ಚಾಮರಾಜನಗರ: ಪ್ರಾಣವನ್ನು ಲೆಕ್ಕಿಸದೇ ಕೊರೋನಾ ರೋಗಿಯ ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್​ಐ ಕಾರ್ಯಕರ್ತರು

ಅಂತ್ಯಕ್ರಿಯೆ ನೆರವೇರಿಸಿದ ನಂತರ ಅವರು ಜಿಲ್ಲಾಸ್ಪತ್ರೆಗೆ ಬಂದು ಪಿಪಿಇ ಕಿಟ್​ಗಳನ್ನು ವೈಜ್ಷಾನಿಕವಾಗಿ ಕಳಚಿ, ಸ್ಯಾನಿಟೈಸ್ ಮಾಡಿಕೊಂಡು ಮನೆಗೆ ತೆರಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರು ದಿನಗಳ ಕಾಲ ಹೋಂ ಕ್ವಾರಂಟೈನ್​​ನಲ್ಲಿ ಇರಲು ಅವರು ನಿರ್ಧರಿಸಿದ್ದಾರೆ.

news18-kannada
Updated:July 12, 2020, 3:44 PM IST
ಚಾಮರಾಜನಗರ: ಪ್ರಾಣವನ್ನು ಲೆಕ್ಕಿಸದೇ ಕೊರೋನಾ ರೋಗಿಯ ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್​ಐ ಕಾರ್ಯಕರ್ತರು
ಚಾಮರಾಜನಗರ: ಪ್ರಾಣವನ್ನು ಲೆಕ್ಕಿಸದೇ ಕೊರೋನಾ ರೋಗಿಯ ಅಂತ್ಯಸಂಸ್ಕಾರ ನೆರವೇರಿಸಿದ ಪಿಎಫ್​ಐ ಕಾರ್ಯಕರ್ತರು
  • Share this:
ಚಾಮರಾಜನಗರ(ಜು.12): ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ  ಕೋವಿಡ್-19 ವೈರಸ್​ಗೆ ಬಲಿಯಾದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲಾಗಿದೆ. ಆರೋಗ್ಯ ಇಲಾಖೆ, ನಗರಸಭೆ ಸಿಬ್ಬಂದಿ ಜೊತೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸ್ವಯಂಸೇವಕರು ಅಂತ್ಯಕ್ರಿಯೆಗೆ ಸಾಥ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಕೊಳ್ಳೇಗಾಲ ತಾಲೂಕು ಕಾಮಗೆರೆಯ 58 ವರ್ಷದ  ವ್ಯಕ್ತಿಯೊಬ್ಬರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದಕ್ಕೂ ಮೊದಲು ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಸಾವನ್ನಪ್ಪಿದ್ದರು. ಬಳಿಕ ಕೋವಿಡ್​-19 ರಿಪೋರ್ಟ್​ನಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಮೃತವ್ಯಕ್ತಿಯ ಶವವನ್ನು ಚಾಮರಾಜನಗರಕ್ಕೆ ಶನಿವಾರ ರಾತ್ರಿ ಆ್ಯಂಬುಲೆನ್ಸ್ ಮೂಲಕ ತಂದು ಸರ್ಕಾರಿ ಮಾರ್ಗಸೂಚಿಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆಂದೇ ಜಿಲ್ಲಾಡಳಿತ ಚಾಮರಾಜನಗರದ ಯಡಬೆಟ್ಟದ ಬಳಿ ಎರಡು ಎಕರೆ ಭೂಮಿ ಮೀಸಲಿಟ್ಟಿದೆ. ನಿಗದಿತ ಭೂಮಿಯುಲ್ಲಿ ಎಂಟು ಅಡಿ ಆಳ 3 ಅಡಿ ಅಗಲ ಗುಂಡಿ ತೆಗೆದು ಮೃತವ್ಯಕ್ತಿಯನ್ನು ಹೂಳುವ ಮೂಲಕ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಹೂಳುವ ಮೊದಲು ಗುಂಡಿಯನ್ನು ಸ್ಯಾನಿಟೈಸ್ ಮಾಡಲಾಯ್ತು. ಹಾಗೆಯೇ ಸುರಕ್ಷಾ ಕವಚದಲ್ಲಿ ಪ್ಯಾಕ್ ಮಾಡಲಾಗಿದ್ದ ಮೃತದೇಹಕ್ಕು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ನಂತರ ಹೂಳಲಾಯ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆರು ಮಂದಿ ಸ್ವಯಂ ಸೇವಕರು ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ನಗರಸಭೆಯ 15 ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಹದಿನೈದು ಮಂದಿಯು ಸಹ ಪಿಪಿಇ ಕಿಟ್ ಧರಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಂಟು ಅಡಿ ಆಳದಲ್ಲಿ ಮೃತದೇಹ ಹೂಳುವ ಮೂಲಕ  ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಿದರು.

ಇತ್ತೀಚೆಗೆ ಬಳ್ಳಾರಿ, ಯಾದಗಿರಿ ಸೇರಿದಂತೆ ವಿವಿಧೆಡೆ ಕೋವಿಡ್-19ನಿಂದ ಮೃತಪಟ್ಟವರ ದೇಹಗಳನ್ನು ದರದರನೆ ಎಳೆದೊಯ್ದು ಅಮಾನವೀಯವಾಗಿ ಗುಂಡಿಗೆ ಎಸೆದು ಅಂತ್ಯಕ್ರಿಯೆ ನಡೆಸಿದ್ದ ಪ್ರಕರಣಗಳು ಭಾರೀ ಟೀಕೆಗೆ ಒಳಗಾಗಿದ್ದವು. ಈ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಟೀಕೆಗೆ ಆಸ್ಪದವಾಗದಂತೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾದರಿಯಾಗಿದೆ. ಇದಕ್ಕೆ ಸಾಥ್ ನೀಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಯಂ ಸೇವಕರು ಸಾರ್ವಜನಿಕರ ಪ್ರಶಂಸೆಗೆ  ಪಾತ್ರರಾಗಿದ್ದಾರೆ.

ಅಂತ್ಯಕ್ರಿಯೆ ನೆರವೇರಿಸಿದ ನಂತರ ಅವರು ಜಿಲ್ಲಾಸ್ಪತ್ರೆಗೆ ಬಂದು ಪಿಪಿಇ ಕಿಟ್​ಗಳನ್ನು  ವೈಜ್ಷಾನಿಕವಾಗಿ ಕಳಚಿ, ಸ್ಯಾನಿಟೈಸ್ ಮಾಡಿಕೊಂಡು  ಮನೆಗೆ ತೆರಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರು ದಿನಗಳ ಕಾಲ ಹೋಂ ಕ್ವಾರಂಟೈನ್​​ನಲ್ಲಿ ಇರಲು ಅವರು ನಿರ್ಧರಿಸಿದ್ದಾರೆ.

ಬಳ್ಳಾರಿ, ಯಾದಗಿರಿಯಯಲ್ಲಿ ನಡೆದ ಪ್ರಕರಣಗಳನ್ನು ನೋಡಿ ಬಹಳ ಬೇಸರವಾಗಿತ್ತು.  ಮೃತಪಟ್ಟವರು ಯಾವುದೇ ಜಾತಿ, ಧರ್ಮಕ್ಕೆ ಸೇರಿರಲಿ, ಜಾತಿಬೇಧ ಮರೆತು ಯಾರ ಭಾವನೆಗಳಿಗು ಧಕ್ಕೆ ಬಾರದಂತೆ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಅಪೇಕ್ಷೆಪಟ್ಟು ನಮ್ಮ ಸಂಘಟನೆಯ ಸ್ವಯಂ ಸೇವಕರು ಈ ಅಂತ್ಯಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎನ್ನುತ್ತಾರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಜಿಲ್ಲಾಧ್ಯಕ್ಷ ಕಾಫೀಲ್  ಅಹಮದ್.ನಿನ್ನೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಒಳ್ಳೆಯ ರೀತಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದೇವೆ ಎಂಬ ಧನ್ಯತಾಭಾವ ಇದೆ ಎಂದು ಅವರು ನ್ಯೂಸ್ 18 ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಕೊಡಗಿನಲ್ಲಿ ಮಾರಕ ಕೊರೋನಾಗೆ ಎರಡನೇ ಬಲಿ: ಸೋಂಕಿತರ ಸಂಖ್ಯೆ 156ಕ್ಕೆ ಏರಿಕೆ

ಕೋವಿಡ್ -19 ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ನಮ್ಮ ಸ್ವಯಂಸೇವಕರು ದೈಹಿಕವಾಗಿ ಸದೃಢವಾಗಿದ್ದಾರೆ, ಮಾನಸಿಕವಾಗಿಯು ಸಿದ್ದರಾಗಿದ್ದಾರೆ ಎಂಬುದನ್ನು ಡಿಹೆಚ್​ಓ ಅವರನ್ನು ಭೇಟಿ ತಿಳಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಈಗಾಗಲೇ ಪತ್ರ ಬರದು ತಿಳಿಸಿದ್ದೆವು. ನಮ್ಮ ಸ್ವಯಂ ಸೇವಕರಿಗೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಹೇಗೆ ಅಂತ್ಯ ಸಂಸ್ಕಾರ  ನಡೆಸಬೇಕು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯಿಂದ  ಎರಡು ದಿನದ ತರಬೇತಿಯು ಆಗಿದೆ. ನಿನ್ನೆ ಜಿಲ್ಲಾಡಳಿತದಿಂದ ಕರೆ ಬಂದ ಮೇರೆಗೆ ಹೋಗಿ ಮೃತವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಾಥ್ ನೀಡಿದ್ದೇವೆ  ಎಂದು ಅವರು  ಕಾಫೀಲ್ ಅಹಮದ್  ತಿಳಿಸಿದ್ದಾರೆ.
Published by: Ganesh Nachikethu
First published: July 12, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading