HOME » NEWS » District » PATIENTS SHOWS ANGER AGAINST WENLOCK COVID HOSPITAL IN MANGALORE SNVS

ಮಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರ: ರೋಗಿಗಳ ಆರೋಪ

ಕೋವಿಡ್ ಐಸೋಲೇಷನ್ ವಾರ್ಡ್ಗಳು ರಾತ್ರಿ ಪೂರ್ತಿ ಲಾಕ್ ಆಗಲ್ಲ. ಹೊರಗೆ ಯಾವುದೇ ಸಿಬ್ಬಂದಿ ಕೂಡ ಕಾವಲು ಹಾಕುತ್ತಿಲ್ಲ. ಯಾರು ಬೇಕಾದರೂ ಹೊರ ಹೋಗಬಹುದ ಅಂತಾ ಖುದ್ದು ರೋಗಿಯೊಬ್ಬ ವಿವರಿಸಿದ್ದಾನೆ.

news18-kannada
Updated:June 25, 2020, 7:20 AM IST
ಮಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಆಗರ: ರೋಗಿಗಳ ಆರೋಪ
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ
  • Share this:
ಮಂಗಳೂರು: ಕೊರೊನಾ ಇಡೀ ವ್ಯವಸ್ಥೆಯನ್ನೆ ಅಲ್ಲೋಲ ಕಲ್ಲೋಲ ಮಾಡಿದೆ. ಇದ್ರಿಂದ ಜನರು ಹೆದರಿ ಹೋಗಿದ್ದಾರೆ. ಇನ್ನು ಸೋಂಕಿತರು ಆಸ್ಪತ್ರೆಯಲ್ಲಿ ನಲುಗಿ ಹೋಗುತ್ತಿದ್ದಾರೆ. ಈ ಮಧ್ಯೆ ಸೋಂಕಿತರಿಗೆ ಮತ್ತು ಶಂಕಿತರಿಗೆ ನೀಡುತ್ತಿರುವ ಮಾತ್ರೆ ಮೇಲೆಯೇ ಮಂಗಳೂರಿನಲ್ಲಿರುವ ರೋಗಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಯ ಈಗಿನ ನೈಜ ಪರಿಸ್ಥಿತಿ.

ಕೊರೊನಾ ಬಂದ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದು ಆಸ್ಪತ್ರೆಯೊಂದು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದ್ದು ಅಂದ್ರೆ ಅದು ಮಂಗಳೂರಿನಲ್ಲಿರುವ ಇದೇ ವೆನ್​ಲಾಕ್ ಆಸ್ಪತ್ರೆಯೇ. ಈ ಆಸ್ಪತ್ರೆಯ ಹೊಸ ಕಟ್ಟಡವನ್ನ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಟ್ಟು ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದ್ರೆ ಈಗ ಕೋವಿಡ್ ಆಸ್ಪತ್ರೆಯೊಳಗಿನ ಅವ್ಯವಸ್ಥೆ ಒಂದೊಂದಾಗಿ ಹೊರಗೆ ಬರುತ್ತಿದೆ.  ಮಂಗಳೂರಿನ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನ ಕರ್ಮಕಾಂಡವನ್ನು ಒಬ್ಬ ರೋಗಿ ವಿಡಿಯೋ ಮಾಡಿ ಬಯಲಿಗೆಳಿದಿದ್ದಾನೆ.

ಮಂಗಳೂರಿನ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್​ನಲ್ಲಿ ಚಾಕೊಲೇಟ್ ಮಾದರಿಯಲ್ಲಿರುವ ಈ ಬ್ರೌನ್ ಕಲರ್ ಮಾತ್ರೆಯನ್ನು ನೋಡಿ ರೋಗಿಯೊಬ್ಬ ಅನುಮಾನಗೊಂಡಿದ್ದಾನೆ. ಈ ಮಾತ್ರೆ ಬಿಳಿ ಬಣ್ಣವಿರಬೇಕಿತ್ತು. ಆದ್ರೆ ಬ್ರೌನ್ ಆಗಿದೆ. ಇದು ಅವಧಿ ಮೀರಿದ್ಯಾ ಅಂತಾ ನೇರವಾಗಿ ವೈದ್ಯರನ್ನು ಪ್ರಶ್ನಿಸುತ್ತಾನೆ. ಆದ್ರೆ ವೈದ್ಯರು ರೋಗಿಯ ಅನುಮಾನ ನಿವಾರಣೆ ಮಾಡೋದನ್ನು ಬಿಟ್ಟು ಆತನನ್ನು ಅಸಡ್ಡೆ ಮಾಡಿ ಹೋಗುತ್ತಾರೆ. ಆದ್ರಿಂದ ಈ ರೋಗಿ ಇನ್ನು ಪ್ಯಾನಿಕ್ ಆಗಿದ್ದಾನೆ.

ಇದನ್ನೂ ಓದಿ: ಮಂಡ್ಯದಲ್ಲಿ ಹಳೇ ಬ್ಲಾಕ್​​ ಅಂಡ್​​ ವೈಟ್​​​ ಟಿವಿಗೆ 10 ಲಕ್ಷ ರೂ. ಆಫರ್​​​? - ಇದರ ಹಿಂದೆ ಬಿದ್ದ ಜನ

ಇನ್ನು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯಲು ಸರಿಯಾಗಿ ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ. ನೀರು ಇಲ್ಲದೆ ಖಾಲಿ ಹಂಡೆಯನ್ನು ಇಡಲಾಗಿದೆ. ಕಾಫಿ, ಚಹಾ, ತಿಂಡಿಯನ್ನು ಬೇಕಾಬಿಟ್ಟಿಯಾಗಿ ಇಟ್ಟು ಹೋಗುತ್ತಾರೆ. ಈ ಬಗ್ಗೆ ಕೂಡ ರೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲ, ಇನ್ನೂ ಹಲವಾರು ಸಮಸ್ಯೆಗಳು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿದೆ. ಮೊನ್ನೆ ಮೊನ್ನೆ ವಿದೇಶದಿಂದ ಬಂದ ರೋಗಿಯನ್ನು ಐಸೋಲೇಷನ್ ಮಾಡಿದ್ದು, ಆತನಿಗೆ ಪಾಸಿಟಿವ್ ಬಂದಿದೆ. ಎಲ್ಲರನ್ನೂ ಒಂದೇ ವಾರ್ಡ್​ನಲ್ಲಿ ಇಟ್ಟಿರುವ ಬಗ್ಗೆ ರೋಗಿಗಳು ಆಕ್ಷೇಪಣೆ ಮಾಡಿದ್ದಾರೆ. ಎಲ್ಲರೂ ಒಂದೇ ಬಾತ್ ರೂಮ್ ಬಳಸುತ್ತಿದ್ದಾರೆ. ಸ್ಪೀಡ್ ರಿಕವರಿ ಆಗೋದು ನಮಗೆ ಮುಖ್ಯ. ಆದ್ರೆ ಇಲ್ಲಿ ಎಲ್ಲರನ್ನೂ ಒಂದೇ ವಾರ್ಡ್ ನಲ್ಲಿ ಇಟ್ಟಿದ್ದಾರೆ. ಎಲ್ಲಾ ಒಟ್ಟೊಟ್ಟಿಗೆ ನಿಂತು ಮಾತನಾಡುತ್ತಿದ್ದಾರೆ. ಇದನ್ನು ಯಾರು ನಿಯಂತ್ರಿಸೋದಿಲ್ಲ. ಇದ್ರಿಂದ ಬೇರೆ ರೋಗಿಗಳಿಗೆ ತೊಂದರೆಯಾಗಿದೆ. ನಮ್ಮನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೋವಿಡ್ ಐಸೋಲೇಷನ್ ವಾರ್ಡ್​ಗಳು ರಾತ್ರಿ ಪೂರ್ತಿ ಲಾಕ್ ಆಗಲ್ಲ. ಹೊರಗೆ ಯಾವುದೇ ಸಿಬ್ಬಂದಿ ಕೂಡ ಕಾವಲು ಹಾಕುತ್ತಿಲ್ಲ. ಯಾರು ಬೇಕಾದರೂ ಹೊರ ಹೋಗಬಹುದ ಅಂತಾ ಖುದ್ದು ರೋಗಿಯೊಬ್ಬ ವಿವರಿಸಿದ್ದಾನೆ. ಐಸೋಲೇಶನ್ ವಾರ್ಡ್ ನಿಂದ ಸಸ್ಪೆಕ್ಟ್ ವಾರ್ಡ್ ಗೆ ಹೋಗಲು ಸಾಧ್ಯವಿದೆ. ಇನ್ನು ಐಸಿಯು ಸೇರಿದಂತೆ ಹೊರಗೆ ಕೂಡ ಹೋಗಬಹುದು ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಆನ್​ಲೈನ್ ಕ್ಲಾಸ್​ನಲ್ಲೇ ಶಿಕ್ಷಕಿಗೆ ಲೈಂಗಿಕ ಕಿರುಕುಳ; ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಸೈಬರ್ ಕ್ರೈಂ ಪ್ರಕರಣಗಳು

ಬಾತ್ ರೂಂ ಶುಚಿಯಾಗಿಲ್ಲ. ಎಲ್ಲರೂ ಬಳಿಸಿದ ಮಾಸ್ಕ್ ಅನ್ನು ಬಾತ್ ರೂಮಿನಲ್ಲಿಯೇ ಇಟ್ಟು ಬರುತ್ತಾರೆ. ಇದ್ರಿಂದ ಮಾಸ್ಕ್ ರಾಶಿಯೇ ಬಾತ್ ರೂಂ ನಲ್ಲಿದೆ. ಎಲ್ಲರೂ ಒಂದೇ ಬಾತ್ ರೂಂ ಬಳಸೋದ್ರಿಂದ ಆಪಾಯವಿದೆ.

ಒಂದು ಮೂಲದ ಪ್ರಕಾರ ಇಲ್ಲಿ ಕೊಡಲಾಗುತ್ತಿರುವ ಮಾತ್ರೆ ಅವಧಿ ಮೀರಿದ ಮಾತ್ರೆಗಳಲ್ಲ. ಆದ್ರೆ ಅವುಗಳ ಕಲರ್ ನೋಡಿ ರೋಗಿಗಳು ಪ್ಯಾನಿಕ್ ಆಗಬಾರದು ಅಂತಾ ವೈದ್ಯರು ಕೊರೊನಾ ಪಾಸಿಟಿವ್ ಇದ್ದವರಿಗೆ ತಿಳಿ ಹೇಳಿದ್ದಾರೆ ಅನ್ನೊ ಮಾಹಿತಿ ಸಿಕ್ಕಿದೆ. ಇನ್ನು ಈ ಕೆಲಸವನ್ನು ರೋಗಿಗಳು ಅನುಮಾನ ವ್ಯಕ್ತಪಡಿಸಿದಾಗಲೇ ಮಾಡಿದ್ದರೆ ಈ ಅವಾಂತರ ಸೃಷ್ಟಿಯಾಗುತ್ತಿರಲಿಲ್ಲ. ಇಲ್ಲಿರುವ ಬೇರೆ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆ ಹರಿಸಬೇಕಾಗಿದೆ.ಆದರೆ ಜಿಲ್ಲಾಡಳಿತ ಈ ಆರೋಪಗಳನ್ನು ನಿರಾಕರಿಸಿದೆ. ಈ ಬಗ್ಗೆ  ಪ್ರತಿಕ್ರಿಯಿಸಿರುವ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಗಳು ಸರಿಯಾಗಿದ್ದು, ಸುಳ್ಳು ಆರೋಪ ಮಾಡಲಾಗಿದೆ. ಸೋಂಕಿತರಿಗೆ ವಿಟಮಿನ್ ಸಿ ಮಾತ್ರೆಗಳನ್ನು ನೀಡಲಾಗುತ್ತಿದೆ.  ಯಾರಿಗೂ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲು ವ್ಯವಸ್ಥೆ ಇಲ್ಲ. ಆದರೆ ಸೋಂಕಿತರ ಬೆಡ್​ಗಳ ನಡುವೆ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸಾಧ್ಯವಿಲ್ಲ. ಎಲ್ಲರಿಗೂ ಉತ್ತಮವಾದ ಆಹಾರ ವ್ಯವಸ್ಥೆ ಇದೆ. ಆದರೂ ಕೆಲವೊಂದು ರೋಗಿಗಳು ಸುಳ್ಳು ಆರೋಪಗಳು ಮಾಡಿದ್ದಾರೆ ಎಂದು ಹೇಳಿದ್ದಾರೆ.
First published: June 25, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading