• Home
  • »
  • News
  • »
  • district
  • »
  • ಸಮೃದ್ಧವಾಗಿ ಬೆಳೆದು ಅತಿಯಾದ ತೇವಾಂಶದಿಂದ ಏಕಾಏಕಿ ರೋಗಕ್ಕೆ ತುತ್ತಾದ ಕಡಲೆ ಬೆಳೆ; ಕಂಗಾಲಾದ ರೈತ ವರ್ಗ

ಸಮೃದ್ಧವಾಗಿ ಬೆಳೆದು ಅತಿಯಾದ ತೇವಾಂಶದಿಂದ ಏಕಾಏಕಿ ರೋಗಕ್ಕೆ ತುತ್ತಾದ ಕಡಲೆ ಬೆಳೆ; ಕಂಗಾಲಾದ ರೈತ ವರ್ಗ

ತೇವಾಂಶ ಹೆಚ್ಚಳವಾಗಿದ್ದರಿಂದ ಕಡಲೆ ಬೆಳೆಗೆ ಸೊರಗು ರೋಗ ಆವರಿಸಿರುವುದು.

ತೇವಾಂಶ ಹೆಚ್ಚಳವಾಗಿದ್ದರಿಂದ ಕಡಲೆ ಬೆಳೆಗೆ ಸೊರಗು ರೋಗ ಆವರಿಸಿರುವುದು.

ತೇವಾಂಶ ಹೆಚ್ಚಳದಿಂದ ಸೊರಗು ರೋಗ ಆವರಿಸಿದ್ದು, ಅನ್ನದಾತರು ಹೈರಾಣಾಗಿದ್ದಾರೆ. ಸಮೃದ್ಧವಾಗಿ ಬೆಳೆದ ಬೆಳೆ ಏಕಾಏಕಿ ಒಣಗಿ ಹೋಗುತ್ತಿದೆ. ಅತಿಯಾದ ಮಳೆಯಿಂದ ಮುಂಗಾರು ಬೆಳೆ ಕಳೆದುಕೊಂಡ ಅನ್ನದಾತರು ಈಗ ಹಿಂಗಾರು ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

  • Share this:

ಗದಗ: ಗದಗ ಜಿಲ್ಲೆಯಲ್ಲಿ ಈ ವರ್ಷ ಅನ್ನದಾತರ ಹಣೆಬರಹ ಸರಿಯಿಲ್ಲಾ ಅಂತಾ ಕಾಣುತ್ತೇ. ಯಾಕೆಂದರೆ, ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆ, ಹಿಂಗಾರು ಹಂಗಾಮಿನ ಬೆಳೆಗೆ ಎಫೆಕ್ಟ್ ಮಾಡಿದೆ. ಹೌದು ತೇವಾಂಶ ಹೆಚ್ಚಳವಾಗಿ ಕಡಲೆ ಬೆಳೆಗೆ ರೋಗಬಾಧೆ ಆವರಿಸಿಕೊಂಡಿದೆ. ಹೀಗಾಗಿ ಗದಗ ಜಿಲ್ಲೆಯ ಅನ್ನದಾತರು ಮತ್ತೇ ಸಂಕಷ್ಟ ಎದುರಿಸುತ್ತಿದ್ದಾರೆ.


ಹೌದು, ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ, ಸೇರಿದಂತೆ ಗಜೇಂದ್ರಗಡ ಭಾಗದಲ್ಲಿ ಅತಿ ಹೆಚ್ಚು ಕಡಲೆ ಬೆಳೆಯನ್ನು ಬೆಳೆಯಲಾಗುತ್ತದೆ. ಆದರೆ ಚೆನ್ನಾಗಿ ಬೆಳೆದ ಕಡಲೆ ಬೆಳೆಗೆ ಸೊರಗು ರೋಗ ಬಾಧಿಸಿದೆ. ಹಾಗಾಗಿ ಕಡಲೆ ಬೆಳೆ ಒಣಗಿ ಹೋಗುತ್ತಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಮುಂಗಾರು ಬೆಳೆಗಳಾದ ಗೋವಿನ ಜೋಳ, ಈರುಳ್ಳಿ, ಶೇಂಗಾ, ಹೆಸರು ಬೆಳೆಗಳು ಸಹ ಮಳೆಗೆ ಆಹುತಿಯಾಗಿದ್ದವು. ಹಿಂಗಾರು ಚನ್ನಾಗಿ ಬರುತ್ತೇ ಅಂತಾ ಕಡಲೆಯನ್ನು ಬಿತ್ತನೆ ಮಾಡಿದ್ರು, ರೈತರು ಅಂದುಕೊಂಡಂತೆ ಕಡಲೆ ಬೆಳೆ ಸಹ ಚನ್ನಾಗಿ ಬೆಳೆಯುತ್ತಿದೆ. ಆದ್ರೆ ಜಮೀನಿನಲ್ಲಿ ತೇವಾಂಶ ಹೆಚ್ಚಳವಾಗಿದ್ದರಿಂದ ಸೊರಗು ರೋಗ ಆವರಿಸಿಕೊಂಡಿದ್ದು, ಕಡಲೆ ಬೆಳೆ ನಾಶವಾಗುತ್ತಿದೆ ಅಂತಾರೆ ಅನ್ನದಾತರು.


ಇದನ್ನು ಓದಿ: ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಲಾಬಿ ಮಾಡಿಲ್ಲ, ಅದರ ಪ್ರಮೇಯವೇ ನನಗೆ ಬಂದಿಲ್ಲ; ಸಚಿವೆ ಶಶಿಕಲಾ ಜೊಲ್ಲೆ


ಇನ್ನೂ ಗದಗ ಜಿಲ್ಲೆಯಾದ್ಯಂತ 1 ಲಕ್ಷ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಆದರೆ ಬಹುತೇಕ ರೈತರು ಬೆಳೆದ ಕಡಲೆ ಬೆಳೆಗೆ ರೋಗ ಆವರಿಸಿಕೊಂಡಿದೆ. ಹೀಗಾಗಿ ರೈತರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ. ಕನಿಷ್ಠ ಒಂದು ಎಕರೆ ಕಡಲೆ ಬೆಳೆಗೆ 20 ರಿಂದ 25 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಸಾಲ‌ ಸೋಲ ಮಾಡಿ ಹಾಕಿದ ಬಂಡವಾಳ ಸಹ ವಾಪಸ್ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ರೋಗ ಬಾಧೆ ತಡೆಗಟ್ಟಲು ರೈತರಿಗೆ ಮಾರ್ಗದರ್ಶನ ಮಾಡ್ತಾಯಿದ್ದಾರೆ. ಸೊರಗು ರೋಗ ಆವರಿಸಿದರೆ, ಸಸ್ಯಗಳನ್ನು ಬೇರುಸಹಿತ ಕಿತ್ತು ತೆಗೆದು ಸುಡಬೇಕು ಅಥವಾ ಮಣ್ಣಿನಲ್ಲಿ ಹೂಳಬೇಕು. 3 ಗ್ರಾಂ ಶೇ.12ರ ಕಾರ್ಬನ್‍ಡೈಜಿಂ ಮತ್ತು ಶೇ.63 ರ ಮ್ಯಾಂಕೊಜೆಬ್ ಸಂಯುಕ್ತ ಶಿಲೀಂದ್ರ ನಾಶಕವನ್ನು ಅಥವಾ 5 ಗ್ರಾಂ ಟ್ರೈಕೋಡರ್ಮಾ ಶಿಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ರೋಗ ಪೀಡಿತ ಸಸ್ಯವಿರುವ ಭಾಗದಲ್ಲಿ ಮತ್ತು ಬಾಧಿತ ಗಿಡದ ಸುತ್ತಮುತ್ತಲಿರುವ ಗಿಡಗಳ ಬುಡದ ಸುತ್ತಲೂ ಪೂರ್ಣ ಒದ್ದೆಯಾಗುವಂತೆ ಸುರಿಯಬೇಕು ಎಂದು ಕೃಷಿ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ.


ತೇವಾಂಶ ಹೆಚ್ಚಳದಿಂದ ಸೊರಗು ರೋಗ ಆವರಿಸಿದ್ದು, ಅನ್ನದಾತರು ಹೈರಾಣಾಗಿದ್ದಾರೆ. ಸಮೃದ್ಧವಾಗಿ ಬೆಳೆದ ಬೆಳೆ ಏಕಾಏಕಿ ಒಣಗಿ ಹೋಗುತ್ತಿದೆ. ಅತಿಯಾದ ಮಳೆಯಿಂದ ಮುಂಗಾರು ಬೆಳೆ ಕಳೆದುಕೊಂಡ ಅನ್ನದಾತರು ಈಗ ಹಿಂಗಾರು ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.


ವರದಿ; ಸಂತೋಷ ಕೊಣ್ಣೂರ

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು