ಪದೇ ಪದೇ ಭೂಮಿಯಲ್ಲಿ ಕಂಪನ : ನಿಗೂಢತೆಗೆ ಕಂಗಾಲಾದ ಗ್ರಾಮಸ್ಥರು

ಈಗಾಗಲೇ ಮನಗೂಳಿ, ಮಸೂತಿ, ಮಲಘಾಣ, ಎನ್ ಟಿಪಿಸಿ ಟೌನ್ ಶೀಪ್ ನಲ್ಲಿ ಇದೇ ರೀತಿಯ ಸ್ಪೋಟಕ ಸದ್ದು ಕೇಳಿಸಿದ್ದು, ಅದೇ ರೀತಿ ಕೂಡಗಿಯಲ್ಲೂ ಕೂಡ ಆಗಿರಬಹುದು ಎಂದು ಈ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರಲ್ಲಿ ಮಾಹಿತಿ ಪಡೆದ ಭೂ ವಿಜ್ಞಾನಿಗಳ ತಂಡ

ಗ್ರಾಮಸ್ಥರಲ್ಲಿ ಮಾಹಿತಿ ಪಡೆದ ಭೂ ವಿಜ್ಞಾನಿಗಳ ತಂಡ

 • Share this:
  ವಿಜಯಪುರ(ಅಕ್ಟೋಬರ್​. 27): ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ, ಕೂಡಗಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಭಾರಿ ಸದ್ದು ಮತ್ತು ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಗ್ರಾಮಸ್ಖರು ಆತಂಕದಲ್ಲಿರುವಂತೆ ಮಾಡಿದೆ. ನಿನ್ನೆ ರಾತ್ರಿ ಮಸೂತಿ ಗ್ರಾಮದಲ್ಲಿ ಸದ್ದು, ಭೂಮಿ ಕಂಪಿಸಿದ ಅನುಭವವಾಗಿದ್ದು, ನಿನ್ನೆ ರಾತ್ರಿ 9 ರಿಂದ 9.30 ರೊಳಗೆ ಮೂರು ಭಾರಿ ಸ್ಪೋಟದ ಶಬ್ದವೂ ಕೇಳಿಸಿದೆ. ಇದರಿಂದಾಗಿ ಅಡುಗೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದು, ಜನ ಹೊರಗೆ ಓಡಿ ಬಂದಿದ್ದಾರೆ. ಹೀಗೆ ಭೂಮಿ ಕಂಪಿಸಿದ ಅನುಭವದಿಂದ ಗ್ರಾಮಸ್ಥರಲ್ಲಿ ಆತಂಕ ಶುರವಾಗಿದೆ. ಈ ಹಿಂದೆಯೂ ಈ ಗ್ರಾಮದಲ್ಲಿ ಭೂಮಿ ಸ್ಪೋಟಿಸಿದ ಅನುಭವವಾಗಿತ್ತು. ಕಳೆದ ಒಂದು ವಾರದ ಹಿಂದೆ ಮಸೂತಿ ಪಕ್ಕದ ಮಲಘಾಣ, ಕೂಡಗಿ ಗ್ರಾಮದಲ್ಲಿಯೂ ಕೂಡ ಇದೆ ರೀತಿಯಲ್ಲಿ ಸ್ಪೋಟದ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

  ಈ ಮಧ್ಯೆ ಕೂಡಗಿ ಗ್ರಾಮದ ಬಳಿ ಭೂಮಿ ಕಂಪಿಸಿದ ಅನುಭವ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈಗಾಗಲೇ ಮನಗೂಳಿ, ಮಸೂತಿ, ಮಲಘಾಣ, ಎನ್ ಟಿಪಿಸಿ ಟೌನ್ ಶೀಪ್ ನಲ್ಲಿ ಇದೇ ರೀತಿಯ ಸ್ಪೋಟಕ ಸದ್ದು ಕೇಳಿಸಿದ್ದು, ಅದೇ ರೀತಿ ಕೂಡಗಿಯಲ್ಲೂ ಕೂಡ ಆಗಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಈಗಾಗಲೇ ಸ್ಪೋಟಗೊಂಡ ಜಾಗದೆಲ್ಲೆಡೆ ಪರಿಶೀಲನೆ ಮಾಡಲಾಗಿದೆ. ಇದರ ವರದಿಯನ್ನು ಬೆಂಗಳೂರು ಮತ್ತು ಆಲಮಟ್ಟಿಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಕಳುಹಿಲಾಗುವುದು. ಅಲ್ಲಿಂದ ವರದಿ ಬಂದ ಬಳಿಕ ಸತ್ಯಾಸತ್ಯತೆಯ ಸ್ಪಷ್ಟತೆಗೆ ಬರಲಾಗುವುದು ಎಂದು ತಜ್ಞರು ವಿಜಯಪುರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ : ನೆರೆ ಪೀಡಿತ ಪ್ರದೇಶಗಳ ನಿರ್ಲಕ್ಷ್ಯ ಆರೋಪ ; ಕಲಬುರ್ಗಿಯಲ್ಲಿ ವಾಟಾಳ್ ನಾಗರಾಜ್ ಹೋರಾಟ

  ಆರೇಳು ವರ್ಷಗಳ ಹಿಂದೆಯೂ ಮಲಘಾಣ ಗ್ರಾಮದಲ್ಲಿ ಆಗಾಗ ಭೂಮಿ ಕಂಪಿಸುುವ ಅನುಭವಾಗುತ್ತಿದ್ದ ಹಿನ್ನೆಲೆಯಲ್ಲಿ ಆಗ ಕೂಡ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ವಿಜ್ಞಾನಿ ಪ್ರಕಾಶ ನೇತೃತ್ವದ ತಂಡ ಮಲಘಾಣ ಗ್ರಾಮಕ್ಕೆ ಭೇಟಿ ನೀಡಿ ಸಿಸ್ಮೋ ಮೀಟರ್ ಅಳವಡಿಸಿತ್ತು. ಆದರೆ, ಈವರೆಗೂ ಈ ಭಾಗದಲ್ಲಿ ಹೀಗೆ ಭೂಮಿಯೊಳಗಿನಿಂದ ಶಬ್ದ ಕೇಳಿಸುವುದು ಮತ್ತು ಭೂಮಿ ಕಂಪಿಸುವ ಅನುಭವವಾಗುತ್ತಿರುವುದು ಮಾತ್ರ ಈಗಲೂ ಮುಂದುವರೆದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

  ಭೂವಿಜ್ಞಾನಿಗಳು ಮತ್ತು ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಗ್ರಾಮಸ್ಥರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕಾಗಿದೆ.
  Published by:G Hareeshkumar
  First published: