Crime News: ನೀರಿನ ಟ್ಯಾಂಕಿನಲ್ಲಿ ಮಹಿಳೆಯ ಶವ ಪತ್ತೆ, 10 ದಿನಗಳಿಂದ ಕೊಳೆತ ಶವದ ನೀರನ್ನೇ ಕುಡಿದ ಗ್ರಾಮಸ್ಥರು

Woman's body parts found in drinking water tank: ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ 9, 10, 11 ನೇ ವಾರ್ಡ್ ನ‌ ಸರಿಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಕೂಡ ಕೊಳೆತ ಶವದ ನೀರನ್ನೇ ಕುಡಿದ್ದಿದ್ದಾರೆ.

ಓವರ್​ಹೆಡ್ ಟ್ಯಾಂಕ್ ಬಳಿ ಪತ್ತೆಯಾದ ಮಹಿಳೆಯ ಚಪ್ಪಲಿ-ಛತ್ರಿ

ಓವರ್​ಹೆಡ್ ಟ್ಯಾಂಕ್ ಬಳಿ ಪತ್ತೆಯಾದ ಮಹಿಳೆಯ ಚಪ್ಪಲಿ-ಛತ್ರಿ

  • Share this:
ಚನ್ನಪಟ್ಟಣ : ಬೊಂಬೆನಗರಿಯ ನಗರದ 3 ವಾರ್ಡ್ ನ‌ ಜನರು ಓವರ್ ಹೆಡ್ ಟ್ಯಾಂಕ್ ನ ನೀರನ್ನ ಕುಡಿಯುತ್ತಿದ್ದರು. ಆದರೆ ಕಳೆದ ಹತ್ತು ದಿನಗಳಿಂದ ಅವರೆಲ್ಲರೂ ಸಹ ಕೊಳೆತ ಶವದ ನೀರನ್ನ ಕುಡಿಯುತ್ತಿದ್ದರು ಎಂಬ ಸುದ್ದಿ ಈಗ ಅವರಿಗೆಲ್ಲ ಶಾಕ್ ನೀಡಿದೆ. ಈಗ ಆ ಬಡಾವಣೆಯ ಜನರು ಕೊರಗುತ್ತಿದ್ದಾರೆ, ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ನಗರದ ಜನತೆ ಆಶ್ಚರ್ಯರಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ. ಹೌದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ 9, 10, 11 ನೇ ವಾರ್ಡ್ ನ‌ ಸರಿಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಕೂಡ ಕೊಳೆತ ಶವದ ನೀರನ್ನೇ ಕುಡಿದ್ದಿದ್ದಾರೆ. ಒಂದು ವಾರಗಳ ಕಾಲ ನೀರು ಹಳದಿ ಬಣ್ಣಕ್ಕೆ ತಿರುಗಿದೆ, ಕೆಟ್ಟ ವಾಸನೆ ಬಂದಿದೆ. ಈ ವಿಚಾರವಾಗಿ ಸ್ಥಳೀಯರು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಗೆ ದೂರು ನೀಡಿದ್ದಾರೆ.

ನಂತರ ಪರಿಶೀಲನೆ ಮಾಡಿದಾಗ  ‌ಕೆಳಭಾಗದಲ್ಲಿ ಇರೋ ಓವರ್ ಹೆಡ್ ಟ್ಯಾಂಕ್ ನ ವಾಲ್ ನಲ್ಲಿ‌ ಮಹಿಳೆಯ ಕಾಲು ಪತ್ತೆಯಾಗಿದೆ. ಚನ್ನಪಟ್ಟಣದ ಮಾರುತಿ ಬಡಾವಣೆಯಲ್ಲಿ ಘಟನೆ ನಡೆದಿದ್ದು ಈ ಭಾಗದ ಜನರು ಆತಂಕದಲ್ಲಿ ಕಾಲಕಳೆದಿದ್ದಾರೆ. ಇನ್ನು ಚನ್ನಪಟ್ಟಣ ನಗರದ 9, 10, 11 ನೇ ವಾರ್ಡ್ ನ ಜನರಿಗೆ ಇದೇ ನೀರು ಪೂರೈಕೆಯಾಗಿದೆ. ಕಳೆದ ಹತ್ತು ದಿನಗಳಿಂದ ಶವ ಇದ್ದ ನೀರನ್ನೇ ಕುಡಿದಿದ್ದಾರೆ. ವಿಚಾರ ತಿಳಿದ ನಂತರ ತಹಶೀಲ್ದಾರ್ ನಾಗೇಶ್ ಗೆ ಮಾಜಿ ಸಿಎಂ, ಹಾಗೂ ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿ 9, 10, 11 ನೇ ವಾರ್ಡ್ ನ‌ ಜನರಿಗೆ ಟ್ಯಾಂಕರ್ ಗಳಲ್ಲಿ ನೀರು ಪೂರೈಸಿ ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Crime: ಮಗನನ್ನು ಕೊಂದು ಸೂಪರ್​ ಮಾರ್ಕೆಟ್​ ಕೌಂಟರ್​ನಲ್ಲಿ ಎಸೆದು ಹೋದ ಮಾಜಿ ನೀಲಿ ತಾರೆ!

ಜನರ ಆರೋಗ್ಯದಲ್ಲಿ ಏರುಪೇರು

ಸದ್ಯ ನೀರನ್ನ ಬಳಕೆ ಮಾಡಿರುವ ಕೆಲವರಲ್ಲಿ ಆರೋಗ್ಯ ವ್ಯತ್ಯಾಸವಾಗಿದ್ದು ಕೆಮ್ಮು, ಜ್ವರ ಕಾಣಿಸಿಕೊಂಡಿದೆ ಎಂಬ ಮಾಹಿತಿ ಇದೇ. ಸ್ಥಳದಲ್ಲಿ ಮಹಿಳೆಯ ಕಾಲು ಮಾತ್ರ ಪತ್ತೆಯಾಗಿದೆ, ಕಾಲು ಹೊರತಾಗಿ ಬೇರೆ ಯಾವುದೇ ಅಂಗ ಸಿಕ್ಕಿಲ್ಲ. ಇದರ ಜೊತೆಗೆ ಚೂಡಿದಾರ ಡ್ರೆಸ್, ಚಪ್ಪಲಿ, ಛತ್ರಿ ಸಹ ಪತ್ತೆಯಾಗಿದೆ. ಈ ವಿಚಾರ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಕೊಲೆಯಾದ ಮಹಿಳೆಯ ಶವ ಎಂಬ ಅನುಮಾನ ಒಂದೆಡೆಯಾದರೆ, ಪ್ರಕರಣದ ದಿಕ್ಕು ತಪ್ಪಿಸಲು ಬೇರೆಡೆ ಕೊಲೆ ಮಾಡಿ ಕಾಲನ್ನ ತಂದು ಬಿಸಾಡಿರುವ ಶಂಕೆಯೂ ಇದೆ. ಅಥವಾ ಕಾಲು ಸಿಕ್ಕಿ ದೇಹ ಮತ್ತೊಂದೆಡೆ ಹೋಗಿರಬಹುದೆಂದು ಶಂಕೆಯೂ ಸಹ ವ್ಯಕ್ತವಾಗ್ತಿದೆ.

ತಾತ್ಕಾಲಿಕ ಟ್ಯಾಂಕರ್ ವ್ಯವಸ್ಥೆ

ಇನ್ನು ಪ್ರಕರಣದ ಸಂಬಂಧ ಕ್ಷೇತ್ರದ ಶಾಸಕರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಚನ್ನಪಟ್ಟಣದಲ್ಲಿ ನಡೆದಿರುವ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಆ ಓವರ್ ಹೆಡ್ ಟ್ಯಾಂಕ್ ನ ನೀರನ್ನ ಯಾರು ಕುಡಿಯಬೇಡಿ. ಟ್ಯಾಂಕರ್ ನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಅಧಿಕಾರಿಗಳಿಗೂ ಸಹ ತನಿಖೆ ನಡೆಸಲು ಸೂಚಿಸಿದ್ದೇನೆ. ಯಾರು ಗಾಬರಿಯಾಗಬೇಡಿ ಎಂದು ಕ್ಷೇತ್ರದ ಜನರಿಗೆ ಧೈರ್ಯ ಹೇಳಿದ್ದಾರೆ.

ಇದನ್ನೂ ಓದಿ: Murder: ಪೆಟ್ರೋಲ್ ಸುರಿದು ಮಹಿಳೆ ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಆಗ್ರಹಿಸಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ

ಅಧಿಕಾರಿಗಳ ಲೋಪ

ಇನ್ನು ಈ ಪ್ರಕರಣದಲ್ಲಿ ಅಧಿಕಾರಿಗಳ ಲೋಪವೂ ಎದ್ದುಕಾಣುತ್ತದೆ. ಓವರ್ ಹೆಡ್ ಟ್ಯಾಂಕ್ ಮೇಲೆ ಯಾರೋ ಹತ್ತುತ್ತಾರೆ ಅಂದರೆ ಅದಕ್ಕೆ ಯಾವುದೇ ಸುರಕ್ಷತೆ ಇರಲಿಲ್ಲವಾ ಎಂಬುದು ಗಮನಾರ್ಹ. ಹಾಗಾಗಿ ಇದು ಉನ್ನತ ತನಿಖೆಯಾದರೆ ಘಟನೆಯ ಸತ್ಯಾಂಶ ತಿಳಿಯಲಿದೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೆಯ ನಲ್ಲಿಯಲ್ಲಿ ಬರುವ ನೀರು ಸ್ವಲ್ಪ ಬಣ್ಣ ಅಥವಾ ರುಚಿ ಬದಲಾದರೆ ಸಾಕು, ಏನಾಗಿದೆಯೋ ಎಂದು ಗಾಬರಿಯಾಗುತ್ತದೆ. ಅಂಥಾದ್ರಲ್ಲಿ ತಾವು ಕಳೆದ ಇಷ್ಟು ದಿನಗಳಿಂದಲೂ ಕೊಳೆತ ಹೆಣ ಇರುವ ನೀರನ್ನೇ ಕುಡಿದಿದ್ದೇವೆ, ಮನೆಯ ಮಕ್ಕಳಿಗೂ ಅದನ್ನೇ ಕುಡಿಸಿದ್ದೀವಿ ಎನ್ನುವ ವಿಚಾರ ಈ ಜನರ ಸ್ಮರಣೆಯಿಂದ ಹೋಗಲು ಬಹಳ ಸಮಯ ಬೇಕಾಗುತ್ತದೆ.
Published by:Soumya KN
First published: