ಯಾರಾದ್ರೂ ಸತ್ರೆ ಸಾಕು, ಈ ಊರಿನ ಜನರಿಗೆಲ್ಲಾ ತಲೆಬಿಸಿ ಶುರುವಾಗುತ್ತೆ...ಯಾದಗಿರಿಯ ಈ ಊರಿನ ಸಮಸ್ಯೆಯೇ ವಿಚಿತ್ರ!

ಕಳೆದ ಒಂದು ವರ್ಷದಿಂದ ಸುಮಾರು 40 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದು ಅಂತ್ಯಕ್ರಿಯೆ ಮಾಡಲು ದಾರಿ ಬಂದ್ ಮಾಡಿದಕ್ಕೆ ಶವ ಹೊತ್ತುಕೊಂಡು ಹೋಗಲು ಆಗದೆ ತಾಂಡಾ ನಿವಾಸಿಗಳು ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯ ತಲೆದೋರಿದೆ.

ಅಂತ್ಯಸಂಸ್ಕಾರಕ್ಕೆ ತೆರಳುತ್ತಿರುವ ತಾಂಡಾದ ಜನ

ಅಂತ್ಯಸಂಸ್ಕಾರಕ್ಕೆ ತೆರಳುತ್ತಿರುವ ತಾಂಡಾದ ಜನ

  • Share this:
ಯಾದಗಿರಿ: ಈ ಊರಲ್ಲಿ ಯಾರಾದರು ಸತ್ತರೆ ಇಡೀ ಊರಿನವರು ಮೃತ ವ್ಯಕ್ತಿಯ ಶವದ ಅಂತ್ಯಕ್ರಿಯೆ ಮಾಡಲು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಸತ್ತರೆ ಊರಿನವರು ಅಂತ್ಯಕ್ರಿಯೆ ಮಾಡಲು ಚಿಂತೆ ಮಾಡುವಂತಾಗಿದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ತಾಂಡಾದಲ್ಲಿ ಅಂತ್ಯಕ್ರಿಯೆ ಮಾಡಲು ಜನರು ಪರದಾಡುವಂತಾಗಿದೆ. ಸರಕಾರ ಬಂಜಾರ ಸಮುದಾಯದವರಿಗೆ ಅಂತ್ಯಕ್ರಿಯೆ ಮಾಡಲು ಸರ್ವೆ ನಂಬರ್ 401 ರಲ್ಲಿ 3 ಎಕರೆ 30  ಗುಂಟೆ  ಭೂಮಿ ರುದ್ರ ಭೂಮಿಗೆ ಮಂಜೂರು ಮಾಡಿತ್ತು. ಮೂರು ಸಾವಿರ ಜನಸಂಖ್ಯೆ ಹೊಂದಿರುವ ತಾಂಡಾದಲ್ಲಿ, ಅಂತ್ಯಕ್ರಿಯೆ ಮಾಡಲು ಜಾಗವಿಲ್ಲದೇ ಜನರು ಪರದಾಡುತ್ತಿರುವದನ್ನು ಅರಿತು ಸರಕಾರ ರುದ್ರ ಭೂಮಿ ಮಂಜೂರು ಮಾಡಿದೆ‌. ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲವೆಂಬಂತೆ ಸರಕಾರ ಸ್ಮಶಾನಕ್ಕೆ ಜಾಗ ನೀಡಿದರು ಖಾಸಗಿ ವ್ಯಕ್ತಿಯೊರ್ವ ಅಂತ್ಯಕ್ರಿಯೆ ಮಾಡಲು ಶವ ತೆಗೆದುಕೊಂಡು ಹೋಗಲು ದಾರಿ ಬಂದ್ ಮಾಡಿದ್ದು ಈಗ ಆ ವ್ಯಕ್ತಿಯೊರ್ವನಿಂದ ಇಡೀ ತಾಂಡಾದ ಜನರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಒಂದು ವರ್ಷದಿಂದ ಅಂತ್ಯಕ್ರಿಯೆ ಮಾಡಲು ದಾರಿ ಬಂದ್ ಮಾಡಲಾಗಿದೆ .

ಕಳೆದ ಒಂದು ವರ್ಷದಿಂದ ಸುಮಾರು 40 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದು ಅಂತ್ಯಕ್ರಿಯೆ ಮಾಡಲು ದಾರಿ ಬಂದ್ ಮಾಡಿದಕ್ಕೆ ಶವ ಹೊತ್ತುಕೊಂಡು ಹೋಗಲು ಆಗದೆ ತಾಂಡಾ ನಿವಾಸಿಗಳು ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯ ತಲೆದೋರಿದೆ. ಜಮೀನು ಇದ್ದವರು ಮೃತ ಪಟ್ಟರೆ  ಎರಡ್ಮೂರು ಕಿಮೀ ದೂರ ಶವ ಹೊತ್ತುಕೊಂಡು ತೆರಳಿ ಅಂತ್ಯಕ್ರಿಯೆ ಮಾಡುವಂತಾಗಿದೆ. ಯಾರಾದರು ಸತ್ತರೆ ಜನರು ಅಂತ್ಯಕ್ರಿಯೆ ಮಾಡಲು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಪ್ರತಿ ಬಾರಿ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ  ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Debit - Credit Card: ಆಗಸ್ಟ್ 1ರಿಂದ ATMನಿಂದ ಹಣ ಡ್ರಾ ಮಾಡಿದಾಗ ಶುಲ್ಕ ತೆರಬೇಕು, RBI ಹೊಸಾ ನಿಯಮ

ಇಂದು ತಾಂಡಾದ ನಿವಾಸಿ ಬಾಬು ಜಾಧವ ಅವರು ಮೃತ ಪಟ್ಟಿದ್ದು  ಸ್ಮಶಾನ ಭೂಮಿಯಲ್ಲಿ  ಅಂತ್ಯಕ್ರಿಯೆ ಮಾಡಲು ತೆರಳಲು ಸಾಧ್ಯವಾಗದೆ ಮೃತ ವ್ಯಕ್ತಿಯ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಗ್ರಾಮದ ಮುಖಂಡ ರಮೇಶ್ ಜಾಧವ್ ಮಾತನಾಡಿ, ತಾಂಡಾದಲ್ಲಿ ಯಾರಾದರು ಸತ್ತರೇ ನಾವು ಯಾವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕುನ್ನುವದೇ ಚಿಂತೆ ಮಾಡುವಂತಾಗಿದೆ. ಸರಕಾರ ಅಂತ್ಯಕ್ರಿಯೆ ಮಾಡಲು ಭೂಮಿ ನೀಡಿದರು ಸ್ಮಶಾನ ಭೂಮಿಗೆ ತೆರಳುವ ರಸ್ತೆ ಮಾರ್ಗ ಖಾಸಗಿ ವ್ಯಕ್ತಿ ಬಂದ್ ಮಾಡುತ್ತಿರುವ ಪರಿಣಾಮ ಶವ ತೆಗೆದುಕೊಂಡು ಹೋಗಲು ಜನರು ಪರದಾಡುತ್ತಿದ್ದು ಸರಕಾರ ಕೂಡಲೇ ಸಮಸ್ಯೆ ಬಗೆ ಹರಿಸಿ ಸ್ಮಶಾನದ ಜಾಗಕ್ಕೆ ಶವ ತೆಗೆದುಕೊಂಡು ಹೋಗಲು ಅನುಕೂಲ ಮಾಡಬೇಕಿದೆ.

ಖಾಸಗಿ ವ್ಯಕ್ತಿ ಬಂದ್ ಮಾಡಿದ ದಾರಿಯು ಸರಕಾರಿ ಜಾಗವಿದೆ ಎಂದು ತಾಂಡಾ ನಿವಾಸಿಗಳ ಮಾತಾಗಿದೆ.ಈ ಬಗ್ಗೆ ಸುರಪುರ ತಹಶಿಲ್ದಾರ ಸುಬ್ಬಣ್ಣ ಜಮಖಂಡಿ  ನ್ಯೂಸ್ 18 ಕನ್ನಡಕ್ಕೆ ಮಾತನಾಡಿ,ಈ ಕುರಿತು ನನ್ನ ಗಮನಕ್ಕೆ ಬಂದಿದ್ದು ಈಗಾಗಲೇ ಸರ್ವೇ ಮಾಡಿದ್ದು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದರು. ಕಳೆದ ಒಂದು ವರ್ಷದಿಂದ ಸುಮಾರು 40 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದು ಅಂತ್ಯಕ್ರಿಯೆ ಮಾಡಲು ದಾರಿ ಬಂದ್ ಮಾಡಿದಕ್ಕೆ ಶವ ಹೊತ್ತುಕೊಂಡು ಹೋಗಲು ಆಗದೆ ತಾಂಡಾ ನಿವಾಸಿಗಳು ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುವ ಅನಿವಾರ್ಯ ತಲೆದೋರಿದೆ. ಈ ಬಗ್ಗೆ ಸುರಪುರ ತಹಶಿಲ್ದಾರ ಸುಬ್ಬಣ್ಣ ಜಮಖಂಡಿ  ನ್ಯೂಸ್ 18 ಕನ್ನಡಕ್ಕೆ ಮಾತನಾಡಿ,ಈ ಕುರಿತು ನನ್ನ ಗಮನಕ್ಕೆ ಬಂದಿದ್ದು ಈಗಾಗಲೇ ಸರ್ವೇ ಮಾಡಿದ್ದು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದರು.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: