ಹೃದಯಾಘಾತದಿಂದ ಸತ್ತ ವ್ಯಕ್ತಿಗೆ ಕೊರೊನಾ ವದಂತಿ; ಅಂತ್ಯ ಸಂಸ್ಕಾರಕ್ಕೆ ಮುಂದಾಗದ ಜನ

ಮೇ 28 ಕ್ಕೆ ನೆಕ್ಕಿಲ್ಲಾಡಿ ಮನೆಯಲ್ಲೇ ಕುಸಿದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಆದರೆ ಈತ ಸಾವನ್ನಪ್ಪಿದ ಸುದ್ದಿಗೆ ಆವಾಗಲೇ ರೆಕ್ಕೆ ಪುಕ್ಕಗಳನ್ನು ಕಟ್ಟಿದ ವದಂತಿಗಳು ಹರಿದಾಡಲಾರಂಭಿಸಿತ್ತು.

ಪುತ್ರೂರು

ಪುತ್ರೂರು

  • Share this:
ಪುತ್ತೂರು(ಮೇ 30): ಕೊರೊನಾ ಜನರನ್ನು ಯಾವ ರೀತಿ ಭಯಭೀತರನ್ನಾಗಿ ಮಾಡಿದೆ ಎಂದರೆ ಇದು ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಹಂತಕ್ಕೆ ತಲುಪಿಸಿದೆ. ಹೌದು ಇಂಥದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ.

ಉಪ್ಪಿನಂಗಡಿಯ ಹೋಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ವಿಪರೀತ ಕುಡಿತದ ವ್ಯಸನಕ್ಕೆ ಬಲಿಯಾಗಿ ಮೇ 28 ರಂದು ಮೃತಪಟ್ಟಿದ್ದರು. ಈತ ಮೂಲತ ಉಡುಪಿ ಜಿಲ್ಲೆಯವನಾಗಿದ್ದು, ಲಾಕ್ ಡೌನ್ ಘೋಷಣೆಯಾದ ಬಳಿಕ ಆತ ತನ್ನ ಊರಾದ ಉಡುಪಿಗೆ ತೆರಳಲಾಗದೆ, ಹೋಟೆಲ್ ಕೂಡಾ ಬಂದ್ ಆದ ಕಾರಣಕ್ಕಾಗಿ ತನ್ನ ಪರಿಚಯದ ವ್ಯಕ್ತಿಯ ಮನೆಯಲ್ಲೇ ತಂಗಿದ್ದ. ನೆಕ್ಕಿಲ್ಲಾಡಿ ಎಂಬಲ್ಲಿ ತಂಗಿದ್ದ ಈತನಿಗೆ ವಿಪರೀತ ಕುಡಿಯುವ ಚಟವೂ ಇದ್ದ ಕಾರಣ ಆನಾರೋಗ್ಯ ಈತನನ್ನು ಹಿಂದಿನಿಂದಲೇ ಕಾಡುತ್ತಿತ್ತು. ಈ ನಡುವೆ ಮೇ 28 ಕ್ಕೆ ಆತ ವಾಸವಿದ್ದ ನೆಕ್ಕಿಲ್ಲಾಡಿ ಮನೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಆದರೆ ಈತ ಸಾವನ್ನಪ್ಪಿದ ಸುದ್ದಿಗೆ ಆವಾಗಲೇ ರೆಕ್ಕೆ ಪುಕ್ಕಗಳನ್ನು ಕಟ್ಟಿದ ವದಂತಿಗಳು ಹರಿದಾಡಲಾರಂಭಿಸಿತು. ಸತ್ತ ವ್ಯಕ್ತಿಗೆ ವಿಪರೀತ ಜ್ವರವಿತ್ತು, ಕೊರೊನಾ ಭಾಧಿಸಿತ್ತು ಎನ್ನುವ ಊಹಾಪೋಹಗಳು ಹರಿದಾಡಲಾರಂಭಿಸಿತ್ತು. ಇದರಿಂದಾಗಿ ಮೃತಪಟ್ಟ ವ್ಯಕ್ತಿಯ ಶವವನ್ನು ಸಂಸ್ಕಾರ ಮಾಡಲೂ ಯಾರೂ ಆ ಮನೆಯತ್ತ ತೆರಳಿಲ್ಲ.

ಇದನ್ನೂ ಓದಿ: ಮಹಾ ಮುಖಭಂಗ: ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಜಲಾಷಯಗಳು ಕಾರಣವಲ್ಲ: ತಜ್ಞರ ಸಮಿತಿ ಸ್ಪಷ್ಟನೆ

ಮೇ 28 ಮಧ್ಯಾಹ್ನದ ವೇಳೆ ಈತ ಮೃತಪಟ್ಟಿದ್ದು, ಈತನ ಶವ ರಾತ್ರಿ 11 ರವರೆಗೂ ಮನೆಯಲ್ಲೇ ಉಳಿದಿತ್ತು. ಮೃತದೇಹವನ್ನು ಹೊರಗೆ ಸಾಗಿಸಲು ಯಾವುದೇ ವ್ಯವಸ್ಥೆಯಿಲ್ಲದೆ ಕೊನೆಯ ಪ್ರಯತ್ನವಾಗಿ ಉಪ್ಪಿನಂಗಡಿ ಪೋಲೀಸ್ ಠಾಣೆಯನ್ನು ಸಂಪರ್ಕಿಸಲಾಗಿತ್ತು. ಮೃತ ವ್ಯಕ್ತಿಯ ಸಾವಿನ ಕುರಿತ ಊಹಾಪೋಹಗಳನ್ನೇ ನಿಜವೆಂದು ನಂಬಿದ ಆಶಾ ಕಾರ್ಯಕರ್ತೆಯರು ಈ ವಿಚಾರವನ್ನು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಕೊರೊನಾ ಭಯದಿಂದ ಯಾರೂ ಮನೆಯ ಕಡೆ ಮುಖ ಮಾಡದ ಸಂದರ್ಭದಲ್ಲಿ ಉಪ್ಪಿನಂಗಡಿ ಠಾಣೆಯ ಸಬ್ ಇನ್ಸ್​ಪೆಕ್ಟರ್ ಈರಯ್ಯ ಮುತುವರ್ಜಿವಹಿಸಿ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಪುತ್ತೂರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.

ಪೋಲೀಸ್ ಸಿಬ್ಬಂದಿಗೆ ನೀಡಲಾಗುವ ಪಿಪಿಇ ಕಿಟ್ ಅನ್ನು ಅಂಬ್ಯುಲೆನ್ಸ್ ಚಾಲಕನಿಗೆ ನೀಡಿ ಮೃತ ವ್ಯಕ್ತಿ ತಂಗಿದ್ದ ಮನೆಯಾತನ ಜೊತೆ ಪುತ್ತೂರಿಗೆ ಕಳುಹಿಸಲಾಗಿತ್ತು. ಪುತ್ತೂರಿನಿಂದ ಪುನ ಮೃತದೇಹವನ್ನು ಮಂಗಳೂರು ಆಸ್ಪತ್ರೆ ಸಾಗಿಸಲಾಯಿತು. ಮಂಗಳೂರಿನಿಂದ ಪುನಃ ಪುತ್ತೂರಿಗೇ ಮೃತದೇಹವನ್ನು ಕಳುಹಿಸಲಾಗಿತ್ತು. ಬಳಿಕ ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದಾಗ ಸಾವಿಗೆ ಹೃದಯಾಘಾತ ಕಾರಣ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಾಲ್ವರು ಕೊರೋನಾ ಸೋಂಕಿತರು ಗುಣಮುಖ: ಹೂಮಳೆ ಸುರಿಸಿ ಆಸ್ಪತ್ರೆಯಿಂದ ಬೀಳ್ಕೊಟ್ಟ ಜಿಲ್ಲಾಡಳಿತ

ಕೊರೊನಾ ಎನ್ನುವ ಭಯದ ಕಾರಣಕ್ಕಾಗಿ ಊರಿನ ಯಾವೊಬ್ಬ ವ್ಯಕ್ತಿಯೂ ವ್ಯಕ್ತಿಯ ಹತ್ತಿರ ಸುಳಿದಿಲ್ಲ. ಅಲ್ಲದೆ ಕೇವಲ ವದಂತಿಗಳನ್ನೇ ಸೃಷ್ಟಿಸಿ ಸಹಾಯಕ್ಕಾಗಿ ಬರುವವರನ್ನೂ ಬರದಂತೆ ಮಾಡಲಾಗಿದೆ. ಇತರ ಅನಾರೋಗ್ಯಕ್ಕೆ ಒಳಗಾಗಿ ಸತ್ತವರಿಗೂ ಕೊರೊನಾ ಎನ್ನುವ ವದಂತಿಗಳಿಂದಾಗಿ ಸತ್ತವರ ಸಂಸ್ಕಾರವನ್ನೂ ಸರಿಯಾಗಿ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

First published: