ಜ್ವರ, ಮೈ ಕೈ ನೋವಿಗೆ ಹೆದರಿ ಕೋವಿಡ್ ಲಸಿಕೆ ಪಡೆಯಲು ಗ್ರಾಮದ ಜನರ ಹಿಂದೇಟು: ಜಿಲ್ಲಾಡಳಿತದಿಂದ ವಿಶೇಷ ಜಾಗೃತಿ
ಸರ್ಕಾರದ ಗುರಿ ಮತ್ತು ಜೀವ ರಕ್ಷಣೆಯ ಕಾಳಜಿಯಿಂದ ಚಿತ್ರದುರ್ಗ ಡಿಸಿ, ಕವಿತಾ ಎಸ್ ಮನ್ನಿಕೇರಿ, ಆರೋಗ್ಯ ಇಲಾಖೆ ಸಿಬ್ಬಂದಿ ಆ ಗ್ರಾಮಕ್ಕೆ ಬೇಟಿ ನೀಡಿ ಜನರ ಮನವೊಲಿಸಿ ಲಸಿಕೆ ಹಾಕಿಸಿ, ಯಶಸ್ವಿ ಜಾಗೃತಿ ಮೂಡಿಸಿದ್ದಾರೆ.
ಚಿತ್ರದುರ್ಗ : ಕೊರೋನಾ ಸೋಂಕಿನಿಂದ ಜನರ ಮಾರಣಹೋಮ ತಡೆಯೋಕೆ, ಪ್ರಾಣ ರಕ್ಷಣೆಗೆ ಸರ್ಕಾರ ಉಚಿತ ವ್ಯಾಕ್ಸಿನ್ ನೀಡುತ್ತಿದೆ. ಆದರೇ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ ಅನ್ನೋ ಕಾರಣಕ್ಕೆ ಹೆದರಿ ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಜನರು ಲಸಿಕೆ ಪಡೆಯೋಕೆ ಹಿಂದೇಟು ಹಾಕಿದ್ದರಂತೆ. ಸರ್ಕಾರದ ಗುರಿ ಮತ್ತು ಜೀವ ರಕ್ಷಣೆಯ ಕಾಳಜಿಯಿಂದ ಚಿತ್ರದುರ್ಗ ಡಿಸಿ, ಕವಿತಾ ಎಸ್ ಮನ್ನಿಕೇರಿ, ಆರೋಗ್ಯ ಇಲಾಖೆ ಸಿಬ್ಬಂದಿ ಆ ಗ್ರಾಮಕ್ಕೆ ಬೇಟಿ ನೀಡಿ ಜನರ ಮನವೊಲಿಸಿ ಲಸಿಕೆ ಹಾಕಿಸಿ, ಯಶಸ್ವಿ ಜಾಗೃತಿ ಮೂಡಿಸಿದ್ದಾರೆ. ಕಳೆದ ಒಂದು ವರೆ ವರ್ಷದಿಂದ ದೇಶದಲ್ಲಿ ಜನರು ಜೀವ ಬಿಗಿ ಹಿಡಿದು ಬದುಕಿದ್ದಾರೆ. ಕಾರಣ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದ ಕೊರೋನಾ ಸೋಂಕು ನಮ್ಮ ದೇಶದ ಹೊರತಾಗಿರಲಿಲ್ಲ. ದೇಶಕ್ಕೆ ಅದ್ಯಾವ ಮಾಯದಲ್ಲಿ ಕೊರೋನಾ ಸೋಂಕು ಆಕ್ರಮಿಸಿದ ಪರಿಣಾಮದಿಂದ ಇಡೀ ದೇಶದ ಜನರು ಆರ್ಥಿಕ, ಶೈಕ್ಷಣಿಕವಾಗಿ ದೊಡ್ಡ ನಷ್ಟವನ್ನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಕೋವಿಡ್ ಸೋಂಕಿನಿಂದ ಸಾಲು ಸಾಲು ಸಾವುಗಳನ್ನ ಕಣ್ಮುಂದೆ ನೋಡಿ ಸಾವು ಬದುಕಿನ ನಡುವಿನ ಹೋರಾಟಕ್ಕೆ ಹರಸಾಹಸ ಅನುಭವಿಸಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಪರದಾಡಿ ಇಡೀ ದೇಶದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕರೂ ರೆಮ್ಡಿಸಿವಿರ್ ನಂತ ಇಂಜಕ್ಷನ್ ಸಿಗದಲೆ ಪ್ರಾಣ ಬಿಟ್ಟವರ ಸಂಖ್ಯೆಯೂ ಹೇಳತೀರದಷ್ಟು. ಇದರಿಂದ ಅದೆಷ್ಟೋ ಕುಟುಂಬಗಳು ದುಡಿಯುವ ಮನೆಯ ಯಜಮಾನನ್ನ ಕಳೆದುಕೊಂಡರೆ, ತಂದೆ ತಾಯಿಯರನ್ನ ಕಳೆದುಕೊಂಡ ಅದೆಷ್ಟೋ ಮಕ್ಕಳು ಅನಾಥರಾಗಿ ಬದುಕುವ ದುಸ್ಥಿತಿ ಬಂದಿದೆ.
ಹೀಗಿರುವಾಗ ದೇಶದ ಜನರ ರಕ್ಷಣೆಗೆ ಪಣ ತೊಟ್ಟ ಕೇಂದ್ರ ಸರ್ಕಾರ ಜನರ ಉಳಿವಿಗಾಗಿ ಕೋವಿಡ್ ವ್ಯಾಕ್ಸಿನ್ ತಯಾರಿಸಿ ಉಚಿತವಾಗಿಯೇ ನೀಡುತ್ತಿದೆ. ಆದರೇ ಸಾವು ನೋವುಗಳನ್ನ ಕಣ್ಮುಂದೆ ನೋಡಿ ತಲ್ಲಣಿಸಿರೋಜನ್ರಿಗೆ ಇನ್ನೂ ಬುದ್ದಿ ಬಂದಂತಿಲ್ಲ. ಯಾಕಂದ್ರೆ ಉಚಿತವಾಗಿ ಸಿಗೋ ಜೀವ ರಕ್ಷಕ ವ್ಯಾಕ್ಸಿನ್ ಪಡೆಯದೆ ಕುಂಟು ನೆಪಗಳಿಗೆ ದಾಸರಾಗಿದ್ದಾರೆ. ಇದಕ್ಕೆ ಉದಹಾರಣೆ ಎಂಬಂತೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದ ಜನರು ಕೋವಿಡ್ ಲಸಿಕೆಯನ್ನ ಪಡೆಯೋಕೆ ಹಿಂದೇಟು ಹಾಕಿದ್ದಾರಂತೆ.
ಗ್ರಾಮದ ಕರಲವೇ ಕೆಲವರನ್ನ ಬಿಟ್ಟರೇ ಇಡೀ ಊರಿನ ಜನರು ಲಸಿಕೆ ಪಡೆದೇ ಇಲ್ಲ, ಕಾರಣ ಲಸಿಕೆ ಪಡೆದರೆ ಜ್ವರ ಬರುತ್ತದೆ, ಸುಸ್ತಾಗಿ, ಮೈ ಕೈ ನೊಕವು ಆಗುತ್ತದೆ ಅನ್ನೋ ಕ್ಷುಲ್ಲಕ ಮನಸ್ಥಿತಿ. ಇದನ್ನರಿತ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಅರೋಗ್ಯ ಇಲಾಖೆಯ DHO ಡಾ. ರಂಗನಾಥ್ ಆಗ್ರಾಮದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಿ ಜನರಿಗೆ ಜಾಗೃತಿ ಮೂಡಿಸಿದ್ದಾರೆ.
ಲಸಿಕೆ ಪಡೆಯೋಕೆ ಹಿಂದೇಟು ಹಾಕಿದ ಜನರಿಗೆ ಮನವಿರಿಕೆ ಮಾಡಿ ತಾವಾಗಿಯೇ ಬಂದು ಲಸಿಕೆ ಪಡೆಯುಂತೆ ಮಾಡಿದ್ದಾರೆ. ಆ ಗ್ರಾಮದ ಪ್ರತೀ ಮನೆ ಮನೆಗಳಿಗೆ ತೆರಳಿ ಜನರ ತಪ್ಪು ತಿಳುವಳಿಕೆಯನ್ನ ತೋಳೆದು ಹಾಕಿ ಲಸಿಕೆ ಪಡೆಯಲು ಒಪ್ಪಿಸಿದ್ದಾರೆ. ಬಳಿಕ ಜನರು ಲಸಿಕೆ ಪಡೆದಿದ್ದು, ಜಿಲ್ಲಾಡಳಿತದ ಲಸಿಕಾ ವಿಶೇಷ ಜಾಗೃತಿ ಅಭಿಯಾನ ಸಕ್ಸಸ್ ಆಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ