HOME » NEWS » District » PEOPLE LIVE WITH FEAR OF INFECTIOUS DISEASE IN GADAGA CITY RHHSN SKG

ಗದಗ- ಬೆಟಗೇರಿ ಅವಳಿ ನಗರದ ಬಣ್ಣದ ನಗರದ ಜನರಿಗೆ ಕೊರೋನಾ ನಡುವೆ ಸಾಂಕ್ರಾಮಿಕ ರೋಗದ ಭೀತಿ!

ಕೊರೋನಾ ಹಾವಳಿ ನಡುವೆ ಸಾಂಕ್ರಾಮಿಕ ರೋಗದ ಭೀತಿ ಆರಂಭವಾಗಿದೆ. ಹೌದು ಯಾವುದೇ ಕುಗ್ರಾಮದಲ್ಲಿ ಇಂತಹ ಆತಂಕ ಎದುರಾಗಿಲ್ಲ. ಅದು ಗದಗ-ಬೆಟಗೇರಿ ಅವಳಿ ನಗರದಲ್ಲಿಯೇ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರ ಸ್ಥಿತಿ ನೋಡಿದರೆ, ಇವರು ನಗರ ವಾಸಿಗಳೋ ಅಥವಾ ಕುಗ್ರಾಮದಲ್ಲಿ ನೆಲೆಸಿದ್ದಾರೋ ಎಂಬ ಅನುಮಾನ ಮೂಡುತ್ತದೆ.

news18-kannada
Updated:January 7, 2021, 2:45 PM IST
ಗದಗ- ಬೆಟಗೇರಿ ಅವಳಿ ನಗರದ ಬಣ್ಣದ ನಗರದ ಜನರಿಗೆ ಕೊರೋನಾ ನಡುವೆ ಸಾಂಕ್ರಾಮಿಕ ರೋಗದ ಭೀತಿ!
ಬಣ್ಣದ ನಗರದ ಅಸಮರ್ಪಕ ಚರಂಡಿ ವ್ಯವಸ್ಥೆ.
  • Share this:
ಗದಗ; ಗದಗ- ಬೆಟಗೇರಿ ಅವಳಿ ನಗರದಲ್ಲಿನ ಬಣ್ಣದ ನಗರದ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿತ್ಯ ಜೀವನ ನಡೆಸುತ್ತಿದ್ದಾರೆ. ಹೌದು ಒಂದು ಸಾರಿ ಈ ಪ್ರದೇಶಕ್ಕೆ ಬಂದರೆ ಯಾಕಪ್ಪಾ ಈ ನರಕಕ್ಕೆ ಬಂದ್ವಿ ಅಂತಾ ಅನಿಸದೆ ಇರದು. ಸರಿಯಾದ ರಸ್ತೆಯಿಲ್ಲಾ ಹಾಗೂ ಶೌಚಾಲಯಗಳು ಇದ್ರು ಎಲ್ಲಾ ಬ್ಲಾಕ್ ಆಗಿವೆ. ಹೀಗಾಗಿ ವಿದ್ಯಾರ್ಥಿಗಳು, ಯುವತಿಯರು, ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಮಿಶ್ರಣವಾಗಿದೆ ಬರುತ್ತಿದ್ದರೂ ಜನರು ಅದೇ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಮಳೆಗಾಲ ಬಂದರೆ ಸಾಕು ಇಡೀ ಪ್ರದೇಶದಲ್ಲಿ ನೀರು ಆವರಿಸಿಕೊಂಡು ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮಗೆ ರಸ್ತೆ ಹಾಗೂ ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಅಂತ ಸ್ಥಳೀಯ ಮಹಿಳೆಯರು ಒತ್ತಾಯ ಮಾಡುತ್ತಿದ್ದಾರೆ. ಬಣ್ಣದ ನಗರದ  ಕ್ರಾಸ್ ನಲ್ಲಿ ಸುಮಾರು 200 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಆದರೆ ಗದಗ- ಬೆಟಗೇರಿ ನಗರಸಭೆ ಅಧಿಕಾರಿಗಳು ಈ ವಾರ್ಡ್ ಸದಸ್ಯರು ಕೂಡಾ ಇವರ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡಿಲ್ಲ. ಅವರನ್ನು ಕೇಳಿದರೆ ಮಾಡೋಣ ಎನ್ನುವ ಉತ್ತರ ಮಾತ್ರ ಬರ್ತಾಯಿದೆ. ಹೀಗಾಗಿ ಕೊರೋನಾ ಹಾವಳಿಯಿಂದ ಮೊದಲೇ ಭಯದಲ್ಲಿ ಜೀವನ ನಡೆಸುತ್ತಿರುವ ಈ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಇದನ್ನು ಓದಿ: Mob at US Capitol: ಅರಾಜಕತೆ ಮತ್ತು ಹಿಂಸಾಚಾರ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ; ಗೂಗಲ್ ಸಿಇಓ ಸುಂದರ್​ ಪಿಚೈ

ಸೊಳ್ಳೆ ಕಾಟದಿಂದ ಮನೆಗೆ ಒಬ್ಬರು, ಇಬ್ಬರು ಆಸ್ಪತ್ರೆಗೆ ಹೋಗಿ ಬರ್ತಾಯಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಕಾಯಿಲೆಗಳಿಂದ ಇಲ್ಲಿನ ಜನರು ಬಳಲುತ್ತಿದ್ದಾರೆ. ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಿ ಅಂತಾ ನಗರಸಭೆಗೆ ಜನರು ಒತ್ತಾಯ ಮಾಡಿದ್ದಾರೆ. ಕೊರೋನಾ ನಡುವೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ.
Youtube Video

ಸರ್ಕಾರ ಕೂಡ ಸ್ವಚ್ಛತೆ ಕಾಪಾಡಿಕೊಳ್ಳಿ ಅಂತಾ ಹೇಳುತ್ತಿದೆ. ಆದ್ರೆ ಈ ಪ್ರದೇಶ ಮಾತ್ರ ರೋಗವನ್ನು ಹುಟ್ಟುಹಾಕುವ ಕೇಂದ್ರವಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಗಾಢವಾದ ನಿದ್ದೆಯಿಂದ ಎದ್ದು ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

ವರದಿ: ಸಂತೋಷ ಕೊಣ್ಣೂರ
Published by: HR Ramesh
First published: January 7, 2021, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories