HOME » NEWS » District » PARTY WILL OBSERVED EVERYTHING SAYS MP BY RAGHAVENDRA RHHSN VCTV

ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ, ಸಮಯ ಬಂದಾಗ ಉತ್ತರ ಕೊಡ್ತಾರೆ; ಯತ್ನಾಳ್​ಗೆ ಬಿ.ವೈ. ರಾಘವೇಂದ್ರ ತಿರುಗೇಟು!

ಮುಷ್ಕರದಿಂದ ಎಚ್ಚೆತ್ತು ಸಿಎಂ ಯಡಿಯೂರಪ್ಪರವರು ಈಗಾಗಲೇ ಶೇ 6 ರಿಂದ 8 ರಷ್ಟು ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಬರುವ ದಿನಗಳಲ್ಲಿ ಕೂತು ಬಗೆಹರಿಸಿಕೊಳ್ಳಬಹುದು. ಮುಷ್ಕರ ಮಾಡಿ ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡವುದು ಸರಿಯಲ್ಲ. ಕೂಡಲೇ ಮುಷ್ಕರ ವಾಪಸ್ಸು ಪಡೆಯಿರಿ ಎಂದು ಸಂಸದರು ಮನವಿ ಮಾಡಿದರು.

news18-kannada
Updated:April 8, 2021, 7:49 PM IST
ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ, ಸಮಯ ಬಂದಾಗ ಉತ್ತರ ಕೊಡ್ತಾರೆ; ಯತ್ನಾಳ್​ಗೆ ಬಿ.ವೈ. ರಾಘವೇಂದ್ರ ತಿರುಗೇಟು!
ಸಂಸದ ಬಿ.ವೈ.ರಾಘವೇಂದ್ರ 
  • Share this:
ಚಿಕ್ಕಮಗಳೂರು: ಯಡಿಯೂರಪ್ಪ ನನ್ನ ತಂದೆ, ವಿಜಯೇಂದ್ರ ನನ್ನ ತಮ್ಮನೇ ಇರಬಹುದು. ಅವರದ್ದೇ ಆದಂತಹ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಅಲ್ಲದಿದ್ದರೂ ಪಕ್ಷಕ್ಕೆ ಮುಜುಗರದ ಕೆಲಸ ಆಗುತ್ತಿದೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಸಮಯ ಬಂದಾಗ ಉತ್ತರ ಕೊಡೋರು ಕೊಡ್ತಾರೆ ಎಂದು ಯತ್ನಾಳ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ ತಿರುಗೇಟು ನೀಡಿದರು.

ಚಿಕ್ಕಮಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಯಡಿಯೂರಪ್ಪನವರು ನನ್ನ ತಂದೆ, ವಿಜಯೇಂದ್ರ ನನ್ನ ತಮ್ಮನೇ ಆಗಿದ್ರು ಕೂಡ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳು, ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಅಲ್ಲದಿದ್ದರೂ ಪಕ್ಷಕ್ಕೆ ಮುಜಗರವಾಗುವಂತಹ ಕೆಲಸ-ಕಾರ್ಯಗಳು ನಡೆಯುತ್ತಿದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸಮಯ-ಸಂದರ್ಭ ಬಂದಾಗ ಯಾರು-ಯಾವ ತೀರ್ಮಾನ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ ಎಂದು ಯತ್ನಾಳ್ ವಿರುದ್ಧ ರಾಘವೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಚಿಕ್ಕಮಗಳೂರಿನವರೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮುಖಂಡರು ಸಮಯ ಬಂದಾಗ ಉತ್ತರ ಕೊಡುತ್ತಾರೆ, ನಾನು ಸಂಸದ ಹಾಗೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು. ವೈಯಕ್ತಿಕ ಅನ್ನೋದಕ್ಕಿಂತ ಪಕ್ಷದ ಮೇಲೂ ಪರಿಣಾಮ ಬೀರುತ್ತೆ. ಯಾವಾಗ ಯಾರು ತೀರ್ಮಾನ ಕೈಗೊಳ್ಳಬೇಕೋ ಅವರು ಕೈಗೊಳ್ಳುತ್ತಾರೆ. ಈಶ್ವರಪ್ಪನವರ ಪತ್ರ ಕುರಿತು ಮಾತನಾಡಿದ ರಾಘವೇಂದ್ರ, ಕಳೆದೊಂದು ವಾರದಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಯಾರು ಪ್ರತಿಕ್ರಿಯೆ ಕೊಡಬೇಕೋ ಅವರೇ ಕೊಟ್ಟಿದ್ದಾರೆ. ಈಶ್ವರಪ್ಪನವರೂ ಕೂಡ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ ಅಷ್ಟೆ, ಯಡಿಯೂರಪ್ಪನವರೇ ನಮ್ಮ ನಾಯಕರು ಎಂದಿದ್ದಾರೆ. ಈಗ ಎಲ್ಲಾ ಸರಿಯಾಗಿದೆ ಎಂದರು.

ಇದನ್ನು ಓದಿ: ಸಂಬಳ ಕಡಿತ ಮಾಡಿದರೆ ಯುಗಾದಿ ಹಬ್ಬ ಮಾಡೋದು ಹೇಗೆ ಸ್ವಾಮಿ?; ಬಿಎಸ್​ವೈಗೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ

ಜನ ಪ್ರಜ್ಞಾವಂತರಿದ್ದಾರೆ. ರಾಜ್ಯದ ಕೆಲ ಘಟನೆಗಳು ಬೇರೆ-ಬೇರೆ ದಿಕ್ಕಿನಲ್ಲಿ ಹೋಗುತ್ತಿದ್ದರೂ ಕೂಡ ಸ್ಟೇಬಲ್ ಗೌರ್ನಮೆಂಟ್ ಒಳ್ಳೆ ಕಾರ್ಯಕ್ರಮ ಮಾಡುತ್ತಿದೆ. ಸಂಕಷ್ಟದ ಸಮಯದಲ್ಲೂ ಒಳ್ಳೆ ಕೆಲಸ ಮಾಡುತ್ತಿರೋ ಈ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ಕೊಡುತ್ತಾರೆ. ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
Youtube Video

ಇನ್ನು ಇದೇ ವೇಳೆ ಸಾರಿಗೆ ನೌಕಕರ ಮುಷ್ಕರ ಬಗ್ಗೆ ಮಾತಾನಾಡಿದ ಅವರು ಸಾರಿಗೆ ನೌಕಕರಿಗೆ ಹೋರಾಟ ಮಾಡುವ ಅಧಿಕಾರವಿದೆ. ಆದರೆ ಸಂದರ್ಭ ಹೇಗಿದೆ ಎಂಬುದನ್ನು ಸಾರಿಗೆ ಸಿಬ್ಬಂದಿಗಳು ಯೋಚನೆ ಮಾಡಿ ಮುಷ್ಕರ ಮಾಡಬೇಕು. ಇನ್ನು ಈಗಾಗಲೇ ಕೋವಿಡ್ ನಿಂದ ದೇಶ ಹಾಗೂ ರಾಜ್ಯಕ್ಕೆ ಅನೇಕ ಸವಾಲುಗಳು ಎದುರಾಗಿರೋದು ಎಲ್ಲರಿಗೂ ಗೊತ್ತಿದೆ. ಮುಷ್ಕರದಿಂದ ಎಚ್ಚೆತ್ತು ಸಿಎಂ ಯಡಿಯೂರಪ್ಪರವರು ಈಗಾಗಲೇ ಶೇ 6 ರಿಂದ 8 ರಷ್ಟು ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಬರುವ ದಿನಗಳಲ್ಲಿ ಕೂತು ಬಗೆಹರಿಸಿಕೊಳ್ಳಬಹುದು. ಮುಷ್ಕರ ಮಾಡಿ ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡವುದು ಸರಿಯಲ್ಲ. ಕೂಡಲೇ ಮುಷ್ಕರ ವಾಪಸ್ಸು ಪಡೆಯಿರಿ ಎಂದು ಸಂಸದರು ಮನವಿ ಮಾಡಿದರು.
Published by: HR Ramesh
First published: April 8, 2021, 7:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories