ಪುಸ್ತಕ ನೀಡುವ ನೆಪದಲ್ಲಿ ಡೊನೇಷನ್ ವಸೂಲಿ ದಂಧೆ; ಕೊಡಗಿನಲ್ಲಿ ಖಾಸಗಿ ಶಾಲೆಗಳ ದರ್ಪಕ್ಕೆ ಬೆಚ್ಚಿದ ಪೋಷಕರು

ಮಡಿಕೇರಿಯ ಕೊಡಗು ವಿದ್ಯಾಲಯ ಎಂಬ ಖಾಸಗಿ ಶಾಲಾ ಆಡಳಿತ ಮಂಡಳಿ ಶಾಲೆಗೆ ಬಂದು ಪುಸ್ತಕ ಪಡೆದುಕೊಂಡು ಹೋಗಿ ಎಂದು ಪೋಷಕರಿಗೆ ನಿತ್ಯ ತಿಳಿಸುತ್ತಿದೆ. ಆದರೆ. ಪುಸ್ತಕ ತೆಗೆದುಕೊಳ್ಳಲು ಹೋದರೆ ಕಡ್ಡಾಯವಾಗಿ ಡೊನೇಷನ್ ಹಣವನ್ನು ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

news18-kannada
Updated:July 2, 2020, 5:41 PM IST
ಪುಸ್ತಕ ನೀಡುವ ನೆಪದಲ್ಲಿ ಡೊನೇಷನ್ ವಸೂಲಿ ದಂಧೆ; ಕೊಡಗಿನಲ್ಲಿ ಖಾಸಗಿ ಶಾಲೆಗಳ ದರ್ಪಕ್ಕೆ ಬೆಚ್ಚಿದ ಪೋಷಕರು
ಕೊಡಗಿನ ಖಾಸಗಿ ಶಾಲಾ ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪೋಷಕರು.
  • Share this:
ಕೊಡಗು: ಮಾರಣಾಂತಿಕ ಕೊರೋನಾ ವೈರಸ್‌ನಿಂದಾಗಿ ಈ ವರ್ಷ ಶಾಲೆ ಆರಂಭವಾಗುವುದೇ ಅನುಮಾನ ಎನ್ನಲಾಗುತ್ತಿದೆ. ಇನ್ನು ಪೋಷಕರು ಸಹ ತೀವ್ರ ಸಂಕಷ್ಟದಲ್ಲಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸೋದೆ ಬೇಡ ಎನ್ನೋ ಮನಸ್ಥಿತಿಯಲ್ಲಿ ಇದ್ದಾರೆ. ಆದರೆ, ಕೊಡಗಿನ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮಾತ್ರ ಶಾಲೆ ಆರಂಭವಾಗುತ್ತೋ, ಬಿಡುತ್ತೋ ಗೊತ್ತಿಲ್ಲ. ನೀವು ಫೀ ಮಾತ್ರ ಕಟ್ಲೇಬೇಕು ಅಂತಾ ಹಠ ಹಿಡಿದು ಕುಳಿತಿವೆ.

ಮಡಿಕೇರಿಯ ಕೊಡಗು ವಿದ್ಯಾಲಯ ಎಂಬ ಖಾಸಗಿ ಶಾಲಾ ಆಡಳಿತ ಮಂಡಳಿ ಶಾಲೆಗೆ ಬಂದು ಪುಸ್ತಕ ಪಡೆದುಕೊಂಡು ಹೋಗಿ ಎಂದು ಪೋಷಕರಿಗೆ ನಿತ್ಯ ತಿಳಿಸುತ್ತಿದೆ. ಆದರೆ. ಪುಸ್ತಕ ತೆಗೆದುಕೊಳ್ಳಲು ಹೋದರೆ ಕಡ್ಡಾಯವಾಗಿ ಡೊನೇಷನ್ ಹಣವನ್ನು ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಣಾಮ ಶಾಲಾ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರನ್ನು ಪೋಷಕರು ಇಂದು ಶಾಲೆಯ ಎದುರೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಲೆಗೆ ಹೋಗಿ ವಿಚಾರಿಸಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಅವರು ನಿಮಗೆ ಇಲ್ಲಿ ಓದಿಸಲು ಸಾಧ್ಯವಾಗದಿದ್ದರೆ ಇಲ್ಲಿಂದ ಹೊರಟು ಹೋಗಿ. ಸರ್ಕಾರಿ ಶಾಲೆಗಳು ಈಗ ತುಂಬಾ ಚೆನ್ನಾಗಿವೆ, ಅಲ್ಲಿಗೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿ ಅಂತಾ ಉಡಾಫೆಯ ಉತ್ತರ ನೀಡಿದ್ದಾರೆ.

ಇನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯನ್ನು ಕೇಳಿದರೆ, "ನಾವು ಯಾವ ಪೋಷಕರಿಂದಲೂ ಒತ್ತಾಯ ಪೂರ್ವಕವಾಗಿ ಶುಲ್ಕ ಕಟ್ಟಿಸಿಕೊಂಡಿಲ್ಲ. ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಸಮಸ್ಯೆಯನ್ನು ನೋಡಿ ಶೇ.90 ರಷ್ಟು ಪೋಷಕರೇ ಶುಲ್ಕ ಕಟ್ಟಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : ಶುಕ್ರವಾರ ಲಡಾಖ್‌ಗೆ ತೆರಳಬೇಕಿದ್ದ ರಾಜನಾಥ್‌‌ ಸಿಂಗ್ ಪ್ರವಾಸ ಮುಂದೂಡಿಕೆ; ಸರ್ಕಾರದಿಂದ ಸಿಗದ ಸ್ಪಷ್ಟತೆ

ಈ ನಡುವೆ ಆರ್‌ಟಿಇ ಅಡಿಯಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡುವ ನೆಪವೊಡ್ಡಿ ಪೋಷಕರಿಂದ 14 ಸಾವಿರ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಅಂತಾ ಪೋಷಕರು ಆರೋಪಿಸಿದ್ದಾರೆ.
First published: July 2, 2020, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading