ಹಾವೇರಿ; ಸರ್ಕಾರವೇನೋ ಬಡವರಿಗೆ ಸೂರಾಗಲಿ ಅಂತಾ ಹತ್ತಾರು ಆಶ್ರಯಮನೆ ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ಆ ಯೋಜನೆಗಳು ಜನರಿಗೆ ತಲುಪದೆ ನಮ್ಮನ್ನಾಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಕರಗಿ ಹೋಗುತ್ತಿವೆ. ಅದರಲ್ಲೂ ವಿಕಲಾಂಗ ಚೇತನರಿಗೆ ನೀಡಿರುವ ಸೌಕರ್ಯಗಳು ಅವರ ಕೈ ಸೇರದೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕುಂಟಿತವಾಗುತ್ತಿವೆ. ಸಾರ್ ನಮಗೆ ಮನೆ ಮಾಡಿ ಕೊಡ್ರಿ ಅಂತಾ ಅಂಗಲಾಚುತ್ತಿರುವ ಅಂಗವಿಕಲರೆ ಇದಕ್ಕೀಗ ತಾಜಾ ಉದಾಹರಣೆ.
ಹೌದು, ಹಾವೇರಿ ತಾಲೂಕಿನ ಹಾಲಗಿ ಹಾಗೂ ಕೆರೆಕೊಪ್ಪ ಗ್ರಾಮದ ವಿಕಲಾಂಗ ಚೇತನರ ಕರುಣಾಜನಕ ಕಥೆಯಿದು. ಹಾವೇರಿ ತಾಲೂಕಿನ ಹಾಲಗಿ ಗ್ರಾಮದ ವಿಕಲಾಂಗ ಕುಮಾರ ಭಜಂತ್ರಿ ಗ್ರಾಮದ ವರದಾ ನದಿಯ ದಡದಲ್ಲಿ ಪತ್ನಿ ಇಬ್ಬರು ಮಕ್ಕಳೊಂದಿಗೆ ವಾಸ ವಾಗಿದ್ದಾರೆ. ಮೂರು ವರ್ಷದ ಹಿಂದೆ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣವಾಗಿತ್ತು. ಈ ವರ್ಷ ಬಂದ ನೆರೆಯಿಂದಾಗಿ ಮನೆ ಸಂಪೂರ್ಣ ಜಲಾವೃತಗೊಂಡು, ಸಂಪೂರ್ಣ ಜಲಸಮಾಧಿಯಾಗಿದೆ. ಗ್ರಾ.ಪಂ.ಅಧಿಕಾರಿಗಳ ಅಸಡ್ಡೆತನದಿಂದಾಗಿ ನೆರೆ ಸಂತ್ರಸ್ತ ಪರಿಹಾರ ಸಿಗದೆ ಸೂರಿಗಾಗಿ ಪರದಾಡುವ ಪರಿಸ್ಥಿತಿ ಈಗ ಎದುರಾಗಿದೆ.
ಇದನ್ನು ಓದಿ: ಸಂಪುಟ ಸರ್ಕಸ್ನಲ್ಲಿ ದಿಕೆಟ್ಟ ಆಡಳಿತ; ಸರ್ಕಾರದ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಟೀಕೆ
ತನಗೊಂದು ಮನೆ ಕೂಡಿ, ಇಲ್ಲ ಕುಟುಂಬಕ್ಕೆ ದಯಾ ಮರಣ ನೀಡಿ ಎನ್ನುತ್ತಿದೆ ಈ ಕುಟುಂಬ. ತನ್ನ ಕುಟುಂಬಕ್ಕೆ ನೆಲೆ ಒದಗಿಸಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಹೌದು ಮನೆ ಬಿದ್ದಿರೊದು ನಿಜಾ ಎಂದು ಬರೀ ದಾಖಲೆಗಳಲ್ಲಿ ಮಾತ್ರ ಹೇಳುತ್ತಾರೆ ಹೊರತು ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ.ಕುಮಾರ ತನ್ನ ಇಬ್ಬರೂ ಮಕ್ಕಳು ಹೆಂಡತಿ ಶಕುಂತಲಾ ಕರೆದುಕೊಂಡು ಸುಮಾರು ಮೂವತ್ತು ಕಿಮೀ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ