ಮೂರು ವರ್ಷಗಳಿಂದಲೂ ಮುಂದುವರಿದ ಕಾಮಗಾರಿ ; ಜನರಿಗೆ ನಿತ್ಯ ಜಲ್ಲಿಕಲ್ಲು ರಾಶಿಯಲ್ಲಿ ಅಡ್ಡಾಡುವ ನರಕ

2017ರಲ್ಲಿ 1.98 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆಗ ರಸ್ತೆ ಕಾಮಗಾರಿ ಆರಂಭ ಮಾಡಿದ ಗುತ್ತಿಗೆದಾರ ಅಲ್ಪಸ್ವಲ್ಪ ರಸ್ತೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದಾನೆ

ರಸ್ತೆ ಕಾಮಗಾರಿಗೆ ಜಲ್ಲಿ ಹಾಕಿ ಬಿಟ್ಟಿರುವುದು

ರಸ್ತೆ ಕಾಮಗಾರಿಗೆ ಜಲ್ಲಿ ಹಾಕಿ ಬಿಟ್ಟಿರುವುದು

  • Share this:
ಗದಗ(ಡಿಸೆಂಬರ್​. 08): ಜಿಲ್ಲೆಯ ಗಜೇಂದ್ರಗಡ ತಾಲೂಕಿನ ವೀರಾಪುರ ಗ್ರಾಮದ ಜನರ ದುಸ್ಥಿತಿ ಹೇಳತ್ತಿರದ್ದಾಗಿದೆ‌. ವೀರಾಪುರ ಗ್ರಾಮದಿಂದ ಗಜೇಂದ್ರಗಡ, ಗದಗ, ಹುಬ್ಬಳ್ಳಿ ಸೇರಿದಂತೆ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಹೋಗಬೇಕಾದ್ರೆ, ಇದೇ ರಸ್ತೆಯಲ್ಲಿ ಹೋಗಬೇಕು. ಕೇವಲ ಎರಡು ಕಿಲೋ ಮೀಟರ್ ರಸ್ತೆ ಕಾಮಗಾರಿ ಮುಗಿಸಲು ಗುತ್ತಿಗೆದಾರ ಮೂರು ವರ್ಷವನ್ನು ತೆಗೆದುಕೊಂಡಿದ್ದಾನೆ. ಆದರೂ, ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ. ರಸ್ತೆ ಕಾಮಗಾರಿಗೆ ತಂದ ಸಿಮೆಂಟ್ ಸಹ ಗಟ್ಟಿಯಾಗಿ ಹಾಳಾಗಿದ್ದು, ಅಮರಗೊಂಡಪ್ಪ ಎನ್ನುವ ಗುತ್ತಿಗೆದಾರ ಮಾತ್ರ ನಾಪತ್ತೆಯಾಗಿದ್ದಾನೆ. ಇಂತಹ ರಸ್ತೆಯಲ್ಲಿ ಸಂಚಾರ ಮಾಡಿ ಗ್ರಾಮದ ಹಲವು ಜನರು ಬಿದ್ದು ಗಾಯಗೊಂಡಿದ್ದಾರೆ. ಕಾಮಗಾರಿ ಮುಗಿಸುವಂತೆ ಹಲವಾರು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ನಮ್ಮ ಗ್ರಾಮ, ನಮ್ಮ ರಸ್ತೆ, ಗಾಂಧಿ ಪಥ ಗ್ರಾಮಪಥ ಯೋಜನೆ ಅಡಿಯಲ್ಲಿ  2017ರಲ್ಲಿ 1.98 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆಗ ರಸ್ತೆ ಕಾಮಗಾರಿ ಆರಂಭ ಮಾಡಿದ ಗುತ್ತಿಗೆದಾರ ಅಲ್ಪಸ್ವಲ್ಪ ರಸ್ತೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರ ಮಾತ್ರ ಗ್ರಾಮಸ್ಥರ ಕೈಗೆ ಸಿಗುತ್ತಿಲ್ಲ. ಅಂದು ಕಾಮಗಾರಿಗೆ ತಂದ ಸಿಮೆಂಟ್ ಸಹ ಹಾಳಾಗಿದ್ದು, ರಸ್ತೆ ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇದನ್ನೂ ಓದಿ ಮನೆಯಲ್ಲಿಯೇ ನೇಣಿಗೆ ಶರಣಾದ ಅಕ್ಕ-ತಂಗಿಯರು ; ಸಹೋದರಿಯರ ಸಾವು ನಿಗೂಢ

ವೀರಾಪುರ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ನಾವು ಸಹ ಗುತ್ತಿಗೆದಾರ ಅಮರಗೊಂಡಪ್ಪನಿಗೆ ವಾರ್ನ್ ಮಾಡಿದ್ದೇವೆ. ಆತ ನಮ್ಮ ಪೋನ್ ಕಾಲ್ ಸಹ ರಿಸೀವ್ ಮಾಡುತ್ತಿರಲ್ಲಿಲ್ಲ. ಈಗ ಸಂಪರ್ಕಕ್ಕೆ ಸಿಕಿದ್ದು, ಇನ್ನೂ ಒಂದು ವಾರದಲ್ಲಿ ಕಾಮಗಾರಿ ಮುಗಿಸದಿದ್ರೆ ಆತನನ್ನು ಕಪ್ಪು ಪಟ್ಟಿಗೆ ಸೇರುಸುತ್ತೇವೆ ಎಂದು ಗದಗ ಎಇಇ ಎಮ್ ಎಸ್ ದಿವಟರ್ ಹೇಳುತ್ತಾರೆ.

ಇಂತಹ ಬೇಜವಾಬ್ದಾರಿ ಗುತ್ತಿಗೆದಾರರ ಮೇಲೆ ಸೂಕ್ತವಾದ ಕ್ರಮ ಕೈಗೊಂಡು. ಕುಂಟುತ್ತಾ ಸಾಗಿರುವ ಕಾಮಗಾರಿಗೆ ಆದಷ್ಟು ಬೇಗ ಮುಕ್ತಿ ಹಾಡಿ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
Published by:G Hareeshkumar
First published: