ಮಂಗಳೂರಿನಲ್ಲಿ ಗಾಂಜಾ ವ್ಯಸನಿಗಳನ್ನ ಮೂರು ರೌಂಡ್ ಓಡಿಸಿದ ಪೊಲೀಸ್ ಕಮಿಷನರ್

ಅವರೆಲ್ಲಾ ಕರಾವಳಿಯ ನಶಾ ಲೋಕದ ರೂವಾರಿಗಳು. ಅಲ್ಲಿ ಮತ್ತಿನಲ್ಲಿ ತೇಲುವವರು ಇದ್ದರು. ಮತ್ತಿನಲ್ಲಿ ತೇಲಿಸುವವರು ಇದ್ದರು. ಅವರೆಲ್ಲರಿಗೂ ಖಾಕಿ ಕ್ಲಾಸ್ ತೆಗೆದುಕೊಂಡಿತ್ತು. ಒಬ್ಬನ ಕತೆ ಕೇಳಿ ಪೊಲೀಸರೇ ಬೆಚ್ಚಿಬಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು: ಏಯ್. ನೀನು ಡ್ರಗ್ ತಗೆದುಕೊಳ್ಳುವವನಾ, ಡ್ರಗ್ಸ್ ಮಾರುವವನಾ? ಎಲ್ಲಿಂದ ಡ್ರಗ್ ತರ್ತೀಯಾ? ಡ್ರಗ್ಸ್ ತೆಗೆದುಕೊಂಡ್ರೆ ಬೇಗ ಸಾಯ್ತೀಯ. ಹೀಗೆ ಅಮಲುವಂತರಿಗೆ ಗದರಿದ್ದು ಮಂಗಳೂರು ಪೂಲೀಸ್ ಕಮಿಷನರ್ ಶಶಿಕುಮಾರ್. ಇವರೆಲ್ಲಾ ಕರಾವಳಿಯ ನಶೆಯ ಲೋಕದ ರೂವಾರಿಗಳು. ಇಲ್ಲಿಯ ಪೊಲೀಸ್ ಕಮಿಷನರ್ ಕಛೇರಿ ಹಿಂಭಾಗ ಇರೋ ಸಿ.ಎ.ಆರ್ ಗ್ರೌಂಡ್​ನಲ್ಲಿ ನಿನ್ನೆ ನಶಾ ಲೋಕದ ದಂಧೆಕೋರರನ್ನು ಕರೆಸಿ ಪರೇಡ್ ಮಾಡಲಾಯ್ತು. 150 ಕ್ಕೂ ಹೆಚ್ಚು ಜನರು ಮಾದಕ ವ್ಯಸನಿಗಳು ಮತ್ತು ಡ್ರಗ್ ಪೆಡ್ಲರ್​ಗಳನ್ನು ಕರೆದುಕೊಂಡು ಬರಲಾಗಿತ್ತು. ಅವರೆಲ್ಲರನ್ನು ಒಂದು ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಕಮಿಷನರ್ ಬರುವವರೆಗೂ ನಿಂತು ನಿಂತು ಸುಸ್ತಾಗಿ ಕೆಲವರು ಕುಳಿತಿದ್ದರು. ಕಮಿಷನರ್ ಬಂದು ಒಬ್ಬೊಬ್ಬರನ್ನಾಗಿ ವಿಚಾರಿಸಿದ್ರು. ಅದರಲ್ಲಿ ಒಬ್ಬ ಇಂಗ್ಲೀಷ್​ನಲ್ಲಿ ಉತ್ತರ ಕೊಟ್ಟ. “ನೀನು ಇಂಗ್ಲೀಷ್​ನಲ್ಲಿ ಮಾತನಾಡಿದ ತಕ್ಷಣ ಒಳ್ಳೆಯವನಲ್ಲ. ನೀನು ಡ್ರಗ್ ಪೆಡ್ಲರ್. ಕನ್ನಡದಲ್ಲಿ ಮಾತನಾಡು” ಎಂದು ಕಮಿಷನರ್ ಬಿಸಿ ಮುಟ್ಟಿಸಿದರು.

ಮತ್ತೊಬ್ಬ, ‘ಬಿಸಿಲು ಸಾರ್. ನಿಲ್ಲೋಕಾಗ್ತಾ ಇಲ್ಲ’ ಅಂದ. ಅದಕ್ಕೆ ‘ನಾವು ಬಿಸಿನಲ್ಲಿ ನಿಂತಿಲ್ವಾ ನಿನಗೇನು?’ ಅಂತಾ ಗದರಿಸಿದ್ರು. ಒಬ್ಬ ಜುಟ್ಟು ಕಟ್ಟಿ ಬಂದಿದ್ದ. ಆ ಜುಟ್ಟನ್ನು ನೋಡಿದ ಕಮಿಷನರ್ ಇದೇನು ಜುಟ್ಟು ಕಟ್ಟಿ ಒಳ್ಳೆ ರೌಡಿಯ ಹಾಗಿದ್ದೀಯಲ್ಲ ಅಂತಾ ಹೇಳಿದ್ರು. ಡ್ರಗ್ ಪೆಡ್ಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರಿಬ್ಬರನ್ನ ಕೂಡ ಕರೆಸಿ ಆಯುಕ್ತರು ಬುದ್ದಿವಾದ ಹೇಳಿದ್ರು.

ಇದನ್ನೂ ಓದಿ: Karnataka Rain: ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆ

ಈ ಎಲ್ಲಾ ವಿಚಾರಣೆಗೂ ಮುನ್ನ ಎಲ್ಲರನ್ನು ನಾಲ್ಕು ರೌಂಡ್ ಓಡಿಸಲಾಯ್ತು. ಬಳಿಕ ಅವರನ್ನು ಉದ್ದೇಶಿಸಿ ಮಾತನಾಡಲಾಯ್ತು. ಡ್ರಗ್ ಪೆಡ್ಲಿಂಗ್ ಅನ್ನು ಬಿಟ್ಟು ಬೇರೆ ಕೆಲಸ ಮಾಡಿಕೊಂಡಿದ್ರೆ ಹೆಸರನ್ನು ಕೈಬಿಡಲಾಗುತ್ತೆ. ಇಲ್ಲಾಂದ್ರೆ ನಿಮ್ಮನ್ನೆಲ್ಲಾ ಇನ್ನೂ ಹೆಚ್ಚಿನ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ರು.

ವಿಚಾರಿಸುವ ವೇಳೆ ಒಬ್ಬ ಬೇಕರಿಯವರು ತಾವು ಸ್ವೀಟ್​ನಲ್ಲಿ ಡ್ರಗ್ಸ್ ಬೆರೆಸಿ ಕೊಡುತ್ತಿರೋ ಬಗ್ಗೆ ಹೇಳಿದ. ಫಾರಿನ್ ಸ್ವೀಚ್​ನ ಬಟ್ಲಾವಾ ಸ್ಟೀಟ್ ನಲ್ಲಿ ಡ್ರಗ್ಸ್ ನೀಡುತ್ತಿದ್ದ ಬಗ್ಗೆ ಹೇಳಿದ್ದ. ಇದನ್ನು ಕೇಳಿ ಖಾಕಿಪಡೆ ಶಾಕ್ ಆಯಿತು. ಬಳಿಕ ಆಹಾರ ಇಲಾಖೆಗೆ ಇವನ ಅಂಗಡಿಗೆ ರೈಡ್ ಮಾಡಲು ತಿಳಿಸುವಂತೆ ಮನವಿ ಮಾಡಿದರು.

ಸದ್ಯ ಈ ಎಲ್ಲಾ ಡ್ರಗ್ ಪೆಡ್ಲರ್ ಮತ್ತು ಕಂಜ್ಯೂಮರ್​ಗಳ ರೆಕಾರ್ಡ್ ಅಪ್​ಡೇಟ್ ಮಾಡಲಾಗಿದೆ. ಇನ್ನೂ ಹಲವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಈ ಎಲ್ಲಾ ಡ್ರಗ್ ದಂಧೆಯನ್ನು ಮಟ್ಟ ಹಾಕುವಲ್ಲಿ ಪೊಲೀಸರು ಇನ್ನಷ್ಟು ನಿಗಾ ಇರಿಸಿದ್ದಾರೆ. ಅದೇನೇ ಇದ್ದರೂ ಇನ್ನೂ ಕೂಡ ಡ್ರಗ್ ಕಿಂಗ್ ಪಿನ್​ಗಳು ಭೂಗತವಾಗಿ ಈ ದಂಧೆಯನ್ನು ಆಪರೇಟ್ ಮಾಡುತ್ತಿದ್ದಾರೆ. ಅವರ ಬುಡಕ್ಕೆ ಕೈ ಹಾಕಿದ್ರೆ ಮಾತ್ರ ಹೆಚ್ಚಿನ ಕಂಟ್ರೋಲ್ ಸಾದ್ಯವಾಗುತ್ತೆ.

ವರದಿ: ಕಿಶನ್ ಕುಮಾರ್
Published by:Vijayasarthy SN
First published: