ಖಾಸಗಿ ಶಾಲೆಗಳಿಗೆ ಗುಡ್ ಬೈ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಹೆಚ್ಚಾಯ್ತು ದಾಖಲಾತಿ ಸಂಖ್ಯೆ

ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣದ ಕೊರತೆಯಿಂದ ಮುಚ್ಚಿ ಹೋಗುವ ಭಯದಲ್ಲಿ ಇದ್ದ ಅದೆಷ್ಟೋ ಸರಕಾರಿ  ಶಾಲೆಗಳಿಗೆ ಈಗ ಮರು ಜೀವ ಬಂದಂತಾಗಿದೆ.

news18-kannada
Updated:September 1, 2020, 7:19 AM IST
ಖಾಸಗಿ ಶಾಲೆಗಳಿಗೆ ಗುಡ್ ಬೈ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಹೆಚ್ಚಾಯ್ತು ದಾಖಲಾತಿ ಸಂಖ್ಯೆ
ಸರ್ಕಾರಿ ಶಾಲೆ
  • Share this:
ಕಾರವಾರ(ಸೆಪ್ಟೆಂಬರ್​. 01): ಕೊರೋನಾ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳಿಗೆ ಏಕಾಏಕಿಯಾಗಿ ಮಕ್ಕಳ ದಾಖಲಾತಿ ಪ್ರಮಾಣ ಏರಿಕೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕ ವಾಗಿ ಎರಡು ಜಿಲ್ಲೆ ಶಿರಸಿ ಮತ್ತು ಕಾರವಾರ ಇಲ್ಲಿ ಸರಕಾರಿ ಶಾಲೆಗಳ ಸರಿ ಸಮವಾಗಿಯೇ ಖಾಸಗಿ ಶಾಲೆಗಳು ಇವೆ ಇತ್ತೀಚಿಗೆ ಈ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗಿತ್ತು, ಆದರೆ, ಈ ವರ್ಷದ ಆರಂಭದಲ್ಲೆ ಕೊರೋನಾ ಮಹಾಮಾರಿಗೆ ದೇಶವೇ ಲಾಕ್ ಡೌನ್ ಆದ ಪರಿಣಾಮ ಅದೆಷ್ಟೊ ಜನ ಬದುಕು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು.

ಉದ್ಯೋಗ ಕಳೆದುಕೊಂಡ ಅದೆಷ್ಟೋ ಪಾಲಕರ ಸ್ಥಿತಿ ಇಂದಿಗೂ ಡೊಲಾಯ ಮಾನವಾಗಿದೆ. ಈ ಸಂದರ್ಭದಲ್ಲಿ ಸಂಸಾರದ ನೌಕೆ ಸಾಗಿಸುವುದು ಕಷ್ಟದ ಕೆಲಸ ಹೀಗಿರುವಾಗ ಈ‌ ನಡುವೆ ಶಾಲೆ ಆರಂಭದ ಕಿರಿಕಿರಿ ಪಾಲಕರಿಗೆ ನುಂಗಲಾಗದ ತುತ್ತಾಯಿತು. ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನ ಕಲಿಸುತ್ತಿದ್ದ ಪಾಲಕರಿಗೆ ಪ್ರವೇಶ ಶುಲ್ಕ ನೀಡಿ ದಾಖಲಾತಿ ಮಾಡಿಸುವುದು ತೀರಾ ಸಮಸ್ಯೆಗೆ ದೂಡಿತ್ತು. ಈ ನಡುವೆ ಖಾಸಗಿ ಶಾಲೆಯವರು ಕೂಡಾ ಕೂಡಲೆ ದಾಖಲಾತಿ ಮಾಡಿಸಿಕೊಳ್ಳಬೇಕೆಂದು ಪಟ್ಟು ಬಿದ್ದು ಒತ್ತಡ ಹೇರಿದರು.

ಅದೆಷ್ಟೊ ಪಾಲಕರು ಪ್ರತಿಷ್ಠೆಗಾಗಿ ಸಾಲಸೋಲ ಮಾಡಿ ಮಕ್ಕಳನ್ನ ಖಾಸಗಿ ಶಾಲೆಯಲ್ಲೆ ಮುಂದುವರೆಸಿದರು. ಆದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದ ಒಂದಿಷ್ಟು  ಪಾಲಕರು ಖಾಸಗಿ ಶಾಲೆಯ ಸಹವಾಸ ಸಾಕು ಎಂದು ಈಗ ಸರಕಾರಿ ಶಾಲೆಯತ್ತ ಮುಖಮಾಡಿದ್ದಾರೆ. ಈಗಾಗಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರ ಹತ್ತಿರದ ಸಂಖ್ಯೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ವರ್ಗಾಯಿಸುತ್ತಿದ್ದಾರೆ ಇದು ಉತ್ತಮ ಬೆಳವಣಿಗೆ ಆಗಿದೆ.

ಕೊರೋನಾ ತಮ್ಮ ಬಾಳನ್ನೆ ಹಾಳು ಮಾಡಿದೆ ಅದೆಷ್ಟೋ ಕನಸು ಕಟ್ಟಿಕೊಂಡು ತಮ್ಮ ಮಕ್ಕಳನ್ನ ಓದಿಸಬೇಕು ಎಂದು ಕೊಂಡಿದ್ದೆವು. ಆದರೆ, ಈಗ ನಮಗೆ ಉದ್ಯೋಗ ಇಲ್ಲ ಈ‌ನಿಟ್ಟಿನಲ್ಲಿ ಏನೆ ಆಗಲಿ ಎಲ್ಲಿ ಕಲಿತರು ಶಿಕ್ಷಣ ತಾನೆ ಹೀಗಾಗಿ ನಮಗೆ ಈಗ ಸರಕಾರಿ ಶಾಲೆಯೇ ಮುಖ್ಯವಾಗಿದೆ ಎಂದು ಪಾಲಕರು ಹೇಳುತ್ತಾರೆ.

ಇದನ್ನೂ ಓದಿ : ಒಂದು ವರ್ಷದಿಂದ ಮಠದಲ್ಲಿಯೇ ಬದುಕು ನಡೆಸುತ್ತಿದೆ ಸಂತ್ರಸ್ತರ ಕುಟುಂಬ ; ಈಡೇರದ ಸರ್ಕಾರದ ಭರವಸೆ..!

ಲಾಕ್ ಡೌನ್ ನಿಂದ ಚೇತರಿಕೆ ಕಾಣದ ಪಾಲಕರು ತಮ್ಮ ಮಕ್ಕಳಿಗೆ ಅಂದುಕೊಂಡ ಹಾಗೆ ಶಿಕ್ಷಣ ನೀಡಲಾಗುತ್ತಿಲ್ಲ ಎನ್ನುವ ಕೊರಗು ಮನಸ್ಸಿನ ಮೂಲೆಯಲ್ಲಿ ಗಟ್ಟಿ ಆಗಿದ್ರೆ ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣದ ಕೊರತೆಯಿಂದ ಮುಚ್ಚಿ ಹೋಗುವ ಭಯದಲ್ಲಿ ಇದ್ದ ಅದೆಷ್ಟೋ ಸರಕಾರಿ  ಶಾಲೆಗಳಿಗೆ ಈಗ ಮರು ಜೀವ ಬಂದಂತಾಗಿದೆ.
ಇತ್ತೀಚೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮಾನವೀಯತೆ ಮರೆತು ನಡೆದು ಕೊಳ್ಳುತ್ತಿತ್ತು. ಕೊರೋನಾ ಲಾಕ್ ಡೌನ್ ಸಮಯದಲ್ಲು ಪಾಲಕರಿಗೆ ಪ್ರವೇಶಾತಿ ಶುಲ್ಕದಲ್ಲಿ ಕಿರಿಕಿರಿ ಮಾಡಿದ ಆಡಳಿತ ಮಂಡಳಿಯವರಿಗೆ ಈಗ ಸಂಖ್ಯಾ ಪ್ರಮಾಣ ಕಡಿಮೆ ಆಗಿರುವುದು ಮತ್ತು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ಮಕ್ಕಳನ್ನ ವರ್ಗಾಯಿಸಿ ಪಾಲಕರು ಖಾಸಗಿ ಶಾಲೆಗಳಿಗೆ ಪಾಠ ಕಲಿಸಿದ್ದಾರೆ, ಹೀಗೆ ಇದು ಮುಂದುವರೆದ್ರೆ ಮುಂದೊಂದು ದಿನ ಸರಕಾರಿ ಶಾಲೆಗಳಿಗೆ ಮತ್ತೆ ಕಳೆ ಬರಲಿದೆ.
Published by: G Hareeshkumar
First published: September 1, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading