ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ರಾಯಣ್ಣ, ಶಿವಾಜಿ ಪ್ರತಿಮೆಗೆ ಗೌರವ ಸಲ್ಲಿಸಿದ ಗ್ರಾಮಸ್ಥರು..!
ಸಂಗೊಳ್ಳಿ ರಾಯಣ್ಣ ಮೂರ್ತಿ ಇದ್ದ ಜಾಗದಲ್ಲಿಯೇ ಇರುತ್ತದೆ. ಪೀರನವಾಡಿ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ ಎಂದು ನಾಮಕಾರಣ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದರಂತೆ ಇಂದು ಸ್ಥಳೀಯವಾಗಿ ಎರಡು ಸಮೂದಾಯದ ಜನ ವೃತ್ತಕ್ಕೆ ನಾಮಫಲಕ ಅನಾವರಣಗೊಳಿಸಿದರು.
news18-kannada Updated:September 3, 2020, 3:19 PM IST

ಸಂಗೊಳ್ಳಿ ರಾಯಣ್ಣನ ಪ್ರತಿಮೆ
- News18 Kannada
- Last Updated: September 3, 2020, 3:19 PM IST
ಬೆಳಗಾವಿ(ಸೆಪ್ಟೆಂಬರ್. 03): ಬೆಳಗಾವಿ ಬಳಿಯ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ದೊಡ್ಡ ವಿವಾದ ಸೃಷ್ಠಿಯಾಗಿತ್ತು. ಆದರೆ, ಪೊಲೀಸ್ ಇಲಾಖೆಯ ಮಧ್ಯ ಪ್ರವೇಶದಿಂದ ಎರಡು ಸಮೂದಾಯಗಳ ನಡುವೆ ಸಂಧಾನ ನಡೆಸಲಾಗಿತ್ತು. ಇಂದು ಪರಸ್ಪರ ಒಪ್ಪಿಗೆಯ ಪ್ರಕಾರ ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ ಎಂದು ನಾಮಕರಣ ಮಾಡಲಾಯಿತು. ಈ ಸಂದರ್ಭದಲ್ಲಿ ಎರಡು ಸಮೂದಾಯದ ಜನ ಪಾಲ್ಗೊಂಡು ಗೌರವ ಸೂಚಿಸಿದರು.
ಪೀರವನಾಡಿ ವೃತ್ತದಲ್ಲಿ ಇದೇ ಆಗಸ್ಟ್ 27ರ ರಾತ್ರಿಯಲ್ಲಿ ಕರವೇ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು. ಈ ವೃತ್ತದಲ್ಲಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಸ್ಥಳೀಯ ಮರಾಠಿ ಭಾಷಿಕರು ಮೊದಲು ವಿರೋಧ ವ್ಯಕ್ತ ಪಡಿಸಿದ್ದರು. 2018ರಿಂದಲೇ ವಿವಾದ ಏರ್ಪಟ್ಟಿತ್ತು, ಆಗಸ್ಟ್ 15ರಂದು ಮೂರ್ತಿ ಸ್ಥಾಪನೆಗೆ ಸ್ಥಳೀಯ ಯುವಕರು ಮುಂದಾಗಿದ್ದರು. ಈ ವೇಳೆಯಲ್ಲಿ ಪೊಲೀಸರು ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಛತ್ರಪತಿ ಶಿವಾಜಿ ಹೆಸರು ನಾಮಕರಣಈ ವಿಚಾರ ರಾಜ್ಯದಲ್ಲಿ ದೊಡ್ಡ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇನ್ನೂ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಿದ ಕರವೇ ಕಾರ್ಯಕರ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಡ್ರಗ್ ಕೇಸ್ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?
ಬೆಳಗಾವಿ ಜಿಲ್ಲಾಡಳಿತ ಗ್ರಾಮದ ಎರಡು ಸಮೂದಾಯದ ಮುಖಂಡರ ಸಭೆಯನ್ನು ಕರೆದು ಸಂಧಾನ ಸಭೆಯನ್ನು ನಡೆಸಿತ್ತು. ರಾಯಣ್ಣ ಮೂರ್ತಿ ಇದ್ದ ಜಾಗದಲ್ಲಿಯೇ ಇರುತ್ತದೆ. ಪೀರನವಾಡಿ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ವೃತ್ತ ಎಂದು ನಾಮಕಾರಣ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅದರಂತೆ ಇಂದು ಸ್ಥಳೀಯವಾಗಿ ಎರಡು ಸಮೂದಾಯದ ಜನ ವೃತ್ತಕ್ಕೆ ನಾಮಫಲಕ ಅನಾವರಣಗೊಳಿಸಿದರು.
ಛತ್ರಪತಿ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ, ನಂತರ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಎಲ್ಲರೂ ಗೌರವ ಸಲ್ಲಿಸಿದರು. ನಂತರ ನಾಮಫಲಕ ಅನಾವರಣಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಜಯರಾಜ್ ಹಲಗೇಕರ್, ಗ್ರಾಮದಲ್ಲಿ ಎರಡು ಸಮೂದಾಯಗಳು ಪರಸ್ಪರ ಹೊಂದಾಣಿಕೆಯ ಮೂಲಕ ವಿವಾದ ಇತ್ಯರ್ಥ ಪಡಿಸಲಾಗಿದೆ. ಆದರೆ, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ದೂರು ನೀಡಲಾಗಿದ್ದು, ಅಂತರವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪೀರವನಾಡಿ ವೃತ್ತದಲ್ಲಿ ಇದೇ ಆಗಸ್ಟ್ 27ರ ರಾತ್ರಿಯಲ್ಲಿ ಕರವೇ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರು. ಈ ವೃತ್ತದಲ್ಲಿ ರಾಯಣ್ಣ ಮೂರ್ತಿ ಸ್ಥಾಪನೆಗೆ ಸ್ಥಳೀಯ ಮರಾಠಿ ಭಾಷಿಕರು ಮೊದಲು ವಿರೋಧ ವ್ಯಕ್ತ ಪಡಿಸಿದ್ದರು. 2018ರಿಂದಲೇ ವಿವಾದ ಏರ್ಪಟ್ಟಿತ್ತು, ಆಗಸ್ಟ್ 15ರಂದು ಮೂರ್ತಿ ಸ್ಥಾಪನೆಗೆ ಸ್ಥಳೀಯ ಯುವಕರು ಮುಂದಾಗಿದ್ದರು. ಈ ವೇಳೆಯಲ್ಲಿ ಪೊಲೀಸರು ಇದಕ್ಕೆ ಅನುಮತಿ ಕೊಟ್ಟಿರಲಿಲ್ಲ.