Oxygen Unit: ಆಕ್ಸಿಜನ್ ಯೂನಿಟ್​ಗಳನ್ನು ಆಯಾ ರಾಜ್ಯಗಳೇ ಅಳವಡಿಸಿಕೊಳ್ಳಬೇಕು; ಪ್ರಹ್ಲಾದ್ ಜೋಶಿ

ಒಂದು ಯೂನಿಟ್ ನಿಂದ ದಿನಕ್ಕೆ 60 ಜನರಿಗೆ ಆಕ್ಸಿಜನ್ ನೀಡಬಹುದು. ಭಾರತ ಸರ್ಕಾರದಿಂದ ಎಲ್ಲಾ ಸಹಕಾರ ಕೊಡಲಿಕ್ಕೆ ಸಿದ್ಧವಿದ್ದೇವೆ. ಶೇ. 90 ರಷ್ಟು ಆಕ್ಸಿಜನ್ ನ್ನು ರಾಜ್ಯದ ಒಳಗಿನಿಂದ್ಲೇ ಪೂರೈಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

  • Share this:
ಹುಬ್ಬಳ್ಳಿ: ಭಾರತ ಸರ್ಕಾರ ಆಕ್ಸೀಜನ್ ಘಟಕಗಳಿಗೆ ಆಯಾ ರಾಜ್ಯಗಳಿಗೆ ಅನುಮತಿ ನೀಡಿದ್ದು, ಆಕ್ಸೀಜನ್ ಯೂನಿಟ್ ಗಳನ್ನು ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಿಸ್ತಿರೋ ತಾಯಿ - ಮಗು ಪ್ರತ್ಯೇಕ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, 551 ಆಕ್ಸಿಜನ್ ಘಟಕಗಳಿಗೆ ಭಾರತ ಸರ್ಕಾರ ನಿನ್ನೆ ಅನುಮತಿ ಕೊಟ್ಟಿದೆ. ತಕ್ಷಣ ಈ ಯೂನಿಟ್ ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಒಂದು ಯೂನಿಟ್ ನಿಂದ ದಿನಕ್ಕೆ 60 ಜನರಿಗೆ ಆಕ್ಸಿಜನ್ ನೀಡಬಹುದು. ಭಾರತ ಸರ್ಕಾರದಿಂದ ಎಲ್ಲಾ ಸಹಕಾರ ಕೊಡಲಿಕ್ಕೆ ಸಿದ್ಧವಿದ್ದೇವೆ. ಶೇ. 90 ರಷ್ಟು ಆಕ್ಸಿಜನ್ ನ್ನು ರಾಜ್ಯದ ಒಳಗಿನಿಂದ್ಲೇ ಪೂರೈಕೆ ಮಾಡಲಾಗುತ್ತಿದೆ. ಉಳಿದ 10 ರಷ್ಟು ಆಕ್ಸೀಜನ್ ಸಹ ಇಲ್ಲಿಂದಲೇ ಪೂರೈಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕಿದೆ ಎಂದರು.

ತಾಯಿ ಕಟ್ಟಡಗಳು  ಮಗು ಆರೈಕೆಗಾಗಿ ಪ್ರತ್ಯೇಕ ಕಟ್ಟಡವನ್ನು, 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ವರ್ಷ ಮುಕ್ತಾಯವಾಗಬೇಕಿತ್ತು. ಆದರೆ ವಿಳಂಬವಾಗಿದೆ. ಇಲ್ಲಿ ಸುಮಾರು 300 ಬೆಡ್ ಗಳ ವ್ಯವಸ್ಥೆಯಾಗಲಿದೆ. ಕನಿಷ್ಟ ವ್ಯವಸ್ಥೆಗಳನ್ನು ಮಾಡಿ ಉದ್ಘಾಟನೆಗೆ ಸಿದ್ಧ ಮಾಡಲಾಗುವುದು ಮಾಡುವಂತೆ ಹೆಳಿದ್ದೇನೆ ಎಂದರು.

ಕೋವಿಡ್ ಹೆಚ್ಚಾಗುತ್ತಿದ್ದು, ಅಗತ್ಯಕ್ಕಿಂತ ಹೆಚ್ಚು ಓಡಾಡಬೇಡಿ. ನಾನು ಯಾವ ಮದುವೆಗೂ ಹೋಗಿಲ್ಲ. ಅನಗತ್ಯವಾಗಿ ಓಡಾಡೋದನ್ನು ಕನಿಷ್ಟ 10 ದಿನವಾದ್ರು ಅವೈಡ್ ಮಾಡಿ. ರೂಪಾಂತರಿ ಕೊರೋನಾ ವೈರಸ್ ಗೆ ಬ್ರೇಕ್ ಹಾಕಬೇಕಿದೆ ಎಂದರು. ಆಕ್ಸೀಜನ್ ಕೊರತೆಯಾಗಲಾರದಂತೆ ನೊಡಿಕಳ್ಳಲಾಗುತ್ತೆ. ರೆಮಿಡಿಸಿವರ್ ಸಹ ತೊಂದರೆಯಿಲ್ಲ. ಖಾಸಗಿ ಆಸ್ಪತ್ರೆಗಳಿಗಳನ್ನು ಕರೆದು ಶೆ.50 ರಷ್ಟು ಬೆಡ್ ವ್ಯವಸ್ಥೆ ಮಾಡಬೇಕೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಶೇ50 ರ ಸಹಭಾಗಿತ್ವದಲ್ಲಿ ಕೋವಿಡ್ ವ್ಯಾಕ್ಸಿನ್:

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕೊ ವಿಚಾರದಲ್ಲಿ ಶೇ. 50 ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶೇ. 50 ಸಹಭಾಗಿತ್ವದಲ್ಲಿ ವ್ಯಾಕ್ಸಿನ್ ಕೊಡಬೇಕೆಂದಿದೆ ಎಂದರು.

ಇದನ್ನೂ ಓದಿ: HD Devegowda: ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಹೆಚ್​.ಡಿ. ದೇವೇಗೌಡ

ಆದರೆ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಕೊಡೋಕಾಗಲ್ಲ. ಅವಶ್ಯಕತೆ ಅನಿಸಿದವರಿಗೆ ಸರ್ಕಾರ ಉಚಿತವಾಗಿ ಕೊಡಲಾಗುವುದು. ಆದರೆ ಹಣವಿದ್ದವರು ಕೊಟ್ಟು ಹಾಕಿಸಿಕೊಳ್ಳಬೇಕೆಂದರು. ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ತಜ್ಞರ ಸಮಿತಿಯ ಪ್ರಕಾರ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಎಂದರು.

ಜೋಶಿ ದಂಪತಿಗಳಿಗೆ ವ್ಯಾಕ್ಸಿನ್:

ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡರು. ಪತ್ನಿ ಸಮೇತ ಕಿಮ್ಸ್ ಗೆ ಆಗಮಿಸಿದ ಪ್ರಹ್ಲಾದ್ ಜೋಶಿ, ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಂಡರು. ಎರಡನೆಯ ಡೋಸ್ ಹಾಕಿಸಿಕೊಂಡ ಪ್ರಹ್ಲಾದ್ ಜೋಶಿ ಮತ್ತು ಅವರ ಪತ್ನಿ. ಒಂದು ತಿಂಗಳ ಹಿಂದೆ ಇದೇ ಕಿಮ್ಸ್ ಆವರಣದಲ್ಲಿ ಜೋಶಿ ದಂಪತಿಗಳು ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡಿದ್ದರು. ಈ ವೇಳೆ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

(ವರದಿ - ಶಿವರಾಮ ಅಸುಂಡಿ)
Published by:MAshok Kumar
First published: