ಕೋವಿಡ್ ಸಮಯದಲ್ಲಿ ಪ್ರಂಟ್ ಲೈನ್ ವಾರಿಯರ್ ಗೆ ಬೆನ್ನಾಗಿ ನಿಂತಿರೋದು ದೇಶದ ಜನತೆಗೆ ಮಾದರಿಯಾಗಿದೆ.
Youtube Video
ರಸ್ತೆ ಅಪಘಾತದಲ್ಲಿ ಕೈ‌ಕಳೆದುಕೊಂಡ ಜಗದೀಶ:

ಕಳೆದ ಹತ್ತು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಜಗದೀಶ ತನ್ನ ಬಲಗೈ ಕಳೆದುಕೊಂಡಿದ್ದ ಈ ಸಮಯದಲ್ಲಿ ಎಲ್ಲಿಯೂ ದೃತಿಗೆಡದೆ ಸ್ವಾಭಿಮಾನಿ ಬದುಕಿಗೆ ನಾಂದಿ ಹಾಡಿದ...ಕಾರವರದಲ್ಲಿ ಅಂಗಡಿ ಇಟ್ಟುಕೊಂಡ...ಈಗ ಹೋಲಸೇಲ್ ವ್ಯಾಪಾರ ಮಾಡಿಕೊಂಡಿದ್ದಾನೆ...ಬಿಸ್ಕೇಟ್ ಮತ್ತು ಸಿಹಿ ತಿಂಡಿಯನ್ನ ಹೋಲ್ ಸೇಲ್ ರೂಪದಲ್ಲಿ ಕಾರವಾರ ನಗರದ ಎಲ್ಲ ಬೀದಿ ವ್ಯಾಪಾರಿ ಅಂಗಡಿಗಳಿಗೆ ಮಾರಾಟ ಮಾಡುತ್ತಾನೆ... ಒಟ್ಟಾರೆ ಒಂದು ಕೈ ಇಲ್ಲದಾದರೆನಂತೆ ತನ್ನಿಂದ ಆದ ಆದಷ್ಟು ಸಾಮಾಜಿಕ ಕಾರ್ಯ ಮಾಡಿದ್ರೆ ದೇವ ಮೆಚ್ಚುತ್ತಾನೆ ಎಂಬ ನಂಬಿಕೆ ಇಟ್ಟು ಇವತ್ತು ಕೋವಿಡ್ ವಾರಿಯರ್ ಗೆ ನೀರು ಕೊಡುವ ಈತನ ಸಹಾಯದ ಕೆಲಸಕ್ಕೆ ನಮ್ಮದೊಂದು ಸಲಾಮ್.
Published by: MAshok Kumar
First published: May 11, 2021, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories