ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಗ್ರಾಮೀಣ ಜನರಿಗೆ ಸಾರಿಗೆ ಸಂಕಟ : ನೌಕರರು, ಕಾರ್ಮಿಕರಿಗೆ ತಪ್ಪದ ಪರದಾಟ

ಇಲಾಖೆಗೆ ನಷ್ಟವಾಗಲಿದೆ ಎಂಬ ಕಾರಣದಿಂದ ಕೆಲವೇ ಕೆಲವು ಪ್ರದೇಶಗಳಿಗೆ ಮಾತ್ರ ಬಸ್ ಗಳನ್ನ ಓಡಾಟಡಲು ಬಿಟ್ಟಿದ್ದು ಶೇ 50 ರಷ್ಟು ಬಸ್ ಗಳ ಟ್ರೀಪ್ ನಲ್ಲಿ ಕಡಿತಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಜೂ.26): ರಾಜ್ಯದಲ್ಲಿ ಲಾಕ್​​ ಡೌನ್ ತೆರುವು ಗೊಂಡು ಕೆಎಸ್​ಆರ್​​ಟಿಸಿ ಬಸ್ ಸಂಚಾರ ಸೇವೆ ಆರಂಭವಾಗಿದ್ದರು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ ಓಡಿಸದೆ ಇರುವ ಕಾರಣದಿಂದಾಗಿ ಗ್ರಾಮಾಂತರ ಜನರು ಪ್ರತಿನಿತ್ಯ ಪರದಾಡುವಂತಾಗಿದೆ.

ಲಾಕ್​ಡೌನ್​​ಗೂ ಮೊದಲು ಚಿಕ್ಕೋಡಿ ವಿಭಾಗದ ರಾಯಬಾಗ, ಅಥಣಿ, ಹುಕ್ಕೇರಿ, ಚಿಕ್ಕೋಡಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ನಿತ್ಯ 450 ಕ್ಕೂ ಹೆಚ್ಚು ಬಸಗಳನ್ನ ಓಡಿಸಲಾಗುತ್ತಿತ್ತು. ಆದರೆ ಕೊರೋನಾದಿಂದಾಗಿ ಬಸ್ ನಲ್ಲಿ ಸೀಮಿತ ಪ್ರಯಾಣಿಕರಿಗೆ ಅವಕಾಶ ಮಾತ್ರ ನೀಡಿದ್ದು, ಪ್ರತಿ ಟ್ರೀಪ್ ಬಳಿಕ ಬಸ್ ಅನ್ನು ಸ್ಯಾನಿಟೈಸ್ ಮಾಡಬೇಕು ಇದೆಲ್ಲವೂ ಕೆಎಸ್​ಆರ್​ಟಿಸಿಗೆ ದುಬಾರಿಯಾಗುತ್ತಿದೆ ಇದರಿಂದಾಗಿ ಇಲಾಖೆಗೆ ನಷ್ಟವಾಗಲಿದೆ ಎಂಬ ಕಾರಣದಿಂದ ಕೆಲವೇ ಕೆಲವು ಪ್ರದೇಶಗಳಿಗೆ ಮಾತ್ರ ಬಸ್ ಗಳನ್ನ ಓಡಾಟಡಲು ಬಿಟ್ಟಿದ್ದು ಶೇ 50 ರಷ್ಟು ಬಸ್ ಗಳ ಟ್ರೀಪ್ ನಲ್ಲಿ ಕಡಿತಗೊಳಿಸಲಾಗಿದೆ.

ಮೊದಲು ಪ್ರತಿ ಗ್ರಾಮಕ್ಕೂ ಕನಿಷ್ಠ ಮೂರು ಟ್ರೀಪ್ ಬಸ್ ನ ಕಳಿಸಲಾಗುತ್ತಿತ್ತು, ಆದರೆ, ಈಗ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಖಾಲಿ ಬಸ್ ಓಡಿಸಲು ಸಾಧ್ಯವಾಗದ ಹಿನ್ನಲೆ ಕೆಲವು ಗ್ರಾಮಗಳಿಗೆ ಟ್ರೀಪ್ ನಲ್ಲಿ ಕಡಿತಗೊಳಿಸಿದ್ರೆ ಇನ್ನು ಕೆಲವು ಗ್ರಾಮಗಳಿಗೆ ಬಸ್​ನ್ನು ಬಿಡಲಾಗುತ್ತಿಲ್ಲ.

ಆದಾಯ ಇರುವ ರೂಟ್ ಗಳಿಗೆ ಮಾತ್ರ ಬಸ್ ಸೇವೆ

ಇನ್ನು ಗ್ರಾಮೀಣ ಭಾಗದದಲ್ಲಿ ನಷ್ಟ ಅನುಭವಿಸುತ್ತಿರುವ ಕೆಎಸ್​ಆರ್​​ಟಿಸಿ ತನ್ನ ನಷ್ಟ ಸರಿದೂಗಿಸಲು ದೂರದ ಅಂತರ ಜಿಲ್ಲಾ ಹಾಗೂ ಅಂತರ ತಾಲೂಕಿನಲ್ಲಿ ಮಾತ್ರ ಬಸ್ ಬಿಡುತ್ತಿದೆ. ಅದೂ 30 ಪ್ರಯಾಣಿಕರು ತುಂಬಿದ್ರೆ ಮಾತ್ರ ಬಸ್ ಬಿಡಲಾಗುತ್ತದೆ ಇಲ್ಲವಾದಲ್ಲಿ ಪ್ರಯಾಣಿಕರು ಆಗಮಿಸುವರೆಗೂ ಕಾಯಲೆಬೇಕಾದ ಅನಿವಾರ್ಯ.

ನೌಕರರು ಹಾಗೂ ದಿನಗೂಲಿಕಾರರಿಗೆ ತಪ್ಪದ ಪರದಾಟ

ಕೊರೋನಾಗೂ ಮೊದಲು ಗ್ರಾಮೀಣ ಪ್ರದೇಶಗಳಲ್ಲೆ ಸ್ವಂತ ಮನೆಯಿಂದ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಗೆ ತೆರಳಿ ನೌಕರಿ ಮಾಡುತ್ತಿದ್ದರು. ಅಲ್ಲದೆ ದಿನಗೂಲಿ ಕಾರ್ಮಿಕರು ಬೆಳಿಗ್ಗೆ ತಮ್ಮೂರಿನಿಂದ ಹೊರಡುತ್ತಿದ್ದ ಬಸ್ ನಲ್ಲೆ ಕೆಲಸಕ್ಕೆ ತೆರಳಿ ಮತ್ತೆ ಸಂಜೆ ಅದೆ ಬಸ್ ನಲ್ಲಿ ತಮ್ಮ ಮನೆ ಸೇರಿಕೊಳ್ಳುತ್ತಿದ್ದರು. ಆದರೆ, ಈಗ ಬಸ್ ಕಡಿತಗೊಳಿಸಿದ್ದರ ಪರಿಣಾಮ ಪರದಾಡುವಂತಾಗಿದೆ.

ಇದನ್ನೂ ಓದಿ : ಆತ್ಮನಿರ್ಭರ್ ಪ್ಯಾಕೇಜ್ ಪ್ರಯೋಜನ ಪಡೆಯಲು ಉದ್ಯಮಿಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕರೆ

ಸಕಾಲಕ್ಕೆ ಬಸ್ ಇಲ್ಲದ ಪರಿಣಾಮ ಹೆಚ್ಚಿನ ಹಣ ಖರ್ಚುಮಾಡಿ ಸ್ವಂತದ ವಾಹಣದಲ್ಲಿ ಓಡಾಟ ನಡೆಸಬೇಕು. ಇಲ್ಲವಾದಲ್ಲಿ ಯಾರಾದರು ತಮ್ಮೂರಿಗೆ ಹೋಗುವವರ ದಾರಿ ಕಾದೂ ಲಿಫ್ಟ್ ಪಡೆಯಬೇಕು.

ಒಟ್ಟಿನಲ್ಲಿ ಒಂದೆಡೆ ಕೆಎಸ್​ಆರ್​​ಟಿಸಿ ತನ್ನ ನಷ್ಟ ತಪ್ಪಿಸಲು ಬಸ್ ಕಡಿತಗೊಳಿಸಿದೆ. ಆದರೆ, ನಿತ್ಯ ಬಸ್ ಗಳನ್ನೆ ನಂಬಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
First published: