HOME » NEWS » District » PARTY WILL TAKE ACTION AGAINST WHO SPREAD FAKE NEWS SAYS CT RAVI RHHSN VCTV

ಕಳ್ಳನ ಹೆಂಡತಿ ಯಾವತ್ತಿದ್ರು .... ಡ್ಯಾಷ್!: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿ

ನಮಗೆ ಯೋಚನೆ ಮಾಡಲು ಪರುಸೊತ್ತು ಇಲ್ಲ. ಕೆಲಸ ಇಲ್ಲದವರಿಗೆ ಈ ರೀತಿ ಸುಳ್ಳು ಸುದ್ದಿ ಸೃಷ್ಟಿ ಮಾಡುವುದೇ ಕೆಲಸ. ಪಕ್ಷ ಎಲ್ಲವನ್ನೂ ಗಮನಿಸುತ್ತಿರುತ್ತೆ. ಸಮಯ ಬಂದಾಗ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದರು.

news18-kannada
Updated:June 22, 2021, 9:45 PM IST
ಕಳ್ಳನ ಹೆಂಡತಿ ಯಾವತ್ತಿದ್ರು .... ಡ್ಯಾಷ್!: ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿ
ಸಿ ಟಿ ರವಿ.
  • Share this:
ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಹಾಗೂ ಅರುಣ್ ಸಿಂಗ್ ವರದಿ ನೀಡಿದರೂ ಎಂಬ ಎರಡೂ ಸುದ್ದಿ ಸುಳ್ಳು. ಸುಳ್ಳು ಸುದ್ದಿ ಹಬ್ಬಿಸಿದವರು ಯಾರೆಂದು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ. ಕಳ್ಳನ ಹೆಂಡತಿ ಯಾವತ್ತಿದ್ರೂ ..... ಡ್ಯಾಷ್ ಎಂದು ಸಿ.ಟಿ.ರವಿ ಅವರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಭದ್ರಾ ನದಿ ಬಳಿ ಕೊರೋನಾದಿಂದ ಸತ್ತವರ ಅಸ್ಥಿ ವಿಸರ್ಜನೆ ಬಳಿಕ ಮಾತನಾಡಿದ ಅವರು, ಉದ್ದೇಶಪೂರ್ವಕವಾಗೋ, ದುರುದ್ದೇಶ ಪೂರ್ವಕವಾಗೋ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ. ಅರುಣ್ ಸಿಂಗ್ ನಾನು ಕಳೆದ 30 ವರ್ಷಗಳ ಒಡನಾಡಿಗಳು. ಫೋನ್ ಮಾಡಿ ಮಾತನಾಡಿದೆ. ಅವರು ಮೂರು ದಿನ ಕೇಂದ್ರದಲ್ಲೇ ಇಲ್ಲ. ಆದರೆ, ಕೆಲವು ಪ್ರಮುಖ ಪತ್ರಿಕೆಗಳು, ಸುದ್ದಿವಾಹಿನಿಗಳು ಅರುಣ್ ಸಿಂಗ್ ವರದಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನ ಹಬ್ಬಿಸಿದವು. ಇದರ ಹಿಂದೆ ಯಾರದ್ದೋ ಷಡ್ಯಂತ್ರ ಇದೆ. ಷಡ್ಯಂತ್ರದ ಕಾರಣದಿಂದಾಗಿಯೇ ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಸುದ್ದಿ ಬಿಟ್ಟು ಚರ್ಚೆ ಹುಟ್ಟು ಹಾಕ್ತಾರೆ. ಚರ್ಚೆಗೆ ಬಿಟ್ಟು ಕ್ರಿಯೆ, ಪ್ರತಿಕ್ರಿಯೆ ಕೇಳ್ತಾರೆ. ಕ್ರಿಯೆ-ಪ್ರತಿಕ್ರಿಯೇ ಮೂಲಕ ಅದೇ ಜೀವಂತವಾಗಿರುತ್ತೆ ಎಂದು ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದರು.

ಸುಳ್ಳು ಸುದ್ದಿಯ ಸೃಷ್ಠಿಕರ್ತರು ಹಿಂಗೆಲ್ಲಾ ಸೃಷ್ಟಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಕೆಲಸ ಇಲ್ಲದವರು ಅದನ್ನ ಮಾಡುತ್ತಾರೆ. ನಾವು ಜನರ ಮಧ್ಯೆ ಇದ್ದು ಕೆಲಸ ಮಾಡುವವರು. ಕ್ಷೇತ್ರಕ್ಕೆ ಬಂದರೆ ಜನರ ಜೊತೆ ಇರುತ್ತೇವೆ. ಇಲ್ಲವಾದರೆ ಸಂಘಟನೆ ಕೆಲಸದಲ್ಲಿ ಇರುತ್ತೇವೆ. ನಮಗೆ ಯೋಚನೆ ಮಾಡಲು ಪರುಸೊತ್ತು ಇಲ್ಲ. ಕೆಲಸ ಇಲ್ಲದವರಿಗೆ ಈ ರೀತಿ ಸುಳ್ಳು ಸುದ್ದಿ ಸೃಷ್ಟಿ ಮಾಡುವುದೇ ಕೆಲಸ. ಪಕ್ಷ ಎಲ್ಲವನ್ನೂ ಗಮನಿಸುತ್ತಿರುತ್ತೆ. ಸಮಯ ಬಂದಾಗ ಸೂಕ್ತ ಕ್ರಮ ಕೈಗೊಳ್ಳುತ್ತೆ ಎಂದರು.

ಇದನ್ನು ಓದಿ: ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ; ಪ್ರಕರಣದ ತನಿಖೆ ಚುರುಕು!

46 ಅನಾಥ ಶವಗಳಿಗೆ ಮುಕ್ತಿ, ಭದ್ರಾ ನದಿಯಲ್ಲಿ ಅಸ್ತಿ ವಿಸರ್ಜನೆ

ಕೊರೋನಾ ಎರಡನೇ ಅಲೆಯಿಂದ ಸಾವನ್ನಪ್ಪಿದ ಅನಾಥ ಹಾಗೂ ನಿರ್ಗತಿಕ ಶವಗಳ ಚಿತಾಭಸ್ಮವನ್ನ ಜಿಲ್ಲಾ ಬಿಜೆಪಿ ನಾಯಕರು ತಾಲೂಕಿನ ಭದ್ರಾ ನದಿಯಲ್ಲಿ ವಿಸರ್ಜಿಸಿದ್ದಾರೆ. ಇಂದು ತಾಲೂಕಿನ ಖಾಂಡ್ಯ ಸಮೀಪದ ಭದ್ರೆಯ ಒಡಲಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಸಂಸದೆ ಶೋಭಾ ಕರಂದ್ಲಾಜೆ ಅವರು 46 ಜನರ ಚಿತಾಭಸ್ಮವನ್ನ ವಿಸರ್ಜಿಸಿ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಿದರು. ತಾಲೂಕು ಆಡಳಿತ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿ-ವಿಧಾನ ನೆರವೇರಿತು. ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಈವರೆಗೆ 328 ಜನ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಲ್ಲಿ 189 ಜನ ಸಾವನ್ನಪ್ಪಿದ್ದಾರೆ. ಕೆಲವು ಮೃತದೇಹಗಳನ್ನು ಪಡೆದುಕೊಂಡ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಿದ್ದರು. ಕೆಲ ಮೃತದೇಹಗಳನ್ನ ಪಡೆದುಕೊಳ್ಳಲು ಸಂಬಂಧಿಕರು ಯಾರೂ ಬರಲಿಲ್ಲ. ವಾರಸುದಾರರಿಲ್ಲದ 46 ಅನಾಥ ಶವಗಳಿಗೆ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು, ಸಂಘ-ಸಂಸ್ಥೆಗಳಿಗೆ ಸಂಬಂಧಿಕರಂತೆ ಅಂತ್ಯ ಸಂಸ್ಕಾರ ನಡೆಸಿದ್ದರು. ಆ 46 ಅನಾಥ ಶವಗಳ ಅಂತ್ಯಕ್ರಿಯೆ ಬಳಿಕ ಚಿತಾಭಸ್ಮವನ್ನ ಪಡೆದುಕೊಳ್ಳಲೂ ಯಾರು ಬಂದಿರಲಿಲ್ಲ. ಹಾಗಾಗಿ, ಅವರ ಚಿತಾಭಸ್ಮವನ್ನು ನಗರದ ಚಿತಾಗಾರದಲ್ಲಿ ಇಡಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಯಾರು ಪಡೆದುಕೊಳ್ಳದ ಅಸ್ಥಿಯನ್ನ ವಿಸರ್ಜಿಸಲು ಜಿಲ್ಲಾ ಬಿಜೆಪಿ ಹಾಗೂ ತಾಲ್ಲೂಕು ಆಡಳಿತ ಮುಂದಾಗಿ ಇಂದು ಆ 46 ಜನರ ಅಸ್ಥಿಯನ್ನ ಭದ್ರೆಯ ಒಡಲಿಲ್ಲ ವಿಸರ್ಜಿಸಿದ್ದಾರೆ.
Youtube Video
ಆಂಬುಲೆನ್ಸ್ ಮೂಲಕ 46 ಅಸ್ಥಿಯನ್ನೂ ಖಾಂಡ್ಯ ಸಮೀಪದ ಮಾರ್ಕಂಡೇಶ್ವರ ದೇವಾಲಯದ ಹೊರಭಾಗದ ಅಸ್ಥಿ ವಿಸರ್ಜನಾ ಸ್ಥಳದಲ್ಲಿ ಆಗಮ ಪುರೋಹಿತರೊಂದಿಗೆ ಪೂಜಾ-ಕೈಂಕರ್ಯದ ಬಳಿಕ ವಿಸರ್ಜಿಸಿದರು. ಮೃತರ ಪೋಷಕರು, ಸಹೋದರರು ಸ್ಥಾನದಲ್ಲಿ ಕೂತು ಈಶ್ವರಹಳ್ಳಿ ಮಹೇಶ್, ಅರೆನೂರು ಸಂದೇಶ್, ಹುಯಿಗೆರೆ ವಾಸು ಹಾಗೂ ರವಿ ಅಂತಿವ ವಿಧಿವಿಧಾನ ನಡೆಸಿರು. ಪುರೋಹಿತರಾದ ಮಂಜುನಾಥ್ ಭಟ್, ಪ್ರಸಾದ್ ಭಟ್, ಜಗದೀಶ್, ಭರ್ಗವ್ ಭಟ್ ನೇತೃತ್ವದಲ್ಲಿ ಅಸ್ಥಿ ವಿಸರ್ಜನ ಕಾರ್ಯಕ್ರಮ ನಡೆಯಿತು. ಬಳಿಕ ಮಡಕೆಯಲ್ಲಿದ್ದ ಚಿತಾ ಭಸ್ಮವನ್ನ ಭದ್ರಾನದಿಯಲ್ಲಿ ವಿಸರ್ಜಿಸಿದರು. ಈ ವೇಳೆ ಕೊರೊನಾ ನಿಯಮ ಗಾಳಿಗೆ ತೂರಿದ ಜನನಾಯಕರು, ಸಾಮಾಜಿಕ ಅಂತರ ಮೆರೆತು ಅಸ್ತಿ ವಿಸರ್ಜನೆ ಕಾರ್ಯದಲ್ಲಿ ಭಾಗಿಯಾಗಿದ್ದರು.
Published by: HR Ramesh
First published: June 22, 2021, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories