HOME » NEWS » District » PEJAWARA SEER VISHWAPRASANNA SWAMIJI SAYS FARMERS PROTEST IN DELHI HAS GONE OUT OF BOUNDS MVSV SNVS

ದೆಹಲಿ ಬಳಿ ಹೋರಾಟ ದಿಕ್ಕು ತಪ್ಪಿದೆ; ಪ್ರತಿಭಟನಾಕಾರರು ರೈತರಾ ಎಂಬುದು ಸ್ಪಷ್ಟವಿಲ್ಲ: ಪೇಜಾವರ ಶ್ರೀ

ಭಾರತದ ಧ್ವಜವನ್ನು ಕಾಲಿನಿಂದ ತುಳಿಯುವುದು, ಕೆಂಪು ಕೋಟೆಯಲ್ಲಿ ಹಾರಿಸಲಾದ ಧ್ವಜ ಕೆಳಗಿಳಿಸುವುದು, ಖಲಿಸ್ತಾನದ ಪರ ಘೋಷಣೆ ಹಾಕುವುದನ್ನು ನೋಡಿದರೆ ರೈತರ ಹೋರಾಟ ದಿಕ್ಕು ತಪ್ಪಿದೆ ಎನಿಸುತ್ತಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:February 7, 2021, 2:24 PM IST
ದೆಹಲಿ ಬಳಿ ಹೋರಾಟ ದಿಕ್ಕು ತಪ್ಪಿದೆ; ಪ್ರತಿಭಟನಾಕಾರರು ರೈತರಾ ಎಂಬುದು ಸ್ಪಷ್ಟವಿಲ್ಲ: ಪೇಜಾವರ ಶ್ರೀ
ಪೇಜವಾರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
  • Share this:
ವಿಜಯಪುರ(ಫೆ. 07): ದೆಹಲಿಯಲ್ಲಿ ಹೋರಾಟ ಮಾಡುತ್ತಿರುವವರು ರೈತರು ಹೌದೋ? ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಚ್ ಪರವಾಗಿ ಆಯೋಜಿಸಲಾಗಿದ್ದ ನಿಧಿ ಸಮರ್ಪಣಾ ಮಹಾ ಅಭಿಯಾನದ ಸಭೆಯಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಅವರು, ರೈತರ ಹೋರಾಟದ ಕುರಿತು ಮಾತನಾಡಿದರು.

ಅಲ್ಲಿ ನಡೆಯುತ್ತಿರುವ ಹೋರಾಟದ ರೀತಿಯನ್ನು ಗಮನಿಸಿದ್ದೇವೆ. ಭಾರತದ ಧ್ವಜವನ್ನು ಕಾಲಿನಿಂದ ತುಳಿಯುವುದು, ಸುಟ್ಟು ಹಾಕುವುದು, ಕೆಂಪು ಕೋಟೆಯಲ್ಲಿ ಹಾರಿಸಲಾದ ಧ್ವಜವನ್ನು ಕೆಳಗಿಳಿಸುವುದು, ಸಂವಿಧಾನದ ಪ್ರತಿಯನ್ನು ಹರಿದುಹಾಕುವುದು, ಖಲಿಸ್ತಾನದ ಪರ ಘೋಷಣೆ ಹಾಕುವುದನ್ನು ನೋಡಿದರೆ ಹೋರಾಟ ದಿಕ್ಕು ತಪ್ಪಿದೆ ಎನಿಸುತ್ತಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತೆಗೆದುಕೊಂಡಿರುವ ನಿಲುವು ಸರಿಯಾದ ದಾರಿಯಲ್ಲಿದೆ. ರೈತರನ್ನು ಸರಕಾರ ಮತ್ತೆ ಮತ್ತೆ ಮಾತುಕತೆಗೆ ಆಹ್ವಾನಿಸುತ್ತಿದೆ. ಆದರೆ, ಆ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದೆ ರೀತಿಯಲ್ಲಿ ರೈತರು ಹೋರಾಟವನ್ನು ಮುಂದುವರೆಸುತ್ತಿರುವುದು ಸರಿಯಲ್ಲ ಎಂದು ಪೇಜಾವರ ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಯೋಧ್ಯೆ ಆಯ್ತು, ಕಾಶಿ, ಮಥುರಾಗಳಲ್ಲಿನ್ನು ಮಂದಿರ ನಿರ್ಮಾಣ ಬಾಕಿ ಇದೆ; ಬಸನಗೌಡ ಯತ್ನಾಳ್

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಭವ್ಯವಾಗಿರಲಿದೆ. ಭಾರತೀಯ ಹಿಂದೂ ಸಂಸ್ಕೃತಿಯ ಎಲ್ಲರ ಶ್ರದ್ಧೆಯ ಪ್ರತೀಕವಾಗಿ, ನಮ್ಮ ಸಂಸ್ಕೃತಿಯ ಪುನರುತ್ಥಾನದ ರೂಪದಲ್ಲಿ ತಲೆ ಎತ್ತಿ ನಿಲ್ಲಬೇಕಾಗಿದೆ.  ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಹೇಳಿದರು.

ಸನಾತನ ಧರ್ಮೀಯರು, ಹಿಂದೂ ಮತಿಯರು, ಶ್ರೀರಾಮನ ಪ್ರೇಮಿಯರು ಎಲ್ಲರನ್ನು ಗೌರವಿಸುವವರು ಉದಾರವಾಗಿ ದೇಣಿಗೆಯನ್ನು ನೀಡುತ್ತಿದ್ದಾರೆ. ಎಲ್ಲರಿಂದ ಸಂಗ್ರಹವಾಗುತ್ತಿರುವ ದೇಣಿಗೆ ಹಣ ಅವರ ಅಭಿಮಾನ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ಈ ಹಣವನ್ನು ಮಂದಿರಕ್ಕೆ ಸಮರ್ಪಿಸುತ್ತಿದ್ದೇವೆ. ನಮ್ಮೆಲ್ಲರ ಶ್ರದ್ಧೆಯ ಪ್ರತೀಕವಾಗಿ ಆ ಮಂದಿರ ತಲೆ ಎತ್ತಿ ನಿಲ್ಲಲಿದೆ. ಎಲ್ಲೆಲ್ಲಿ ಹೋಗಲು ಸಾಧ್ಯವೋ ಅಲ್ಲಿಗೆ ತೆರಳಿ ನಿಧಿ ಸಮರ್ಪಣೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಸಿಎಂ, ಗೃಹ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಬಸವ ನಾಡಿನ ಯುವಕ- ಯಾಕೆ ಗೊತ್ತಾ?ಬಳಿಕ ನಡೆದ ನಿಧಿ ಸಮರ್ಪಣಾ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ರಾಮ ಸದ್ಗುಣ ಸಂಪನ್ನನಾಗಿದ್ದ. ಆತನಲ್ಲಿದ್ದ ಸದ್ಗುಣಗಳನ್ನು ಮಕ್ಕಳಿಗೆ ತಿಳಿಸಿ ಕೊಡಬೇಕು. ರಾಮಾಯಣದಲ್ಲಿ ಇಬ್ಬರು ವ್ಯಕ್ತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.  ರಾಮ ಹೇಗೆ ಇರಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದರೆ, ರಾವಣ ಹೇಗೆ ಇರಬಾರದು ಎಂಬುದಕ್ಕೆ ಉದಾಹರಣೆಯಾಗಿದ್ದಾನೆ. ಇವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಆರ್ ಎಸ್ ಎಸ್ ಮುಖಂಡರಾದ ಅರವಿಂದರಾವ ದೇಶಪಾಂಡೆ, ಡಾ. ಸತೀಶ ಜಿಗಜಿಣಗಿ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಶ್ರೀ ಸಿದ್ದೇಶ್ವರ ಸಂಸ್ಥೆಯ ಮುಖಂಡ ಬಸಯ್ಯ ಹಿರೇಮಠ, ವಿಎಚ್‌ಪಿ ಜಿಲ್ಲಾ ಸಂಚಾಲಕ ಸುನಿಲ ಭೈರವಾಡಗಿ, ರಾಮನಗೌಡ ಬಿ. ಪಾಟೀಲ, ಮಧ್ವಾಚಾರ್ಯ ಮೊಕಾಶಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯತ್ನಾಳ ರಾಮ ಮಂದಿರ ನಿರ್ಮಾಣಕ್ಕಾಗಿ ರೂ. 5 ಲಕ್ಷ ರೂ ಚೆಕ್ ನೀಡಿದರು.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: February 7, 2021, 2:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories