ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಗೆ ನೀಡಲು ವಿರೋಧ; ಕಟ್ಟಡಕ್ಕೆ ಬೀಗ ಜಡಿದು ಪ್ರತಿಭಟನೆ
ದಾವಣಗೆರೆಯ ಲೋಕಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಖಾಸಗಿ ವೈದ್ಯಕೀಯ ಶಿಕ್ಷಣ ಸಂಶೋಧನೆ ವಿದ್ಯಾಲಯದ ತರಬೇತಿ ಕೇಂದ್ರವನ್ನಾಗಿ ಮಾಡುವ ಹುನ್ನಾರಕ್ಕೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
news18-kannada Updated:October 24, 2020, 6:49 PM IST

ಲೋಕಿಕೆರೆ ಆಸ್ಪತ್ರೆಯನ್ನು ಖಾಸಗಿಗೆ ನೀಡುವುದಕ್ಕೆ ಗ್ರಾಮಸ್ಥರ ವಿರೋಧ
- News18 Kannada
- Last Updated: October 24, 2020, 6:49 PM IST
ದಾವಣಗೆರೆ: ಲೋಕಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆ ಸುಸಜ್ಜಿತ ಕಟ್ಟಡ ಸೇರಿ ಎಲ್ಲ ಮೂಲ ಸೌಲಭ್ಯ ಹೊಂದಿದೆ. ಈ ಆಸ್ಪತ್ರೆಯ ಕಟ್ಟಡದಲ್ಲಿ ದಾವಣಗೆರೆಯ ಖಾಸಗಿ ವೈದ್ಯಕೀಯ ಶಿಕ್ಷಣ ಸಂಶೋಧನೆ ವಿದ್ಯಾಲಯ ತರಬೇತಿ ಕೇಂದ್ರ ನಡೆಸುವ ಹುನ್ನಾರವನ್ನ ವಿರೋಧಿಸಿ ಆಸ್ಪತ್ರೆಗೆ ಬೀಗ ಜಡಿದು ಸ್ಥಳೀಯ ಜನರು ಪ್ರತಿಭಟನೆ ನಡೆಸಿದರು.
2007ರಲ್ಲಿ ಆಸ್ಪತ್ರೆಯನ್ನ ಉನ್ನತಿಕರಣಗೊಳಿಸಿ ಹೈಟೆಕ್ ಆಸ್ಪತ್ರೆ ಮಾಡುತ್ತೇವೆ. ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಪಂಚಾಯಿತಿ ಸದಸ್ಯರನ್ನ ಈ ಸಂಸ್ಥೆ ದಾರಿ ತಪ್ಪಿಸಿದೆ. ಒಂದೇ ವರ್ಷದ ಗುತ್ತಿಗೆ ಕರಾರನ್ನ ಪ್ರತಿವರ್ಷ ಗ್ರಾಮದ ಕೆಲವರ ಫೋರ್ಜರಿ ಸಹಿ ಮಾಡಿ ಒಪ್ಪಂದಪತ್ರ ಸೃಷ್ಟಿಸಿದೆ. ಕಳೆದ ಹದಿಮೂರು ವರ್ಷಗಳಿಂದ ನಿರಂತರ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಗಮನಕ್ಕೂ ತರದೇ ಒಮ್ಮುಖವಾಗಿ ದಾಖಲೆ ಮಾಡಿಕೊಂಡು ಆಸ್ಪತ್ರೆಯ ಅಭಿವೃದ್ಧಿ ಕಡೆ ಗಮನ ಕೊಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಇದೆ. ಸರ್ಕಾರದ ಆಧೀನದಲ್ಲಿ ಉಚಿತ ಚಿಕಿತ್ಸೆ. ಔಷಧಿ ವಿತರಣೆ, ಗರ್ಭಿಣಿಯರ ಶಸ್ತ್ರಚಿಕಿತ್ಸೆ, ಕಣ್ಣಿನ ಪೊರೆ ತಪಾಸಣೆ ಶಿಬಿರ ಆರೋಗ್ಯ ಶಿಬಿರ ಹೀಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತವೆ. ಆದರೆ, ಸುತ್ತಮುತ್ತಲಿನ ಗ್ರಾಮಗಳ ಜನರು ರೈತರು ಮಹಿಳೆಯರು ಮಕ್ಕಳು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪ್ರತಿ ವರ್ಷ ಗುತ್ತಿಗೆ ನವೀಕರಣಕ್ಕೆ ತಡೆ ಹಿಡಿದು ಯಥಾ ಪ್ರಕಾರ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಾಗೇ ಉಳಿಸಬೇಕು. ಇಲ್ಲಿ ಶವಾಗಾರ ಇದ್ದರೂ ಗ್ರಾಮದ ಯಾರಾದರೂ ಆತ್ಮಹತ್ಯೆ, ಅಪಘಾತದಲ್ಲಿ ಮೃತಪಟ್ಟ ಘಟನೆ ಸಂಭವಿಸಿದರೆ ದಾವಣಗೆರೆ ಸಿ ಜಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ತಂದು ಅಂತ್ಯಕ್ರಿಯೆ ಮಾಡಬೇಕಾದ ಪರಿಸ್ಥಿತಿ ಇದೆ. ಇಷ್ಟು ದೊಡ್ಡ ಆಸ್ಪತ್ರೆಗೆ ಸೂಕ್ತ ವೈದ್ಯರು, ಸಿಬ್ಬಂದಿ. 108ಅಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆನೆ ಮೇಲೆ ಕುಳಿತ ವಿಡಿಯೋ ಪೋಸ್ಟ್ ಮಾಡಿದ್ದ ನಟ ಧನ್ವೀರ್ ವಿರುದ್ಧ ಎಫ್‌ಐಆರ್
ಆಸ್ಪತ್ರೆಯಿಂದ ಎಲ್ಲರನ್ನೂ ಹೊರಗೆ ಕಳುಹಿಸಿ ಬೀಗ ಹಾಕಿದ ಜನರು, ಈ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ಕೊಡದೇ ಸರ್ಕಾರವೇ ವಹಿಸಿಕೊಂಡು ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಕೆ ತಿಪ್ಪಣ್ಣ. ಆರ್ ರಾಮಸ್ವಾಮಿ. ಡಿ ಕೆ ಓಬಳೇಶ್, ಮಾ. ಪಂ ಅಧ್ಯಕ್ಷ ಓಬಳೇಶ್, ಆಶ್ರಯ ಸಮಿತಿ ಸದಸ್ಯ ಬಲ್ಲೂರ ಹನುಮಂತಪ್ಪ, ಕರಿಯಪ್ಪ. ಟಿಹೆಚ್ ಮೂರ್ತಿ. ಪಿ ಹೆಚ್ ಅಂಜಿನಪ್ಪ. ಪತ್ರಕರ್ತ ಪುರಂದರ ಲೋಕಿಕೆರೆ, ಕೋಡಿಹಳ್ಳಿ ಶಿವಣ್ಣ ಕೋತಿ ಕುಭೇರ ಪಿ ಟಿ ಆನಂದ್, ಮಾಜಿ ಸದಸ್ಯ ಸಿದ್ದಪ್ಪ, ವಕೀಲ ಪ್ರದೀಪ್, ಗೋಪಾಲ ಸೇರಿದಂತೆ ಐದುನೂರಕ್ಕೂ ಹೆಚ್ಚು ಗ್ರಾಮಸ್ಥರು ಮಕ್ಕಳು ಯುವಕರು ಪಾಲ್ಗೊಂಡಿದ್ದರು. ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಲಿಖಿತ ಆದೇಶ ಹೊರಡಿಸುವ ತನಕ ಆಸ್ಪತ್ರೆ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ವರದಿ: ಹೆಚ್ ಎಂ ಪಿ ಕುಮಾರ್
2007ರಲ್ಲಿ ಆಸ್ಪತ್ರೆಯನ್ನ ಉನ್ನತಿಕರಣಗೊಳಿಸಿ ಹೈಟೆಕ್ ಆಸ್ಪತ್ರೆ ಮಾಡುತ್ತೇವೆ. ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಪಂಚಾಯಿತಿ ಸದಸ್ಯರನ್ನ ಈ ಸಂಸ್ಥೆ ದಾರಿ ತಪ್ಪಿಸಿದೆ. ಒಂದೇ ವರ್ಷದ ಗುತ್ತಿಗೆ ಕರಾರನ್ನ ಪ್ರತಿವರ್ಷ ಗ್ರಾಮದ ಕೆಲವರ ಫೋರ್ಜರಿ ಸಹಿ ಮಾಡಿ ಒಪ್ಪಂದಪತ್ರ ಸೃಷ್ಟಿಸಿದೆ. ಕಳೆದ ಹದಿಮೂರು ವರ್ಷಗಳಿಂದ ನಿರಂತರ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಗಮನಕ್ಕೂ ತರದೇ ಒಮ್ಮುಖವಾಗಿ ದಾಖಲೆ ಮಾಡಿಕೊಂಡು ಆಸ್ಪತ್ರೆಯ ಅಭಿವೃದ್ಧಿ ಕಡೆ ಗಮನ ಕೊಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಇದೆ.