ಬಳ್ಳಾರಿಯಲ್ಲಿ ಅಮ್ಮನ ಎಲೆಕ್ಷನ್​​ಗೆ ಸಾಲ ಮಾಡಿದ ಮಗನಿಂದ ಬೆಂಗಳೂರಿನಲ್ಲಿ ಕಳ್ಳತನ

ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ತಾನು ಸಖ್ಯ ಬೆಳೆಸಿದ್ದ ಯುವತಿಯ ಸಲಹೆಯಂತೆ ಆರೋಪಿ ಕಿರಣ್ ಕುಮಾರ್ ಒಂಟಿ ವೃದ್ಧೆಯ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

news18-kannada
Updated:August 8, 2020, 12:21 PM IST
ಬಳ್ಳಾರಿಯಲ್ಲಿ ಅಮ್ಮನ ಎಲೆಕ್ಷನ್​​ಗೆ ಸಾಲ ಮಾಡಿದ ಮಗನಿಂದ ಬೆಂಗಳೂರಿನಲ್ಲಿ ಕಳ್ಳತನ
ಬೆಂಗಳೂರಿನಲ್ಲಿ ಕಳ್ಳತನದ ಆರೋಪಿ ಕಿರಣ್ ಕುಮಾರ್
  • Share this:
ಬೆಂಗಳೂರು(ಆ. 08): ದೊಡ್ಡಬಿದರಕಲ್ಲಿನಲ್ಲಿ ವೃದ್ಧೆಯೊಬ್ಬರ ಮನೆಯ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಳ್ಳಾರಿ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬಾಕೆಯು ಕಳ್ಳತನವಾದ ಮನೆಯಲ್ಲಿ ಕೆಲಸ ಮಾಡುವವಳಾಗಿದ್ದಳು. ಮತ್ತೊಬ್ಬ ಆರೋಪಿಯು ತನ್ನ ತಾಯಿಯ ಚುನಾವಣೆ ಪ್ರಚಾರಕ್ಕೆ ಮಾಡಿಕೊಂಡಿದ್ದ ಸಾಲವನ್ನು ತೀರಿಸಲು ಕಳ್ಳತನದ ಕೃತ್ಯಕ್ಕಿಳಿದವನಾಗಿದ್ದಾನೆ.

ಆರೋಪಿ ಕಿರಣ್ ಕುಮಾರ್ ಅವರ ತಾಯಿ ಬಳ್ಳಾರಿಯ ಕಂಪ್ಲಿ ಟೌನ್​ನಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಚುನಾವಣೆ ಪ್ರಚಾರಕ್ಕೆ ಹಣ ಇಲ್ಲವೆಂದು ಮೂರು ಲಕ್ಷ ರೂ ಸಾಲ ಮಾಡಿ ಮಗ ಕಿರಣ್ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸಿರುತ್ತಾನೆ. ಚುನಾವಣೆಯಲ್ಲಿ ತಾಯಿ ಗೆದ್ದರೂ ಸಾಲಗಾರರ ಕಾಟ ಹೆಚ್ಚಾಗಿ ಕಿರಣ್ ಕುಮಾರ್ ಕಂಪ್ಲಿ ಬಿಟ್ಟು ಬೆಂಗಳೂರಿಗೆ ಬರುತ್ತಾನೆ.

ಇತ್ತ ದೊಡ್ಡ ಬಿದರಕಲ್ಲಿನ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಲೀಲಾವತಿಯೊಂದಿಗೆ ಕಿರಣ್ ಕುಮಾರ್ ಸ್ನೇಹ ಬೆಳೆಯುತ್ತದೆ. ಚುನಾವಣೆಗೆ ತಾನು ಮಾಡಿದ ಸಾಲದ ಬಗ್ಗೆ ಸ್ನೇಹಿತೆ ಲೀಲಾವತಿ ಬಳಿ ಈತ ಹೇಳಿಕೊಳ್ಳುತ್ತಾನೆ. ಆಗ ಲೀಲಾವತಿ ತಾನು ಮನೆಗೆಲಸ ಮಾಡುವ ಮನೆಯಲ್ಲಿನ ಒಂಟಿ ಅಜ್ಜಿಯ ಬಗ್ಗೆ ಹೇಳುತ್ತಾಳೆ.

ಇದನ್ನೂ ಓದಿ: ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಿಂತ ಗುಣಮುಖರಾದವರೇ ಹೆಚ್ಚು

ದೊಡ್ಡಬಿದರಕಲ್ಲಿ‌ನ ಲೀಲಾವತಿ ಮನೆಗೆಲಸ ಮಾಡುವ ಮನೆಯೊಂದರಲ್ಲಿ ವೃದ್ಧೆ ಲಕ್ಷ್ಮಮ್ಮ ಒಂಟಿಯಾಗಿ ಜೀವನ ನಡೆಸಿದರೂ ಆರ್ಥಿಕವಾಗಿ ಚೆನ್ನಾಗಿಯೇ ಇದ್ದರು. ಮನೆಗೆಲಸ ಮಾಡುವಾಗ ಲಕ್ಷ್ಮಮ್ಮರ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಲೀಲಾವತಿ ನೋಡಿರುತ್ತಾಳೆ. ಅಜ್ಜಿಯ ಮನೆಯಲ್ಲಿ ಕಳ್ಳತನ ಮಾಡಿದ್ರೆ ನಿನ್ನ ಸಾಲ ತೀರುತ್ತೆ ಎಂದು ಆಕೆ ಕಿರಣ್ ಕುಮಾರ್​ಗೆ ಹೇಳುತ್ತಾಳೆ.‌ ಅದರಂತೆ ಕಿರಣ್ ಕುಮಾರ್ ತನ್ನ ಸ್ನೇಹಿತನ ಜೊತೆಗೂಡಿ ಅಜ್ಜಿಯ ಮನೆಗೆ ನುಗ್ಗುತ್ತಾನೆ. ಬಾಯಿಗೆ ಬಟ್ಟೆ ತುರುಕಿ ಹಗ್ಗದಿಂದ ಕೈಕಾಲು ಕಟ್ಟುತ್ತಾನೆ. ಕೂಡಲೇ ಮನೆಯಲ್ಲಿದ್ದ ಐವತ್ತು ಸಾವಿರ ಹಣ ಹಾಗೂ ಅಜ್ಜಿಯ ಕತ್ತಲ್ಲಿದ್ದ ಚಿನ್ನದ ಸರ ಕಸಿದು ಇಬ್ಬರು ಕಳ್ಳರು ಪರಾರಿಯಾಗುತ್ತಾರೆ.

ಇದನ್ನೂ ಓದಿ: ಇವರು ಒದೆಯೋ ಪೊಲೀಸರಲ್ಲ, ಓದಿಸುವ ಪೊಲೀಸರು; ಕೊಪ್ಪಳ ಐಆರ್​ಬಿ ಆವರಣ ಕಲಿಕೆಯ ತಾಣ

ಕಳ್ಳತನ ಮಾಡಿ ಇವರು ಮನೆಯಿಂದ‌ ಓಡಿಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಗೆ  ವೃದ್ದೆ ಲಕ್ಷ್ಮಮ್ಮ ದೂರು ನೀಡುತ್ತಾರೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೀಣ್ಯ ಪೊಲೀಸರು ಆರೋಪಿ ಕಿರಣ್ ಕುಮಾರ್ ಹಾಗೂ ಆತನಿಗೆ ಸಹಾಯ ಮಾಡಿದ ಮನೆಕೆಲಸದಾಕೆ ಲೀಲಾವತಿಯನ್ನ ಪೊಲೀಸರು ಬಂಧಿಸಿದ್ದಾರೆ.

ವಿಚಾರಣೆ ವೇಳೆ ತಾಯಿಯ ಚುನಾವಣೆಗೆ ಮಾಡಿದ ಸಾಲ ತೀರಿಸಲು‌ ತಾನು ಕಳ್ಳತನ ಮಾಡಿದ್ದಾಗಿ ಕಿರಣ್ ಕುಮಾರ್ ಹೇಳಿದ್ದಾನೆ.
Published by: Vijayasarthy SN
First published: August 8, 2020, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading