HOME » NEWS » District » PEOPLE IN GADAG CROWD VACCINATION CENTER FOR THE FEAR OF CORONA SECOND WAVE SKG SKTV

Covid Vaccine: ಎರಡನೇ ಅಲೆಗೆ ಹೆದರಿ ಲಸಿಕೆ ಪಡೆಯಲು ಮುಗಿಬಿದ್ದ ಜನ, ಗದಗದಲ್ಲಿ ವ್ಯಾಕ್ಸಿನ್ ಸೆಂಟರ್​ ಫುಲ್ ರಶ್ !

ಲಸಿಕೆ ಹಾಕಿಸಿಕೊಳ್ಳೋಕೆ ಸರಕಾರ ಅದೆಷ್ಟೇ ಗೋಗರೆದರೂ ಸ್ವತಃ ಕೊರೊನಾ ವಾರಿಯರ್ಸಗಳೇ ಹಿಂದೇಟು ಹಾಕ್ತಾ ಇದ್ರು. ಆದರೆ ಕೊರೊನಾ ಆರ್ಭಟ ದಿನದಿಂದ ದಿನಕ್ಕೂ ಹೆಚ್ಚಾಗ್ತಿದ್ದು ಅಲ್ಲದೇ ಲಾಕ್ಡೌನ್ ಘೋಷಣೆ ಆಗಿದ್ದೇ ತಡ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಜನ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ತಿದ್ದಾರೆ.

news18-kannada
Updated:April 28, 2021, 8:16 AM IST
Covid Vaccine: ಎರಡನೇ ಅಲೆಗೆ ಹೆದರಿ ಲಸಿಕೆ ಪಡೆಯಲು ಮುಗಿಬಿದ್ದ ಜನ, ಗದಗದಲ್ಲಿ ವ್ಯಾಕ್ಸಿನ್ ಸೆಂಟರ್​ ಫುಲ್ ರಶ್ !
ಲಸಿಕೆಗಾಗಿ ಜನಜಂಗುಳಿ
  • Share this:
ಗದಗ: ರಾಜ್ಯದೆಲ್ಲೆಡೆ ಕೊರೊನಾ‌ ಎರಡನೇ ಅಲೆ ತನ್ನ ಆರ್ಭಟ ಮುಂದುವರಿಸುತ್ತಿದೆ. ವರ್ಷವಿಡಿ ಅಬ್ಬರಿಸಿ ಬೊಬ್ಬಿರಿದಿದ್ದ ಮಾಹಾಮಾರಿಗೆ ಲಿಸಿಕೆಯನ್ನಂತೂ ಕಂಡು ಹಿಡಿಯಲಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳೋಕೆ ಸರಕಾರ ಅದೆಷ್ಟೇ ಗೋಗರೆದರೂ ಸ್ವತಃ ಕೊರೊನಾ ವಾರಿಯರ್ಸಗಳೇ ಹಿಂದೇಟು ಹಾಕ್ತಾ ಇದ್ರು. ಆದರೆ ಕೊರೊನಾ ಆರ್ಭಟ ದಿನದಿಂದ ದಿನಕ್ಕೂ ಹೆಚ್ಚಾಗ್ತಿದ್ದು ಅಲ್ಲದೇ ಲಾಕ್ಡೌನ್ ಘೋಷಣೆ ಆಗಿದ್ದೇ ತಡ ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ನಾ ಮುಂದು ತಾ ಮುಂದು ಅಂತ ಜನ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ತಿದ್ದಾರೆ.

ಅದರಲ್ಲೂ 45 ವರ್ಷ ಮೇಲ್ಪಟ್ಟ ಜನ್ರಂತೂ ಕೊರೊನಾ‌ ವ್ಯಾಕ್ಸಿನ್ ಹಾಕಿಸಿಕೊಳ್ಳೊಕೆ ಹೆಚ್ಚಾಗಿ ಸರಕಾರಿ ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಇದರ‌ ಮಧ್ಯೆ ಆಸ್ಪತ್ರೆಗೆ ಬಂದ ವಯೋವೃದ್ಧರು ವಾಪಾಸ್ ಹೋಗುವಾಗ ಜೊತೆಗೆ ಕರೋನಾ ರೋಗವನ್ನೂ ಕೂಡಾ ಉಚಿತವಾಗಿ ತೆಗೆದುಕೊಂಡು ಹೋದಂತೆ ಕಾಣ್ತಿದೆ. ಯಾಕಂದ್ರೆ ಕೊವಿಡ್ ಲಸಿಕಾ ಕೇಂದ್ರದಲ್ಲೇ ಕೋವಿಡ್ ರೂಲ್ಸ್  ಮಾಯವಾಗ್ತಿವೆ. ಗದಗ ಜಿಲ್ಲೆ ಮುಂಡರಗಿ ತಾಲೂಕು  ಸರಕಾರಿ ಆಸ್ಪತ್ರೆ ಸೇರಿದಂತೆ ಉಳಿದ‌‌ ಲಸಿಕಾ ಕೇಂದ್ರಗಳಲ್ಲಿ ವೃದ್ಧರ ಗುಂಪು ಎದ್ದು ಕಾಣ್ತಿವೆ. ಯಾವುದೇ ಸಾಮಾಜಿಕ‌ ಅಂತರವಿಲ್ಲದೇ, ಸ್ಯಾನಿಟೈಸರ್ ವ್ಯವಸ್ಥೆ ಇಲ್ಲದೆ ಸರಕಾರಿ ಆಸ್ಪತ್ರೆ ಸಿಬ್ಬಂದಿ‌ ಲಸಿಕೆ ನೀಡ್ತಿದ್ದಾರೆ. ನಿಯಮ ಪಾಲಿಸದೇ ಬೇಕಾಬಿಟ್ಟಿ ಕೊವಿಡ್ ಲಸಿಕೆ‌ ನೀಡುತ್ತಿದ್ದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮುಂಡರಗಿ ತಾಲೂಕು ಸರಕಾರಿ ಆಸ್ಪತ್ರೆಗೆ ಒಂದೇ ಕೋವಿಡ್ ಲಸಿಕಾ‌ ಕೇಂದ್ರ ಇದ್ದು ಜನತೆ ಗುಂಪಾಗಿ ಮುಗಿಬೀಳ್ತಿದ್ದಾರೆ. ಇನ್ನು ಗದಗ ನಗರ ಆರೋಗ್ಯ ಕೇಂದ್ರದಲ್ಲಿ ಇಂದು ಕೋವಿಡ್ ವ್ಯಾಕ್ಸಿನ್ ಕೊರತೆಯಿಂದ ಜನ್ರು ಪರದಾಟ ನಡೆಸಿದ್ರು. ಈಗಾಗಲೇ ಕೊರೋನಾ ವೈರಸ್ ತನ್ನ ಆರ್ಭಟ  ಮುಂದುವರೆಸಿದೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದ್ರಿಂದ ಜನ್ರು ಜಾಗೃತರಾಗಿ ಎಚ್ಚೆತ್ತುಗೊಂಡು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಸ್ಪತ್ರೆಗಳತ್ತ ಮುಖಮಾಡಿದ್ದಾರೆ. ಹೀಗಾಗಿ ದಿನಕ್ಕೆ 3500-4000 ಜನ್ರಿಗೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ನೀಡುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ್ರು ಹೆಚ್ಚಾಗುತ್ತಿರೊದ್ರಿಂದ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ ಕಾಣಿಸಿಕೊಂಡಿದೆ. ಸರ್ಕಾರದಿಂದ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಆಸ್ಪತ್ರೆಗಳಿಗೆ ಸರಬರಾಜು ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಇದನ್ನೂ ಓದಿhttps://kannada.news18.com/news/explained/explained-who-when-and-how-to-get-corona-vaccine-formalities-and-preparation-sktv-557257.html

ಈಗಾಗಲೇ ಸಾಕಷ್ಟು ಜನ್ರು ಕೊರೋನಾ ಎರಡನೇ ಅಲೇಗೆ ತತ್ತರಿಸಿ ಹೋಗಿದ್ದಾರೆ. ಇದ್ರಿಂದ ಕೋವಿಡ್ ವ್ಯಾಕ್ಸಿನ್ ಹಾರಿಸಿಕೊಂಡು ಸ್ವಲ್ಪ ಮಟ್ಟಿಗೆ ಭಯವಿಲ್ದೆ ಜೀವ ಸಾಗಿಸಬಹುದಾಗಿದೆ ಅಂತಿದ್ದಾರೆ ಜನ್ರು.‌ ಇನ್ನು ಕೋವಿಡ್ ವ್ಯಾಕ್ಸಿನ್ ಕೊರತೆ ಬಗ್ಗೆ ಡಿಎಚ್ ಓ ಸತೀಶ್ ಬಸರಿಗಿಡದ ಅವರನ್ನ ಕೇಳಿದ್ರೆ ದಿನ ನಿತ್ಯ ಕೋವಿಡ್ ವ್ಯಾಕ್ಸಿನ್ ಬಗ್ಗೆ ಜಿಲ್ಲೆಯಾದ್ಯಂತ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದ್ರಿಂದ ಪ್ರೇರಿತಯಾದ ಜನ್ರು  ಆಸ್ಪತ್ರೆಗೆ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ.
Youtube Video

ಹೀಗಾಗಿ ಇಂದು ಸ್ವಲ್ಪ ಕೊರತೆಯಾಗಿತ್ತು.ಇಂದು ಸಾಯಂಕಾಲ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಬರುತ್ತೇ  ಯಾವುದೇ ತೊಂದರೆ ಆಗೊದಿಲ್ಲ, ಕೊರೋನಾ ಎರಡನೇ ಅಲೇ ಯಿಂದ ಜನ್ರು ಭಯದಿಂದ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ನಾಳೆಯಿಂದ ಯಾವುದೇ ಕೊರತೆ ಯಾದಂತೆ ನೋಡಿ ಕೊಳ್ಳುತ್ತೇವೆ ಅಂತಿದ್ದಾರೆ.
Published by: Soumya KN
First published: April 28, 2021, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories