Chamarajanagar: ಪಡ್ನಾ-ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್ಮಾಲ್; ವಯಸ್ಕರ ಜಾಗದಲ್ಲಿ ಪರೀಕ್ಷೆ ಬರೆದ್ರು ಶಾಲಾ ಮಕ್ಕಳು!

ಲೋಕ ಶಿಕ್ಷಣ ನಿರ್ದೇಶನಾಲಯ ಕೇಂದ್ರ ಪಡ್ನಾ ಲಿಖ್ನಾ ಅಭಿಯಾನ ನಡೆಸಿದೆ. ಇದರಲ್ಲಿ 30,048 ಮಂದಿಯನ್ಮು ಸಾಕ್ಷರರನ್ನಾಗಿ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ

ಪರೀಕ್ಷೆಗೆ ಹಾಜರಾದ ಮಕ್ಕಳು

ಪರೀಕ್ಷೆಗೆ ಹಾಜರಾದ ಮಕ್ಕಳು

  • Share this:
ಚಾಮರಾಜನಗರ (ಮಾ. 27): ಅಲ್ಲಿ ಅಕ್ಷರ ಕಲಿತ ವಯಸ್ಕರು (Adults) ಪರೀಕ್ಷೆ (Exam) ಬರೆಯಬೇಕಿತ್ತು. ಸಾಕ್ಷರತೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪಡ್ನಾ-ಲಿಖ್ನಾ (Padna Likhna) ಅಭಿಯಾನದಡಿ ಅಕ್ಷರಾಭ್ಯಾಸ ಮಾಡಿ ಸಾಕ್ಷರರಾದವರು ಪರೀಕ್ಷೆಗೆ ಹಾಜರಾಗಬೇಕಿತ್ತು.  ಆದರೆ ಅಲ್ಲಿ ಅವರ ಬದಲು ಶಾಲಾ ಮಕ್ಕಳನ್ನು (Children) ಕರೆತಂದು ಪರೀಕ್ಷೆ ಬರೆಸುವ ಮೂಲಕ ಭಾರೀ ಗೋಲ್‌ಮಾಲ್ (Golmal) ಎಸಗಲಾಗಿದೆ.  ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ  ಎಂದು  ರಾಜ್ಯದೆಲ್ಲೆಡೆ ಲಕ್ಷಾಂತರ ಮಂದಿಯ ನಕಲಿಪಟ್ಟಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪಡ್ನಾ ಲಿಖ್ನಾ ಗೋಲ್‌ಮಾಲ್

ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ  ಕೇಂದ್ರ ಸರ್ಕಾರದಿಂದ  ಪಡ್ನಾ ಲಿಖ್ನಾ ಅಭಿಯಾನ ನಡೆಸಲಾಗಿದೆ. ಈ ಅಭಿಯಾನದಡಿ ಅಕ್ಷರಭ್ಯಾಸ ಮಾಡಿದವರಿಗೆ ಅವರ ಕಲಿಕಾ ಸಾಮರ್ಥ್ಯ ಅರಿಯಲು ಇಂದು ದೇಶಾದ್ಯಂತ  ಕಲಿಕಾ ಸಾಧನಾ ಪರೀಕ್ಷೆ ನಡೆಸಲಾಗಿದೆ.  ಅದರಂತೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು  130 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಆದರೆ ಜಿಲ್ಲೆಯ ಬಹುತೇಕ ಕಡೆಗೆ ಅಕ್ಷರಾಭ್ಯಾಸ ಮಾಡಿಸಲಾದ ಅನಕ್ಷರಸ್ಥರ ಬದಲು  ಶಾಲಾ ಮಕ್ಕಳನ್ನು ಕರೆತಂದು ಪರೀಕ್ಷೆ ಬರೆಸಲಾಗಿದೆ. ಅಕ್ಷರ ಕಲಿಸದೇ ಇದ್ದರೂ ಕಲಿಸಲಾಗಿದೆ ಎಂದು ದಾಖಲೆ ಸೃಷ್ಟಿಸಿ ಅವರ ಹೆಸರಿನಲ್ಲಿ ಪರೀಕ್ಷೆ ಬರೆಸಲಾಗಿದೆ‌. ಒಲ್ಲದ ಮನಸ್ಸಿನಿಂದಲೇ ಶಿಕ್ಷಕರು ಈ ಪರೀಕ್ಷೆ ನಡೆಸಿದ್ದಾರೆ.

ರೆಡ್​ ಹ್ಯಾಂಡ್​ಗಾಗಿ ಸಿಕ್ಕಿಬಿದ್ರು

ಚಾಮರಾಜನಗರ ತಾಲೂಕಿನ ಮರಿಯಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೇ ಪರೀಕ್ಷೆ ಬರೆಯುವಾಗ ಮಾಧ್ಯಮಗಳ ಕ್ಯಾಮೆರ ಕಣ್ಣಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ನಡೆದಿರುವ ಅಕ್ರಮಗಳಿಗೆ ಸಾಕ್ಷಿಯಾಗಿದೆ. ಕ್ಯಾಮೆರಾ ಕಂಡೊಡನೆ ಮಕ್ಕಳು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಹೋಗಿದ್ದಾರೆ. ಮತ್ತೆ ಕೆಲವು ಕಡೆ  ಅಡುಗೆ ಸಿಬ್ಬಂದಿಯಿಂದ  ವಿದ್ಯಾವಂತ ಯುವಕರಿಂದ ಪರೀಕ್ಷೆ ಬರೆಸಲಾಗಿದೆ. ಮತ್ತೆ ಕೆಲವು ಪರೀಕ್ಷಾ ಕೇಂದ್ರಗಳಿಗೆ ಮಧ್ಯಾಹ್ನವಾದ್ರೂ ಪ್ರಶ್ನೆ ಪತ್ರಿಕೆಗಳನ್ನೇ  ಸರಬರಾಜು ಮಾಡದಿರುವುದು ಕಂಡು ಬಂದಿದೆ.

ಇದನ್ನೂ ಓದಿ: Karnataka Politics: ಕೋಲಾರದಿಂದ ಕಣಕ್ಕಿಳೀತಾರಾ ಸಿದ್ದರಾಮಯ್ಯ? ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಎಂದ್ರು ಸಿದ್ದು

ಸುಳ್ಳು ದಾಖಲೆ ಸೃಷ್ಟಿಸಿದ್ರಾ?

ಲೋಕ ಶಿಕ್ಷಣ ನಿರ್ದೇಶನಾಲಯ ಕೇಂದ್ರ ಪುರಸ್ಜೃತ ಪಡ್ನಾ ಲಿಖ್ನಾ  ಅಭಿಯಾನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಡೆದ ಪಡ್ನಾ ಲಿಖ್ನಾ ಅಭಿಯಾನದಡಿ 30,048 ಮಂದಿಯನ್ಮು ಸಾಕ್ಷರರನ್ನಾಗಿ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ  ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅನಕ್ಷರಸ್ಥರಿಗೆ ತರಬೇತಿ ನೀಡಲು ಜಿಲ್ಲೆಯಾದ್ಯಂತ ನೂರಾರು ಪ್ರೇರಕರು ಹಾಗು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗಿದ್ದು  ಅವರಿಗೆ ಮೂರು ತಿಂಗಳಾದರೂ ಗೌರವಧನ ನೀಡದೆ  ವಂಚಿಸಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ

ಶಿಕ್ಷಕರ ಬೇಸರದ ಮಾತು

ಅನಕ್ಷರಸ್ಥರ ಪಟ್ಟಿ ಮಾಡಿಕೊಂಡು ಬನ್ನಿ ಎಂದಿದ್ದರು. ಅದರಂತೆ ಮನೆಮನೆಗೆ ತೆರಳಿ ಪಟ್ಟಿ ಮಾಡಿದ್ದೇವೆ. ಹೀಗೆ ಅವರ ಹೆಸರಿನಲ್ಲಿ ಪರೀಕ್ಷೆ ಬರೆಸುವುದನ್ನು ನಾನು ಒಪ್ಪುವುದಿಲ್ಲ, ನಿನ್ನೆ ಇದೇ ವಿಷಯವಾಗಿ ಮುಖ್ಯೋಪಾಧ್ಯಾಯರೊಂದಿಗು ಜಗಳವಾಡಿದ್ದೇನೆ, ಹೀಗೆ ಮಾಡಿದರೆ ನಮ್ಮದು  ಸಾಕ್ಷರ ನಾಡಾಗುವುದಿಲ್ಲ ಒಂದು ಬೇಸರ ವ್ಯಕ್ತಪಡಿಸಿದವವರು ಒಲ್ಲದ ಮನಸ್ಸಿನಿಂದಲೇ ಪರೀಕ್ಷೆ ಬರೆಸುತ್ತಿದ್ದ ಮರಿಯಾಲದ  ಶಿಕ್ಷಕಿ ಸುಶೀಲಾ

ಇದುವರೆಗೆ ಯಾವುದೇ ಸಂಬಳ ನೀಡಿಲ್ಲ

ಸಂಬಳ ಕೊಡ್ತಾರೆ ಎಂದು ಕೊಂಡು ಮೂರು ತಿಂಗಳಿಂದ ಪಾಠ ಮಾಡಿದ್ದೆ ಆದರೆ  ನನಗೆ ಇದುವರೆಗೆ ಯಾವುದೇ ಸಂಬಳ ನೀಡಿಲ್ಲ,  ಇವತ್ತು ಪರೀಕ್ಷೆ ಇದೆ ಎಂದು ನಿನ್ನೆ ರಾತ್ರಿ ಮಾಹಿತಿ ನೀಡಿದರು, ಜನರು ಹೊಲ ಗದ್ದೆಗಳಿಗೆ ಹೋಗಿರುವುದರಿಂದ ಪರೀಕ್ಷೆಗೆ ಬಂದಿಲ್ಲ ಎಂದು ಬದನಗುಪ್ಪೆ ಗ್ರಾಮದ ಪ್ರೇರಕರಾದ ಚಾಂದಿನಿ ಹೇಳಿದರು.

ಇದನ್ನೂ ಓದಿ:   Karnataka Weather: ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಮಳೆ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಸಾಧ್ಯತೆ

ಸುಳ್ಳು ದಾಖಲೆ ಸೃಷ್ಟಿಸಿ ಭಾರೀ ಗೋಲ್ ಮಾಲ್

ಒಟ್ಟಾರೆ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ  ಮಾಡಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭಾರೀ ಗೋಲ್ ಮಾಲ್  ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.  ಇಡೀ ರಾಜ್ಯದಲ್ಲಿ ಇಂತಹ ಅಕ್ರಮ ನಡೆಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ
Published by:Pavana HS
First published: