ಬೆಳಗಾವಿ; ಧಾರಾಕಾರ ಮಳೆಗೆ ಕೆಸರು ಗದ್ದೆಗಳಾದ ಕೃಷಿ ಭೂಮಿ; ನೀರು ಹೊರಹಾಕಲು ಗದ್ದೆಗಳಿಗೆ ಪಂಪ್ ಸೆಟ್

ಕೆಲವು ರೈತರು ಸವಳು ಜವಳಿನ ಸಮಸ್ಯೆಯಿಂದಾಗಿ  ಕಂಗೆಟ್ಟು ಹೋಗಿದ್ದು ಪ್ರತಿಬಾರಿಯೂ ಸರ್ಕಾರಗಳು ಮೂಗಿಗೆ ತುಪ್ಪ ಒರೆಸೋ ಕೆಲಸ ಮಾಡ್ತಿವೆ ಹೊರತು ಈ ಸಮಸ್ಯೆಗಳಿಗೆ ಪರಿಹಾರ ಹುಡುಕೊ ಕೆಲಸ ಮಾಡುತ್ತಿಲ್ಲ ಸರ್ಕಾರ ಸವಳು ಜವಳು ಭೂಮಿಯನ್ನ ಪರಿವರ್ತಿಸಲು ಯೋಜನೆಗಳನ್ನ ರೂಪಿಸಬೇಕಾಗಿದೆ ಅಂತಾರೆ ಇಲ್ಲಿನ ರೈತರು.

ಕೃಷಿಭೂಮಿಗೆ ಪಂಪ್​ಸೆಟ್​ ಅಳವಡಿಸಿರುವುದು.

ಕೃಷಿಭೂಮಿಗೆ ಪಂಪ್​ಸೆಟ್​ ಅಳವಡಿಸಿರುವುದು.

  • Share this:
ಬೆಳಗಾವಿ:  ಪಂಪ್ ಸೆಟ್ ಏನಕ್ಕೆ ಹಚ್ತಾರೆ. ಬಾವಿಗೋ ಅಥವಾ ಆಳವಾದ ಜಾಗದಲ್ಲಿ ನೀರಿರೋ ಗುಂಡಿಗೋ ಹಚ್ತಾರೆ. ಆದರೆ, ಈ ಭಾಗದ ರೈತರು ಮಾತ್ರ ತಮ್ಮ ಗದ್ದೆಗಳಿಗೆ ಪಂಪಸೆಟ್ ಅಳವಡಿಸುತ್ತಿದ್ದಾರೆ. ಅದಕ್ಕೆ ಕಾರಣ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹೌದು ಉತ್ತರ ಕರ್ನಾಟಕದಾದ್ಯಂತ ಸುರಿಯುತ್ತಿರುವ ಉತ್ತರದ ಮಳೆ ಸಧ್ಯ ರೈತರಿಗೆ ಹಾಗೂ ಜನ ಸಮಾನ್ಯರಿಗೆ ಪ್ರಶ್ನೆಯಾಗಿ ಕಾಡ್ತಿದೆ. ಎಲ್ಲಂದರಲ್ಲಿ ನೀರು ನಿಂತು ಗದ್ದೆಯಾವುದು, ಕೆರೆ ಯಾವುದು ಅಂತ ಗೊತ್ತಾಗುತ್ತಿಲ್ಲ. ಸಧ್ಯ ಬೆಳಗಾವಿ ಹಾಗೂ ಚಿಕ್ಕೋಡಿ ಉಪವಿಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ.‌ ಬೆಳೆದ ಬೆಳೆ ಕೈಗೆ ಬಂದು ಇನ್ನೆನು ವರ್ಷದ ಫಲ ಕಾಂಚಾಣವಾಗಿ ಕೈ ಸೇರಬೇಕು ಎನ್ನುವಷ್ಟರಲ್ಲಿ ಮಳೆ ಸುರಿದು ಬೆಳೆದ ಬೆಳೆ ನೀರಿನಲ್ಲಿ ತೇಲಿ ರೈತರು ಕಂಡ ಕನಸುಗಳು ವರ್ಷವಿಡಿ ಹಾಕಿದ ಪರಿಶ್ರಮ ಎಲ್ಲವನ್ನೂ ಸಹ ಅಕಾಲಿಕ ಮಳೆ ಕಿತ್ತುಕೊಂಡಿದೆ.

ಬೆಳಗಿನಿಂದ ಕುಳಿತು ರಾತ್ರಿಯೆಲ್ಲ ಪಂಪಸೆಟ್ ಮೂಲಕ ನೀರು ಹೊರಹಾಕಿದ್ರೂ ಸಹ ಗದ್ದೆಯಿಂದ ನೀರು ಹೊರ ಹಾಕೋಕೆ ಆಗ್ತಿಲ್ಲ. ಒಂದು ಕಡೆ ಬೆಳೆದ ಬೆಳೆ ನೀರುಪಾಲಾಗಿ ಕೈ ಕೊಟ್ಟು ಹೋದ್ರೆ ಇನ್ನೊಂದು ಕಡೆ ಬೆಳಗಾವಿ ಭಾಗದಲ್ಲಿ ಅದರಲ್ಲೂ ಸಹ ಸವದತ್ತಿ ತಾಲೂಕಿನಾದ್ಯಂತ ಹೆಚ್ಚು ಮಳೆಯಾಗಿ  ಹಳ್ಳ ಕೊಳ್ಳಗಳು ಮೈದುಂಬಿಕೊಂಡಿದ್ದು ಜನ ಹಳ್ಳ ದಾಟಲು ಹೋಗಿ ಪರದಾಡಿದ ಪರಿಸ್ಥಿತಿಯೂ ತಪ್ಪಿಲ್ಲ.

ಇನ್ನು ಚಿಕ್ಕೋಡಿ, ನಿಪ್ಪಾಣಿ, ಹಾಗೂ ಕಾಗವಾಡ ತಾಲೂಕಿನ ರೈತರು ಮಳೆಯಿಂದ ರೋಸಿ ಹೋಗಿದ್ದಾರೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗದ್ದೆಗಳು ಕೆರೆಗಳಾಗಿ ಮಾರ್ಪಟ್ಟಿವೆ, ಹೊಲದಲ್ಲಿನ ಮಳೆ  ನೀರು ಹೊರ ಹಾಕಲು ರೈತರು ಪಂಪ ಸೆಟ್ ಮೊರೆ ಹೊದ್ದಾರೆ. ಸತತವಾಗಿ ಮಳೆ ನೀರು ಗ್ಗೆಯಲ್ಲೆ ಉಳಿದರೆ ಹೊಲಗಳು ಸವಳು ಭೂಮಿಯಾಗುತ್ತವೆ ಅನ್ನೋದು ರೈತರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Karnataka Band - ಸೆ. 28ರಂದು ಕರ್ನಾಟಕ ಬಂದ್; ಸೆ. 25, ಪ್ರತಿಭಟನೆಗೆ ಸೀಮಿತ: ರೈತ ಸಂಘಟನೆಗಳ ನಿರ್ಧಾರ

ಕೆಲವು ರೈತರು ಸವಳು ಜವಳಿನ ಸಮಸ್ಯೆಯಿಂದಾಗಿ  ಕಂಗೆಟ್ಟು ಹೋಗಿದ್ದು ಪ್ರತಿಬಾರಿಯೂ ಸರ್ಕಾರಗಳು ಮೂಗಿಗೆ ತುಪ್ಪ ಒರೆಸೋ ಕೆಲಸ ಮಾಡ್ತಿವೆ ಹೊರತು ಈ ಸಮಸ್ಯೆಗಳಿಗೆ ಪರಿಹಾರ ಹುಡುಕೊ ಕೆಲಸ ಮಾಡುತ್ತಿಲ್ಲ ಸರ್ಕಾರ ಸವಳು ಜವಳು ಭೂಮಿಯನ್ನ ಪರಿವರ್ತಿಸಲು ಯೋಜನೆಗಳನ್ನ ರೂಪಿಸಬೇಕಾಗಿದೆ ಅಂತಾರೆ ಇಲ್ಲಿನ ರೈತರು.

ಒಟ್ಟಿನಲ್ಲಿ ಕಳೆದ ಬಾರಿಯೂ ಸಹ ದೊಡ್ಡ ಪ್ರವಾಹದಲ್ಲಿ ರೈತಾಪಿ ವರ್ಗ ಬೆಳೆದ ಬೆಳೆ ಕಳೆದುಕೊಂಡು ಪರದಾಡಿತ್ತು. ಈ ಬಾರಿಯೂ ಸಹ ಅಕಾಲಿಕ ಮಳೆಯಿಂದ ರೈತರು ಪೇಚಿಗೆ ಸಿಲುಕಿದ್ದು ಸರ್ಕಾರ ಇದಕ್ಕೆಲ್ಲ ಶಾಶ್ವತ ಪರಿಹಾರ ಹುಡುಕೊ ಕೆಲಸ ಮಾಡಬೇಕಿದೆ.
Published by:MAshok Kumar
First published: