ಚಿತ್ರದುರ್ಗ : ಸರ್ಕಾರಿ ಆಸ್ಪತ್ರೆ ಔಷಧಿ ಬಳಸಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು, ತಹಶಿಲ್ದಾರ್, ಪೋಲೀಸರು ಸೇರಿ ಜಂಟಿ ಕಾರ್ಯಚರಣೆ ಮಾಡಿ ದಾಳಿ ಮಾಡಿದ್ದಾರೆ, ನಕಲಿ ವೈದ್ಯ ಈಗ ಜೈಲು ಸೇರಿದ್ದಾನೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇತ್ತ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ, ಇದರಿಂದ ಜನರು ಪ್ರತಿ ದಿನವೂ ನರಕ ದರ್ಶನ ಪಡೆಯುವಂತಾಗಿದೆ. ಸಣ್ಣ ನೆಗಡಿ, ಕೆಮ್ಮು, ತಲೆನೋವು, ಜ್ವರ ಕಾಣಿಸಿಕೊಂಡರೂ ಆತಂಕದಿಂದಲೇ ಆಸ್ಪತ್ರೆ, ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯೋಕೆ ಮುಂದಾಗಿದ್ದಾರೆ. ಆದರೂ ಸೋಂಕಿನ ಬಗ್ಗೆ ಇರುವ ಜಾಗೃತಿ ಅಷ್ಟಕ್ಕಷ್ಟೆ ಆಗಿಬಿಟ್ಟಿದೆ. ಆದರೇ ಜನರ ಈಗಿನ ಮನಸ್ಥಿತಿಯನ್ನ ಅರಿತಿರೋ ಅದೆಷ್ಟೋ ವೈದ್ಯರು, ನರ್ಸ್ಗಳು, ನಕಲಿ ವೈದ್ಯರು ಜನರಿಗೆ ಮನಬಂದಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೆ ಅಲ್ಲದೇ ವೈದ್ಯ ವೃತ್ತಿ ಮಾಡೋಕೆ ಯೋಗ್ಯರೇ ಅಲ್ಲದ ವ್ಯಕ್ತಿಗಳು ಅಮಾಯಕ ಜನರಿಗೆ ಚಿಕಿತ್ಸೆ ನೀಡಿ ಹಣ ಪೀಕುತ್ತಿದ್ದಾರೆ.
ಈ ತರಹದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಅರ್ಹತೆ ಇಲ್ಲದಿದ್ದರೂ ವೈದ್ಯನಂತೆ ಮನೆಯಲ್ಲಿ ಕ್ಲಿನಿಕ್ ನಡೆಸಿ ಪ್ರತಿನಿತ್ಯ ನೂರಾರು ಜನರ ಬಳಿ ಸಾವಿರಾರು ರೂಪಾಯಿ ಗಳಿಸುತ್ತಿದ್ದ. ಸರ್ಕಾರಿ ನೌಕರಿ , ಸಂಬಳ ಗಳಿಸುತ್ತಲೆ ಸರ್ಕಾರಿ ಮೆಡಿಸಿನ್ ಕದ್ದು ಖಾಸಗಿ ಕ್ಲೀನಿಕ್ ನಡೆಸುತ್ತಿದ್ದ ವಿವೇಕಾನಂದ ಈಗ ಪೋಲೀಸರ ಅತಿಥಿಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದ ನಕಲಿ ವೈದ್ಯ, ವಿವೇಕಾನಂದ ಮೂಲತಃ ಸರ್ಕಾರಿ ನೌಕರನಾಗಿದ್ದು, ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ಇದನ್ನೂ ಓದಿ: https://kannada.news18.com/news/explained/suicide-thoughts-how-where-and-when-to-seek-help-lets-stop-suicide-with-awareness-helpline-numbers-sktv-564761.html
ಇದನ್ನೇ ಜೀವನದ ಬಂಡವಾಳ ಮಾಡಿಕೊಂಡಿರೋ ವಿವೇಕಾನಂದ ಸರ್ಕಾರಿ ಆಸ್ಪತ್ರೆಗೆ ಬರುವ ಔಷಧಿಗಳನ್ನ ಕದ್ದು, ಮನೆಗೆ ಸಾಗಿಸಿ ಅಲ್ಲಿ ಖಾಸಗಿ ಕ್ಲೀನಿಕ್ ನಡೆಸುತ್ತಿದ್ದ. ಇದರ ಖಚಿತ ಮಾಹಿತಿ ಪಡೆದು, ಹಿರಿಯೂರು, ತಹಶಿಲ್ದಾರ್ ಸತ್ಯನಾರಾಯಣ, ತಾಲ್ಲೋಕು ವೈಧ್ಯಾದಿಕಾರಿ ವೆಂಕಟೇಶ್, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಸೇರಿ ಜಂಟಿ ಕಾರ್ಯಚರಣೆ ಮೂಲಕ ರಾತ್ರಿ ನಕಲಿ ವೈದ್ಯ ಸರ್ಕಾರಿ ಆಸ್ಪತ್ರೆ ಫಾರ್ಮಸಿಸ್ಟ್ ವಿವೇಕಾನಂದ ನ ಖಾಸಗಿ ಕ್ಲೀನಿಕ್ ಬಂದ್ ಮಾಡಿ, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ದಾಳಿ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಬಳಸುತ್ತಿದ್ದ ,ಇಂಜಕ್ಷನ್, ಮಾತ್ರೆಗಳು, ಗ್ಲೂಕೋಸ್ ಬಾಟಲ್, ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಔಷದಿಗಳು ಪತ್ತೆಯಾಗಿದ್ದು, ಅವುಗಳನ್ನ ಸೀಜ್ ಮಾಡಿ, ಆರೋಪಿ ಬಳಿ ಇದ್ದ 1ಲಕ್ಷದ.36 ಸಾವಿರದ 860 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಸದ್ಯ ಸರ್ಕಾರಿ ಕೆಲಸ ಸಂಬಳ ಗಿಟ್ಟಿಸಿಕೊಂಡು, ಸರ್ಕಾರಕ್ಕೆ ಕನ್ನ ಹಾಕಿ ಬಡ ರೋಗಿಗಳಿಗೆ ಸಿಗಬೇಕಾದ ಔಷಧಿ ಗಳನ್ನ ಕದ್ದು ಕ್ಲೀನಿಕ್ ನಡೆಸಿ ಆದಾಯ ಗಳಿಸುತ್ತಿದ್ದ ನಕಲಿ ವೈದ್ಯ ವಿವೇಕಾನಂದ ಪೋಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ