ಮಳೆಯಿಂದ ಬೆಳೆಯೂ ನಾಶ, ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ; ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ರಾಯಚೂರು ಮಾರುಕಟ್ಟೆಗೆ ನವಂಬರ್ ಒಂದರಿಂದ ನಿತ್ಯ ಸಾವಿರಾರು ಚೀಲ ಭತ್ತ ಮಾರಾಟಕ್ಕೆ ಬರುತ್ತಿದೆ. ರಾಯಚೂರಿಗೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಭತ್ತ ಮಾರಾಟಕ್ಕೆ ಬರುತ್ತಿದೆ. ಇಲ್ಲಿಯವರೆಗೂ ಸುಮಾರು 25 ಸಾವಿರ ಕ್ವಿಂಟಾಲ್ ಭತ್ತ ಬಂದಿದೆ, ಈ ವರ್ಷ ಮಳೆಯಿಂದಾಗಿ ಸುಮಾರು 17 ಸಾವಿರ ಹೆಕ್ಟೇರ್ ಪ್ರದೇಶವು ಮಳೆ ಹಾಗು ಪ್ರವಾಹದಿಂದ ಹಾಳಾಗಿದೆ. ಮೊದಲೇ ಬೆಳೆ ಹಾಳಾಗಿ ನಷ್ಟ ಅನುಭವಿಸಿದ ರೈತರಿಗೆ ಈಗ ದರ ಇಳಿಕೆಯಾಗಿ ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.

ಭತ್ತ

ಭತ್ತ

  • Share this:
ರಾಯಚೂರು: ರಾಯಚೂರು ಜಿಲ್ಲೆಯನ್ನು ಭತ್ತದ ಕಣಜ ಎಂದು ಕರೆಯುತ್ತಾರೆ. ತುಂಗಭದ್ರಾ ಹಾಗೂ ಕೃಷ್ಣಾ ನದಿ ಜಲಾಶಯದ ನೀರಿನಿಂದ ಭತ್ತ ಬೆಳೆಯುತ್ತಿದ್ದು, ಸೋನಾ ಮಸೂರಿ ಎಂಬ ಉತ್ಕೃಷ್ಟ ತಳಿಯ ಭತ್ತವನ್ನು ಬೆಳೆಯುತ್ತಿದ್ದಾರೆ. ಆದರೆ ಈ ವರ್ಷ ಭತ್ತದ ಬೆಳೆಯೂ ಇಲ್ಲ, ಮಾರುಕಟ್ಟೆಯಲ್ಲಿ ಬೆಲೆಯೂ ಇಳಿಕೆಯಾಗಿದೆ. ಹೀಗಾಗಿ ಶೀಘ್ರ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಎಲ್ಲ ತಾಲೂಕಿನಲ್ಲಿ ಒಟ್ಟು 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ನಿಗಿದಿಗಿಂತ ಅಧಿಕ ಪ್ರಮಾಣದಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ. ಈಗ ಭತ್ತ ಪೈರು ಕಟಾವು ಮಾಡಿ, ಮಾರುಕಟ್ಟೆಗೆ ಭತ್ತವನ್ನು ಮಾರಾಟ ಮಾಡಲು ತರುತ್ತಿದ್ದಾರೆ. ಆರಂಭದಲ್ಲಿಯೇ ಭತ್ತದ ದರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರತಿ ಚೀಲಕ್ಕೆ 1200-1800 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಈ ದಿನದಲ್ಲಿ 1800 ರಿಂದ 2200 ರೂಪಾಯಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ದರ ಇಳಿಕೆಯಾಗುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಇದನ್ನು ಓದಿ: ಗುಪ್ತಚರ ಇಲಾಖೆಯನ್ನು ಏನು ಚುನಾವಣೆ ಸಮೀಕ್ಷೆ ಮಾಡಲು ಬಿಟ್ಟಿದ್ದೀರಾ?; ಎಚ್.ಡಿ.ರೇವಣ್ಣ ಪ್ರಶ್ನೆ

ರಾಯಚೂರು ಮಾರುಕಟ್ಟೆಗೆ ನವಂಬರ್ ಒಂದರಿಂದ ನಿತ್ಯ ಸಾವಿರಾರು ಚೀಲ ಭತ್ತ ಮಾರಾಟಕ್ಕೆ ಬರುತ್ತಿದೆ. ರಾಯಚೂರಿಗೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಭತ್ತ ಮಾರಾಟಕ್ಕೆ ಬರುತ್ತಿದೆ. ಇಲ್ಲಿಯವರೆಗೂ ಸುಮಾರು 25 ಸಾವಿರ ಕ್ವಿಂಟಾಲ್ ಭತ್ತ ಬಂದಿದೆ, ಈ ವರ್ಷ ಮಳೆಯಿಂದಾಗಿ ಸುಮಾರು 17 ಸಾವಿರ ಹೆಕ್ಟೇರ್ ಪ್ರದೇಶವು ಮಳೆ ಹಾಗು ಪ್ರವಾಹದಿಂದ ಹಾಳಾಗಿದೆ. ಮೊದಲೇ ಬೆಳೆ ಹಾಳಾಗಿ ನಷ್ಟ ಅನುಭವಿಸಿದ ರೈತರಿಗೆ ಈಗ ದರ ಇಳಿಕೆಯಾಗಿ ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ. ಸರಕಾರ ನಿಧಾನ ಮಾಡದೇ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಹಾಗು ಭತ್ತ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ ಸವದಿ ಈ ನವಂಬರ್ ಒಂದರಿಂದ ಭತ್ತ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಕಾರ್ಯ ಆರಂಭವಾಗಿ ಡಿಸೆಂಬರ್ ಒಂದರಿಂದ ಖರೀದಿ ಆರಂಭಿಸಲಾಗುವುದು. ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾದರೆ ಮಾರುಕಟ್ಟೆಯಲ್ಲಿಯೂ ದರ ಏರಿಕೆಯಾಗಬಹುದು ಎಂದು ಹೇಳುತ್ತಾರೆ. ಆದರೆ ನೋಂದಣಿ ನೆಪದಲ್ಲಿ ದಿನದೂಡುವದಕ್ಕಿಂತ ಬೇಗ ಖರೀದಿ ಕೇಂದ್ರ ಆರಂಭಿಸಿ ಖರೀದಿಸಲು ಇರುವ ನಿಬಂಧನೆಗಳನ್ನು ಸಡಿಲಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
Published by:HR Ramesh
First published: