• Home
  • »
  • News
  • »
  • district
  • »
  • ಪಂಡಿತಾರಾಧ್ಯ ಶ್ರೀಗಳ ಸಂಪಾದನೆಯ ಮತ್ತೆ ಕಲ್ಯಾಣ ಸಂವಾದ ಭಾಗ-3 ಸಂಪುಟ ಬಿಡುಗಡೆ

ಪಂಡಿತಾರಾಧ್ಯ ಶ್ರೀಗಳ ಸಂಪಾದನೆಯ ಮತ್ತೆ ಕಲ್ಯಾಣ ಸಂವಾದ ಭಾಗ-3 ಸಂಪುಟ ಬಿಡುಗಡೆ

ಪಂಡಿತಾರಾಧ್ಯ ಶ್ರೀಗಳ ಮತ್ತೆ ಕಲ್ಯಾಣ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಪಂಡಿತಾರಾಧ್ಯ ಶ್ರೀಗಳ ಮತ್ತೆ ಕಲ್ಯಾಣ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಬಸವಣ್ಣ ಪವಾಡ ಪುರುಷನಲ್ಲ ಎನ್ನುವುದನ್ನು ವಿಷದವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ನಮಗಿಂದು ಪವಾಡ ಪುರುಷರ ಅವಶ್ಯಕೆಯಿಲ್ಲ. ಪರಿವರ್ತನೆ ಮಾಡುವವರ ಅವಶ್ಯಕತೆಯಿದೆ. ಪರಿವರ್ತನೆ ಮಾಡುವ ಪವಾಡ `ಮತ್ತೆ ಕಲ್ಯಾಣ’ದಲ್ಲಿ ನಡೆದಿದೆ. `ಮತ್ತೆ ಕಲ್ಯಾಣ’ ಜಾಗೃತಿಯ ಜಾತ್ರೆ, ಪ್ರಬುದ್ಧತೆಯ ಜಾತ್ರೆ. `ಕಲ್ಯಾಣ’ ಪದಕ್ಕೆ ಬಹಳ ದೊಡ್ಡ ವಿಶಾಲಾರ್ಥವಿದೆ ಎಂದು ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.

ಮುಂದೆ ಓದಿ ...
  • Share this:

ಚಿತ್ರದುರ್ಗ: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಂಪಾದನೆಯ ಮತ್ತೆ ಕಲ್ಯಾಣ ಸಂವಾದ ಭಾಗ-3’ ಕೃತಿಯನ್ನು ಚಿತ್ರದುರ್ಗದ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಲೋಕಾರ್ಪಣೆಗೊಳಿಸಿದರು.


ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿ ಮಠದ ಬಿದಿರು ವನದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹಾಗೂ ಮಾದಾರ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ, ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಉಪಸ್ಥಿತಿಯಲ್ಲಿ ಮತ್ತೆ ಕಲ್ಯಾಣದ ಆರು ಕೃತಿ ಸಂಪುಟಗಳನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು.


ಬಳಿಕ ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದ ಸಿದ್ದರಾಮೇಶ್ವರ ಶ್ರೀಗಳು, ಪಂಡಿತಾರಾಧ್ಯ ಶ್ರೀಗಳಂತಹ ಸಮರ್ಥ ಸಂತರನ್ನು, ಅವರ ಕಾರ್ಯಗಳನ್ನು ವಿಶ್ಲೇಷಣೆ ಮಾಡಲು ಬಂದ ಅಸಮರ್ಥ ಸಂತ ನಾನು. ಪಂಡಿತಾರಾಧ್ಯ ಶ್ರೀಗಳು ಬೋಧಿ ವೃಕ್ಷದಂತೆ. ಎಲ್ಲ ಎಲ್ಲೆಗಳನ್ನು ಮೀರಿ ಬೆಳೆದವರು. ಚಿಂತಕರ ಚಿಂತಕರು. ನಮ್ಮ ಕುಟುಂಬದ ಇಂದಿನ ಪೀಳಿಗೆ ಕೇಳುವ ಪ್ರಶ್ನೆಗಳಿಗೆ ಹಿರಿಯರಾದವರು ತಬ್ಬಿಬ್ಬಾಗುವ ಸಂದರ್ಭವಿದೆ. ಅಂಥದ್ದರಲ್ಲಿ ಪೂಜ್ಯರು ವಿದ್ಯಾರ್ಥಿಗಳಿಗೆ ಉತ್ತರಿಸಿದ ಉತ್ತರಗಳು ನನಗೆ ಬಹಳ ಇಷ್ಟವಾದವು. ಆ ಉತ್ತರಗಳಲ್ಲಿ ದಿಟ್ಟತೆ, ನಿಷ್ಠುರತೆ, ಸ್ಪಷ್ಟತೆ ಕಾಣುತ್ತವೆ. ಜಾರಿಕೊಳ್ಳುವ, ತಪ್ಪಿಸಿಕೊಳ್ಳುವ ಜಾಯಮಾನ ಪಂಡಿತಾರಾಧ್ಯ ಶ್ರೀಗಳದ್ದಲ್ಲ. ನಡೆ-ನುಡಿ ಒಂದಾಗಿರುವ ವಿಶ್ವಕೋಶವೇ ಸಾಣೇಹಳ್ಳಿಯ ಸ್ವಾಮಿಗಳು. ಬೆರಳಣಿಕೆಯಷ್ಟು ಸಂತರು ಮಾತ್ರ ಪ್ರಶ್ನೆಗಳನ್ನು ಆಮಂತ್ರಣ ಮಾಡಿದ್ದಾರೆ. ಬಹುತೇಕ ನಾನು ಹೇಳುತ್ತೇನೆ ನೀನು ಕೇಳಬೇಕು ಎನ್ನುವರೇ ಹೆಚ್ಚು. ಸಾಕ್ರಟೀಸ್, ಪ್ಲೇಟೋ, ಬುದ್ಧ, ಬಸವಣ್ಣ, ಪೆರಿಯಾರ್, ನಾರಾಯಣ ಗುರುಗಳು ಪ್ರಶ್ನೆಗಳನ್ನು ಆಮಂತ್ರಿಸಿದವರು. ಕೆಲವೇ ಕೆಲವರು ಮಾತ್ರ ಪ್ರಶ್ನೆಯನ್ನು ಮಾಡದೆ ಯಾವುದನ್ನೂ ಒಪ್ಪಿಕೊಂಡವರಲ್ಲ. ನಮ್ಮ ಕಾಲಮಾನದ ಬುದ್ದ, ಬಸವಣ್ಣ, ಸಾಕ್ರಟೀಸ್ ಪಂಡಿತಾರಾಧ್ಯ ಶ್ರೀಗಳು. ಪೂಜ್ಯರು ಹೇಳಿರುವಂತೆ ನಾವು ಬುದ್ದಿವಂತರು, ಜ್ಞಾನವಂತರಾಗಬೇಕೇ ಹೊರತು ನರಿಬುದ್ದಿಯವರಾಗಬಾರದು ಎಂದರು.


ಇದನ್ನು ಓದಿ: ಇಂದಿನಿಂದ ತಿರುಪತಿ ತಿಮ್ಮಪ್ಪನ ದರ್ಶನ ಆರಂಭ: ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ


ಅನೇಕ ಪ್ರಶ್ನೆಗಳಿಗೆ ಪೂಜ್ಯರು ತಮ್ಮ ಜೀವನಾನುಭಾವದ ಘಟನೆಗಳನ್ನೇ ಉತ್ತರ ರೂಪದಲ್ಲಿ ನೀಡಿದ್ದಾರೆ. ನಡೆ-ನುಡಿ ಒಂದಾಗಿರುವ ಸಮರ್ಥ ಸಂತರು. ರಾಜಾಶ್ರಯ ಸಿಕ್ಕಿರುವ ಸಾಹಿತ್ಯ, ರಾಜಾಶ್ರಯವೇ ಬೇಕಿರುವ ಸಾಹಿತಿಗಳು ಒಂದು ಕಡೆಯಾದರೆ ಶರಣರು ರಾಜಾಶ್ರಯವನ್ನು ಕೇಳದೆ ಜನಾಶ್ರಯದ ವಚನ ಸಾಹಿತ್ಯವನ್ನು ರಚಿಸಿದವರು. ಇದನ್ನು ಜಾನಪದ ಸಾಹಿತ್ಯವೆಂದರೂ ತಪ್ಪಿಲ್ಲ. ಬಸವಣ್ಣ ಪವಾಡ ಪುರುಷನಲ್ಲ ಎನ್ನುವುದನ್ನು ವಿಷದವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ನಮಗಿಂದು ಪವಾಡ ಪುರುಷರ ಅವಶ್ಯಕೆಯಿಲ್ಲ. ಪರಿವರ್ತನೆ ಮಾಡುವವರ ಅವಶ್ಯಕತೆಯಿದೆ. ಪರಿವರ್ತನೆ ಮಾಡುವ ಪವಾಡ `ಮತ್ತೆ ಕಲ್ಯಾಣ’ದಲ್ಲಿ ನಡೆದಿದೆ. ಹುಲು ಮಾನವರಿಂದ ದಾನ ಕೊಡಲು ಸಾಧ್ಯವಿಲ್ಲ. ನಾವು ಕೊಡಲು ಸಾಧ್ಯವಿರುವುದು ದಾಸೋಹ ಮಾತ್ರ. `ಮತ್ತೆ ಕಲ್ಯಾಣ’ ಜಾಗೃತಿಯ ಜಾತ್ರೆ, ಪ್ರಬುದ್ಧತೆಯ ಜಾತ್ರೆ. `ಕಲ್ಯಾಣ’ ಪದಕ್ಕೆ ಬಹಳ ದೊಡ್ಡ ವಿಶಾಲಾರ್ಥವಿದೆ ಎಂದರು.

Published by:HR Ramesh
First published: