ಹೊಸ ರಸ್ತೆ ಮಾಡಿದ 15 ದಿನಕ್ಕೆ ಪ್ಯಾಚ್ ವರ್ಕ ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಚಿವರ ಕ್ಷೇತ್ರ

ಸಚಿವರ ಸ್ವಂತ ಕ್ಷೇತ್ರದಲ್ಲಿ ಇಂತಹ ಕಳಪೆ ಮಟ್ಟದ ರಸ್ತೆಗಳನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ನಿರ್ಮಾಣ ಮಾಡಿದ್ರೆ ಇನ್ನುಳಿದ ಕ್ಷೇತ್ರಗಳ ಕಥೆ ಹೇಗೆ ಎನ್ನು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿವೆ.

news18-kannada
Updated:July 26, 2020, 8:11 AM IST
ಹೊಸ ರಸ್ತೆ ಮಾಡಿದ 15 ದಿನಕ್ಕೆ ಪ್ಯಾಚ್ ವರ್ಕ ; ಕಳಪೆ ಕಾಮಗಾರಿಗೆ ಸಾಕ್ಷಿಯಾದ ಸಚಿವರ ಕ್ಷೇತ್ರ
ರಸ್ತೆ ಮಧ್ಯೆದಲ್ಲಿ ಬಿದ್ದಿರುವ ಗುಂಡಿಗಳು
  • Share this:
ಚಿಕ್ಕೋಡಿ(ಜುಲೈ.26): ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಅಂದ ಹಾಗೆ ಇಲ್ಲಿನ ರಸ್ತೆಯ ಕಥೆ ಆಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ರಸ್ತೆಯ ಕಳಪೆ ಕಾಮಗಾರಿಗೆ ಕನ್ನಡಿ ತೋರಿಸುವ ಕೆಲಸ ಇದು. ನಗರದ ಅಕ್ಕೋಳ ರಸ್ತೆಯ ಸೋಮನಾಥ ಮಂದಿರದಿಂದ ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ರಸ್ತೆ ಕಾಮಗಾರಿ ಮಾಡಿದ ಕೇವಲ 15 ದಿನಗಳಲ್ಲಿ ಹದಗೆಟ್ಟಿದ್ದು, ಈ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದಿಂದ ಪ್ರಮುಖ ಉಪ ನಗರಗಳಿಗೆ ಹೋಗಲು ಈ ರಸ್ತೆ ಬಹಳ ಅನುಕೂಲವಾಗಿದು, ಅಕ್ಕೋಳ ರಸ್ತೆಯಿಂದ ಚಿಕ್ಕೋಡಿ ರಸ್ತೆಗೆ ಕುಡುವ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಬೇಕೆಂದು ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಾಗಿತ್ತು ಈ ಬೇಡಿಕೆಯನ್ನು ಮನಗಂಡ ಸಚಿವೆ ಶಶಿಕಲಾ ಜೊಲ್ಲೆಯವರು ನಾಗರಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಶಶಿಕಲಾ ಜೊಲ್ಲೆಯವರು ಲೋಕೋಪಯೋಗಿ ಇಲಾಖೆಯಿಂದ ಸುಮಾರು 90 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಗುತ್ತಿಗೆದಾರ ಧಾರಾಕಾರ ಸುರಿಯುವ ಮಳೆಯಲ್ಲಿಯೇ ತರಾತುರಿಯಲ್ಲಿ ಕಳಪೆ ಮಟ್ಟದ  ಕಾಮಗಾರಿಯನ್ನು ಮಾಡಿದ್ದರಿಂದ ರಸ್ತೆಯು ಹದಿನೈದು ದಿನಗಳಲ್ಲಿ ಕೆಟ್ಟು ನಿಂತಿದೆ.

ರಸ್ತೆ ನಿರ್ಮಾಣ ಮಾಡಿದ ಬರಿ 15 ದಿನಗಳಲ್ಲಿ ರಸ್ತೆ ಮಧ್ಯೆ ದೊಡ್ಡದಾದ ಪಾಟ್ ಹೋಲಗಳು ನಿರ್ಮಾಣ ವಾಗಿದ್ದು ಹಣ ಉಳಿಸಲು ಗುತ್ತಿಗೆದಾರ ಬರಿ ಶೇ. 30 ರಷ್ಟು ಮಾತ್ರ ಹಣ ಖರ್ಚು ಮಾಡು ಉಳಿದ ಹಣವನ್ನ ತನ್ನ ಜೇಬಿಗೆ ಇಳಿಸಿದ್ದಾನೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ.

ಸಚಿವರ ತವರಲ್ಲೆ ಅಧಿಕಾರಿಗಳ ಬೇಜವಾಬ್ದಾರಿತನ

ನಿಪ್ಪಾಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಅವರ ಸ್ವಂತ ಕ್ಷೇತ್ರ ನಿಪ್ಪಾಣಿ ನಿತ್ಯವೂ ಇಲ್ಲಿ ಸಚಿವರ ಓಡಾಡುತ್ತಾರೆ. ಸಚಿವರ ಸ್ವಂತ ಕ್ಷೇತ್ರದಲ್ಲಿ ಇಂತಹ ಕಳಪೆ ಮಟ್ಟದ ರಸ್ತೆಗಳನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುತ್ತಿಗೆದಾರರು ನಿರ್ಮಾಣ ಮಾಡಿದ್ರೆ ಇನ್ನುಳಿದ ಕ್ಷೇತ್ರಗಳ ಕಥೆ ಹೇಗೆ ಎನ್ನು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿವೆ.

ಇದನ್ನೂ ಓದಿ : ಹಲೋ ಸರ್ ನಿಮಗೆ ಪಾಸಿಟಿವ್ ಇದೆ ಎಲ್ಲಿದ್ದೀರಿ ? ಹೀಗಂತ ಡಿಸಿಗೆ ಫೋನ್ ಮಾಡಿದ ಸಿಬ್ಬಂದಿ; ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿದ ಸೋಂಕಿತ

ಇನ್ನು ರಸ್ತೆ ನಿರ್ಮಾಣದ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸಂಬಂಧಪಟ್ಟ ಗುತ್ತಿಗೆದಾರನಿಗೆ ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡಲು ತಿಳಿಸಿದ್ದು, ಈಗ ಗುತ್ತಿಗೆದಾರ ಈ ರಸ್ತೆಯಲ್ಲಿ ಪ್ಯಾಚ್ ವರ್ಕ್ ಕೆಲಸವನ್ನು ಆರಂಭಿಸಿದ್ದಾರೆ.ಇನ್ನು ಕಳಪೆ ಕಾಮಗಾರಿಯ ವಿಚಾರವಾಗಿ ಅಧಿಕಾರಿಗಳನ್ನ ಕೇಳಿದ್ರೆ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಳೆ ಬಂದ ಕಾರಣ ಅಲ್ಲಲ್ಲಿ ತೆಂಗ್ಗುಗಳು ಬಿದ್ದಿದ್ದು, ಅವುಗಳನ್ನ ಮತ್ತೊಮ್ಮೆ ಪ್ಯಾಚ್ ವರ್ಕ್ ಮಾಡಲು ಗುತ್ತಿಗೆದಾರನಿಗೆ ತಿಳಿಸಲಾಗಿದೆ ಮಾಡುತ್ತಾರೆ ಎಂದು  ಹೇಳಿ ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಚಿಕ್ಕ ರಸ್ತೆಯ ನಿರ್ಮಾಣ ಮಾಡುವುದರಲ್ಲು ಗುತ್ತಿಗೆದಾರ ಹಾಗೂ ಅಧಿಕಾರಿಗಳು ಕಳಪೆ ಮಟ್ಟದ ಕಾಮಗಾರಿಗೆ ಕೈ ಹಾಕಿರುವುದು ವಿಪರ್ಯಾಸವೆ ಸರಿ.
Published by: G Hareeshkumar
First published: July 26, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading