ಕೆಜಿಎಫ್ ಚಿನ್ನದ ಗಣಿಯಲ್ಲಿ ಅಪರೂಪದ ಪಲ್ಲಾಡಿಯಮ್ ಲೋಹ ಪತ್ತೆ; ಚಿನ್ನಕ್ಕಿಂತಲೂ 4 ಪಟ್ಟು ಹೆಚ್ಚು ಬೆಲೆ?

ಪಲ್ಲಾಡಿಯಮ್ ಎನ್ನುವುದು  ಲೋಹವೆಂದು ಕರೆಯಲ್ಪಡುವ ವಸ್ತು. ಇದು ಪ್ಲಾಟಿನಮ್ ಲೋಹಗಳ ಗುಂಪಿಗೆ ಸೇರಿದೆ. ಮೃದು, ಹೊಳಪುಳ್ಳ ಬಿಳಿ ಬಣ್ಣದ ಲೋಹವನ್ನು ಪ್ಲಾಟಿನಮ್ ಬದಲಿಗೆ ಹಲವಾರು ವಸ್ತುಗಳಲ್ಲಿ ಉಪಯೋಗಿಸುತ್ತಾರೆ.

news18-kannada
Updated:June 3, 2020, 3:48 PM IST
ಕೆಜಿಎಫ್ ಚಿನ್ನದ ಗಣಿಯಲ್ಲಿ ಅಪರೂಪದ ಪಲ್ಲಾಡಿಯಮ್ ಲೋಹ ಪತ್ತೆ; ಚಿನ್ನಕ್ಕಿಂತಲೂ 4 ಪಟ್ಟು ಹೆಚ್ಚು ಬೆಲೆ?
ಕೆಜಿಎಫ್​ನ ಸೈನೆಡ್ ಗುಡ್ಡ
  • Share this:
ಕೋಲಾರ; ಜಿಲ್ಲೆಯ ಕೆಜಿಎಫ್ ಚಿನ್ನದಗಣಿ ಮುಚ್ಚಿ 20 ವರ್ಷಗಳೇ ಕಳೆದಿದ್ದು, ಕಳೆದ 5 ವರ್ಷಗಳಿಂದ ಚಿನ್ನದ ಗಣಿ ಪುನರ್ ಆರಂಭ ಸಂಬಂಧ ಹಲವು ಚರ್ಚೆಗಳು ನಡೆಯುತ್ತಿದೆ.

ಇಲ್ಲಿಯ ಸೈನೆಡ್ ಗುಡ್ಡದಲ್ಲಿ ಸಾವಿರಾರು ಕೋಟಿ ಮೌಲ್ಯದ ಚಿನ್ನದ ಅದಿರಿದ್ದು, ಈ ಕುರಿತು ಪುನಃ ಗಣಿಗಾರಿಕೆ ಆರಂಭಿಸಲು ಸರ್ಕಾರಕ್ಕೆ ಕೆಲ ಖಾಸಗಿ ಕಂಪನಿಗಳು ಅನುಮತಿಗೆ ಮನವಿ ಸಲ್ಲಿಸಿವೆ. ಆದರೆ ಇತ್ತೀಚೆಗೆ ಗಣಿಗಾರಿಕೆಯನ್ನು ಪುನರ್ ಆರಂಭಿಸುವ ಸಲುವಾಗಿ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ ಚಿನ್ನದ ಗಣಿಯಲ್ಲಿ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಇದೀಗ ಚಿನ್ನಕ್ಕಿಂತಲೂ ಅಪರೂಪ ಎನ್ನುವ ಪಲ್ಲಾಡಿಯಮ್ ಲೋಹ ಅದಿರು ಪತ್ತೆಯಾಗಿದ್ದು ಇದಕ್ಕೆ ಚಿನ್ನಕ್ಕಿಂತಲು ನಾಲ್ಕು ಪಟ್ಟು ಹೆಚ್ಚಿನ ಬೆಲೆಯಿದೆಯಂತೆ. ಖುದ್ದು ಈ ಮಾಹಿತಿಯನ್ನು ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಪಾಲಿಗೆ ಇದೊಂದು ಶುಭಸುದ್ದಿ ಎಂತಲೂ ಹೇಳಿದ್ದಾರೆ.

ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ಮುನಿಸ್ವಾಮಿ ಅವರು ಬಹಿರಂಗಪಡಿಸಿದ್ದಾರೆ. ಕೇಂದ್ರದ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರು ತಂಡವನ್ನು ಕಳಿಸಿ ಚಿನ್ನದ ಗಣಿಯಲ್ಲಿ ತಪಾಸಣೆ ನಡೆಸಿದ್ದಾರೆ. ಇದರಲ್ಲಿ ಚಿನ್ನಕ್ಕಿಂತ ಹೆಚ್ಚಿಗೆ ಪಲ್ಲಾಡಿಯಮ್ ಎನ್ನುವ ಅಪರೂಪದ ಬೆಳ್ಳಿ ಲೋಹದ ಅದಿರು ಪತ್ತೆಯಾಗಿದೆ. ಹೀಗಾಗಿ ಇದರ ಲಭ್ಯತೆಯನ್ನು ಪತ್ತೆಹಚ್ಚಲು ಎರಡನೇ ಬಾರಿಗೆ ಪ್ರಯೋಗಾಲಯಕ್ಕೆ ಕೆಜಿಎಫ್ ಗಣಿಯ ಮಣ್ಣನ್ನು ಕಳಿಸಿರುವುದಾಗಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಬಹುತೇಕ ಗಣಿಗಾರಿಕೆಗೆ ಅನುಮತಿ ನೀಡುವ ಮಾತನ್ನಾಡಿರುವ ಸಂಸದರು ಮುಂದಿನ ಲೋಕಸಭೆ ಬಜೆಟ್  ವೇಳೆಗೆ  ಗಣಿಗಾರಿಕೆಗೆ ಅನುಮತಿ ಸಿಗುವ ಭರವಸೆಯಿದೆ ಎಂದಿದ್ದಾರೆ.

ಇದನ್ನು ಓದಿ: ನಿಸರ್ಗಕ್ಕೆ ಬೆಚ್ಚಿಬಿದ್ದ ಕರಾವಳಿ; ಭಾರೀ ಬಿರುಗಾಳಿ ಮಳೆ, ಕಡಲ್ಕೊರೆತದಿಂದ ಕಂಗಾಲಾದ‌ ಮೀನುಗಾರರು

ಯಾವುದು ಈ ಪಲ್ಲಾಡಿಯಮ್ ಲೋಹ?

ಪಲ್ಲಾಡಿಯಮ್ ಎನ್ನುವುದು  ಲೋಹವೆಂದು ಕರೆಯಲ್ಪಡುವ ವಸ್ತು. ಇದು ಪ್ಲಾಟಿನಮ್ ಲೋಹಗಳ ಗುಂಪಿಗೆ ಸೇರಿದೆ. ಮೃದು, ಹೊಳಪುಳ್ಳ ಬಿಳಿ ಬಣ್ಣದ ಲೋಹವನ್ನು ಪ್ಲಾಟಿನಮ್ ಬದಲಿಗೆ ಹಲವಾರು ವಸ್ತುಗಳಲ್ಲಿ ಉಪಯೋಗಿಸುತ್ತಾರೆ. ಇದು ಹಲವಾರು ವೈದ್ಯಕೀಯ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಹಾಗೂ ನೀರು ಸಂಸ್ಕರಣಾ ಕೇಂದ್ರದಲ್ಲಿ ಬಳಸುವ ಅಮೂಲ್ಯ ವಸ್ತುವಾಗಿದೆ ಎಂಬ ಮಾಹಿತಿಯಿದೆ. ಆದರೆ ಈ ಮಾಹಿತಿಯನ್ನು ಇನ್ನು ಕೋಲಾರ ಜಿಲ್ಲಾಡಳಿತ ಹಾಗೂ ಕೆಜಿಎಫ್​ನ ಬಿಜಿಎಂಎಲ್ ಗಣಿ ಅಧಿಕಾರಿಗಳು ಇನ್ನು ಸ್ಪಷ್ಟ ಪಡಿಸಿಲ್ಲ. ಈ ಹಿಂದೆಯೂ ಚಿನ್ನದ ಅದಿರಿನ ಕುರಿತು ಮಾಹಿತಿ ಪಡೆದುಕೊಳ್ಳಲು ಆಗಾಗ್ಗೆ ಕೇಂದ್ರ ಸರ್ಕಾರ ತಜ್ಞರಿಂದ ಪರಿಶೀಲನೆ ನಡೆಸಿದೆ ಎಂಬ ಮಾಹಿತಿಯಿದೆ.

First published: June 3, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading