ಮಹಾರಾಷ್ಟ್ರದಲ್ಲಿ ಸ್ಥಳೀಯರಿಗೆ ಕೆಲಸಾವಕಾಶ; ನಿರುದ್ಯೋಗಿಗಳಾದ ಗಡಿಭಾಗದ ಕನ್ನಡಿಗರು

ಬೆಳಗಾವಿ ಜಿಲ್ಲೆಯ ರಾಯಬಾಗ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ಹಾಗೂ ಅಥಣಿ ತಾಲೂಕಿನಿಂದ ನಿತ್ಯವೂ ಸಾವಿರಾರು ಜನ ಮಹಾರಾಷ್ಟ್ರದ ಎಂಐಡಿಸಿ ಕಾರ್ಖಾನೆಗಳಿಗೆ ದುಡಿಯಲು ಹೋಗುತ್ತಿದ್ದರು. ಈಗ ಅಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡುತ್ತಿರುವುದರಿಂದ ಕರ್ನಾಟಕದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.

ಮಹಾರಾಷ್ಟ್ರ ಕೈಗಾರಿಕಾ ನಿಗಮ

ಮಹಾರಾಷ್ಟ್ರ ಕೈಗಾರಿಕಾ ನಿಗಮ

  • Share this:
ಚಿಕ್ಕೋಡಿ: ಕೊರೋನಾ ಮಹಾಮಾರಿ ದೇಶಕ್ಕೆ ಕಾಲಿಟ್ಟಾಗಿನಿಂದಲು ದೇಶದ ಎಲ್ಲಾ ವರ್ಗದ ಜನ ಪಡಬಾರದ ಕಷ್ಟಗಳನ್ನ ಪಡುವಂತಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಮುಚ್ಚುವ ಹಂತಕ್ಕೆ ತಲುಪಿವೆ. ಅಲ್ಲದೆ ಇಡೀ ದೇಶದ ಆರ್ಥಿಕತೆಯೇ ದಿವಾಳಿ ಹಂತಕ್ಕೆ ತಲುಪಿದೆ. ಇದೆಲ್ಲದರ ಮಧ್ಯೆ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದ ಜನ ಈಗ ಉದ್ಯೋಗ ಕಡಿತದ ಸಮಸ್ಯೆಯಿಂದ ಬಳಲುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ಜಿಲ್ಲೆಯಲ್ಲಿ ಗಡಿ ಗ್ರಾಮದ ಜನ ಹೆಚ್ಚಾಗಿ ಉದ್ಯೋಗಕ್ಕೆ ಮಹಾರಾಷ್ಟ್ರವನ್ನೇ ಅವಲಂಬಿತರಾಗಿದ್ದಾರೆ. ಯಾಕೆಂದರೆ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಸಾಂಗಲಿ ಜಿಲ್ಲೆಯಲ್ಲಿ ಅತಿ ಹೆಚ್ವು ಕೈಗಾರಿಕೆಗಳಿವೆ. ನಿತ್ಯ ಗಡಿ ಗ್ರಾಮದ ಸಾವಿರಾರು ಜನ ಕೊಲ್ಲಾಪುರ ಹಾಗೂ ಸಾಂಗಲಿಯ ಎಂ.ಐ.ಡಿ.ಸಿ (ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್)ಗೆ ಕೆಲಸಕ್ಕೆ ಅಂತಾ ತೆರಳುತ್ತಿದ್ದರು. ಸ್ಟೀಲ್ ತಯಾರಿಕೆ, ಟೆಕ್ಸ್​ಟೈಲ್, ಆಟೊಮೊಬೈಲ್, ಹಾರ್ಡವೇರ್​ನಂತಹ ದೊಡ್ಡ ದೊಡ್ಡ ನೂರಕ್ಕೂ ಹೆಚ್ವು ಕಂಪನಿಗಳ ತಯಾರಿಕಾ ಘಟಕಗಳಿದ್ದು ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಂಡು ಬಂದಿತ್ತು. ಆದರೆ, ಕೊರೋನಾ ಮಹಾಮಾರಿ ಪರಿಣಾಮ ಕಂಪನಿಗಳು ಕಾರ್ಯಾಚರಣೆಯನ್ನ ಸ್ಥಗಿತೊಳಿಸಿದ್ದವು. ಸದ್ಯ ಕ್ರಮೇಣ ಕಂಪನಿಗಳು ಹಂತ ಹಂತವಾಗಿ ಮತ್ತೆ ತಮ್ಮ ಕಾರ್ಯಾಚರಣೆಯನ್ನ ಆರಂಭಗೊಳಿಸಿವೆ. ಆದ್ರೆ ನಮ್ಮ ರಾಜ್ಯದಿಂದ ಹೋಗಿ ಕೆಲಸ ಮಾಡುವ ಕಾರ್ಮಿಕರನ್ನ ಕೈ ಬಿಡುತ್ತಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಗ್ ಗಾಂಜಾ ರೇಡ್; 5 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆ

ಬೆಳಗಾವಿ ಜಿಲ್ಲೆಯ ರಾಯಬಾಗ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ಹಾಗೂ ಅಥಣಿ ತಾಲೂಕಿನಿಂದ ನಿತ್ಯವೂ ಸಾವಿರಾರು ಜನ ಮಹಾರಾಷ್ಟ್ರದ ಎಂಐಡಿಸಿ ಕಾರ್ಖಾನೆಗಳಿಗೆ ದುಡಿಯಲು ಹೋಗುತ್ತಿದ್ದರು. ಕಳೆದ ಹತ್ತಾರು ವರ್ಷಗಳಿಂದಲೂ ಮಹಾರಾಷ್ಟ್ರದ ಕಂಪನಿಗಳನ್ನೇ ನಂಬಿಕೊಂಡು ಗಡಿ ಗ್ರಾಮಗಳ ಜನ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಈ ಎಲ್ಲಾ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಅದಕ್ಕೆ ಕಾರಣ ಮಹಾರಾಷ್ಟ್ರದ ಮುಂಬೈನಂತಹ ಮಹಾನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಮಹಾರಾಷ್ಟ್ರದ ವಿವಿಧೆಡೆಯಲ್ಲಿರುವ ತಮ್ಮ ತಮ್ಮ ಗ್ರಾಮಗಳಿಗೆ ವಾಪಸ್ ಆಗಿದ್ದಾರೆ. ಅವರೆಲ್ಲರೂ ಸ್ಥಳೀಯವಾಗಿರುವ ಕಂಪನಿಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲ್ಲಾಪುರ ಮತ್ತು ಸಾಂಗಲಿಯ ಎಂಐಡಿಸಿ ಪ್ರದೇಶಗಳಲ್ಲಿರುವ ಕಂಪನಿಗಳು ಸ್ಥಳೀಯರಿಗೆ ಆದ್ಯತೆ ಕೊಡುತ್ತಿದ್ದು, ಕರ್ನಾಟಕ ಭಾಗದಿಂದ ಹೋಗುತ್ತಿದ್ದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕರ್ನಾಟಕದ ಕಾರ್ಮಿಕರನ್ನ ಕೊರೋನಾ ನೆಪ ಹೇಳಿ ಯಾವುದೆ ಸೂಚನೆ ನೀಡದೆ ಕೆಲಸಕ್ಕೆ ಬಾರದಂತೆ ಹೇಳುತ್ತಿವೆ.

ಇದನ್ನೂ ಓದಿ: ಬಸವನಾಡಿನ ಯುವಕನ ಕಿರುಚಿತ್ರಕ್ಕೆ ಸಿಕ್ತು ರಾಷ್ಟ್ರೀಯ ಮನ್ನಣೆ..!

ಮಹಾರಾಷ್ಟ್ರದ ಕೈಗಾರಿಕೆಗಳನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದ ಜಿಲ್ಲೆಯ ಸಾವಿರಾರು ಕಾರ್ಮಿಕ ಕುಟುಂಬಗಳು ಈಗ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: