ಬೆಂಗಳೂರು (ಮೇ 26); ಸ್ಟಾರ್ ಹೋಟೆಲ್ಗಳಲ್ಲಿ ಕ್ವಾರಂಟೈನ್ಗೆ ಒಳಗಾಗಲು ಹಣವಿಲ್ಲದ ಕಾರಣ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಬೆಳಗ್ಗೆಯಿಂದ ಸಂಜೆವರೆಗೆ ವಿಮಾನ ನಿಲ್ದಾಣದಲ್ಲೇ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ನಾಲ್ಕನೇ ಹಂತದ ಲಾಕ್ಡೌನ್ ಮುಗಿದ ನಂತರ ಸೋಮವಾರದಿಂದ ದೇಶದಾದ್ಯಂತ ದೇಶೀಯ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ದೇಶದ ನಾನಾ ಕಡೆಗಳಿಂದ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಾರೆ. ಆದರೆ, ವಿಮಾನ ಯಾನಕ್ಕೂ ಮುನ್ನವೇ ಎಲ್ಲರಿಗೂ ಕಡ್ಡಾಯವಾಗಿ 07 ದಿನ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಷರತ್ತು ವಿಧಿಸಲಾಗಿದೆ.
ಅಲ್ಲದೆ, ಪ್ರಯಾಣಿಕರ ಸೌಕರ್ಯಕ್ಕೆ ತಕ್ಕಂತೆ ಸರ್ಕಾರವೇ ಐವ್ ಸ್ಟಾರ್ ತ್ರೀ ಸ್ಟಾರ್ ಹೋಟೆಲ್ಗಳಲ್ಲಿ ಕ್ವಾರಂಟೈನ್ಗೆ ಅವಕಾಶ ಕಲ್ಪಿಸಿದೆ. ಆದರೆ, ಇದಕ್ಕೆ ಹಣವನ್ನು ಪ್ರಯಾಣಿಕರೇ ಭರ್ತಿ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಆದರೆ, ಇಂದು ದೇಶದ ನಾನಾ ಕಡೆಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಪ್ರಯಾಣಿಕರ ಪೈಕಿ ಸುಮಾರು 40 ಜನ ಪ್ರಯಾಣಿಕರು ಕ್ವಾರಂಟೈನ್ಗೆ ನೀಡಲು ಹಣವಿಲ್ಲದೆ ಬೆಳಗ್ಗೆಯಿಂದ ಏರ್ ಪೋರ್ಟ್ ಟರ್ಮಿನಲ್ ಒಳಗೆ ಉಳಿದಿದ್ದಾರೆ. ಹೀಗಾಗಿ ಹಣವಿಲ್ಲದ ಪ್ರಯಾಣಿಕರಿಗೆ ಅಧಿಕಾರಿಗಳು ಸರ್ಕಾರಿ ಹಾಸ್ಟೆಲ್ಗಳಲ್ಲಿ ಉಚಿತ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಒದಿ : Bangalore Rains: ಬೆಂಗಳೂರಿನಲ್ಲಿ ಭಾರೀ ಮಳೆ; ಧರೆಗುರುಳಿದ ಮರ, ಜಲಾವೃತವಾದ ರಸ್ತೆ, ಜನಜೀವನ ಅಸ್ತವ್ಯಸ್ತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ