HOME » NEWS » District » OXYGEN CRISIS IN INDIA BAHRAIN OXYGEN COMES TO MANGALORE DKK MAK

Oxygen Crisis: ಭಾರತದಲ್ಲಿ ಆಕ್ಸಿಜನ್​ಗೆ ಪೀಕಲಾಟ; ಮಂಗಳೂರಿಗೆ ಬಂದ ಬಹರೈನ್ ಆಮ್ಲಜನಕ!

ಬಹರೈನ್ ನ ಮನಾಮಾ ಬಂದರ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ತಂದ ನೌಕಾಪಡೆಯ ಐಎನ್ಎಸ್ ತಲ್ವಾರ್ ಹೆಸರಿನ ಯುದ್ಧ ಹಡಗು ನವಮಂಗಳೂರು ಬಂದರಿಗೆ ಇಂದು‌ ತಲುಪಿದೆ.

news18-kannada
Updated:May 5, 2021, 11:05 PM IST
Oxygen Crisis: ಭಾರತದಲ್ಲಿ ಆಕ್ಸಿಜನ್​ಗೆ ಪೀಕಲಾಟ; ಮಂಗಳೂರಿಗೆ ಬಂದ ಬಹರೈನ್ ಆಮ್ಲಜನಕ!
ಭಾರತಕ್ಕೆ ಬಂದಿರುವ ಬಹರೈನ್ ಆಕ್ಸಿಜನ್.
  • Share this:
ಮಂಗಳೂರು: ಪ್ರಾಣವಾಯು ಸಿಗದೆ ರಾಜ್ಯ ನಲುಗಿ ಹೋಗಿದೆ. ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆದ ದುರಂತ ಬೆಚ್ಚಿ ಬೀಳಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆಕ್ಸಿಜನ್ ಹೊಂದಿಸಲು ಪರದಾಡುತ್ತಿವೆ. ಇದರ ನಡುವೆ ದೂರದ ದೇಶದಿಂದ ನೀರಿನ ಮೇಲೆ ವಾರ್ ಶಿಪ್ ನಲ್ಲಿ ಆಕ್ಸಿಜನ್ ಬಂದಿದೆ. . ಕೊವಿಡ್ ಪ್ಯಾಂಡಮಿಕ್ ಗೆ ಭಾರತ ನಲುಗಿ ಹೋಗುತ್ತಿದೆ. ಕರ್ನಾಟಕದ ಪರಿಸ್ಥಿತಿ ಗಂಭೀರವಾಗುತ್ತಿದೆ. ಪ್ರಾಣವಾಯು ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡಲು ಹರಸಾಹಸಪಡುತ್ತಿದ್ದಾರೆ. ಈ ಮಧ್ಯೆ ಭಾರತಕ್ಕೆ ಆಕ್ಸಿಜನ್ ದೂರದ ಬಹರೈನ್ ದೇಶದಿಂದ ಬಂದಿಳಿದಿದೆ.

ಹೌದು.. ರಾಜ್ಯದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ದೂರದ ಬಹರೈನ್ ನಿಂದ ಮಂಗಳೂರಿಗೆ ಆಕ್ಸಿಜನ್ ಹಡಗಿನ ಮೂಲಕ ಬಂದಿದೆ. ಬಹರೈನ್ ನ ಮನಾಮಾ ಬಂದರ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ತಂದ ನೌಕಾಪಡೆಯ ಐಎನ್ಎಸ್ ತಲ್ವಾರ್ ಹೆಸರಿನ ಯುದ್ಧ ಹಡಗು ನವಮಂಗಳೂರು ಬಂದರಿಗೆ ಇಂದು‌ ತಲುಪಿದೆ. ಎರಡು ಕ್ರಯೋಜೆನಿಕ್ ಐಸೋ ಕಂಟೇನರ್ ನ್ನು ಹೊತ್ತು‌ ತಂದ ಹಡಗಿನಿಂದ ಕಂಟೇನರನ್ನು ಇಳಿಸಲಾಗಿದ್ದು, ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿಡಲಾಗುತ್ತದೆ.

ಇದನ್ನು ರಿಸೀವ್ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೇರಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎನ್.ಎಂ.ಪಿ.ಟಿ ಗೆ ಆಗಮಿಸಿದ್ರು. ಬಹರೈನ್ ಸರ್ಕಾರ ರೆಡ್ ಕ್ರಾಸ್ ಸಂಸ್ಥೆಗೆ ಆಕ್ಸಿಜನ್ ನನ್ನು ನೀಡಿದ್ದು ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರ ಮಾಡಿತು.

ಇನ್ನು ಇಲ್ಲಿ ಬಂದ ಆಕ್ಸಿಜನ್ ನನ್ನು ದೊಡ್ಡ ದೊಡ್ಡ ಕ್ರೇನ್ ಗಳ ಮೂಲಕ ಇಳಿಸಲಾಯ್ತು. 40 ಮೆಟ್ರಿಕ್ ಟನ್ ಪೈಕಿ 20 ಮೆಟ್ರಿಕ್ ಟನ್ ನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡಕ್ಕೆ ಪೂರೈಕೆ ಮಾಡಲಾಗುವುದು, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್ ನ್ನು ರಾಜ್ಯದ ವಿವಿದೆಡೆ ಅಗತ್ಯ ಇರುವಲ್ಲಿ ಸರಬರಾಜು ಮಾಡಲಾಗುವುದು.

ಸದ್ಯ ಬೇರೆ ಬೇರೆ ದೇಶಗಳು ಸಂದಿಗ್ಧ ಸಂದರ್ಭದಲ್ಲಿ ಭಾರತ ಜೊತೆ ನಿಲ್ಲುತ್ತಿರೋದು ಉತ್ತಮ ವಿಚಾರ. ಇನ್ನು ಇಲ್ಲಿ ಬಂದ ಆಕ್ಸಿಜನ್ ನನ್ನು ಸರಿಯಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ. ನಮಮಂಗಳೂರು ಬಂದರಿನ ಬೇರೆ ಎಲ್ಲಾ ಶಿಫ್ಟಿಂಗ್ ಕಾರ್ಯಗಳನ್ನು ಸ್ಥಗಿತಗೊಳಿಸಿ ಕ್ರೇನ್ ಮೂಲಕ ಟ್ಯಾಂಕರ್ ಗಳನ್ನು ಕೆಳಗಿಳಿಸಲಾಗಿದೆ.ಇಡೀ ದಿನ ಎನ್ ಎಂಪಿಟಿ  ಬಳಿ ಸಮುದ್ರದಲ್ಲಿ ಹಡಗುಗಳು ಸಂಚರಿಸಿದಂತೆ ತಡೆ ಹೇರಲಾಗಿತ್ತು.

ಇದನ್ನೂ ಓದಿ: Chamarajanagara Tragedy: ಚಾಮರಾಜನಗರ ದುರಂತದ ಹಿನ್ನೆಲೆ ದಾಖಲೆಗಳ ಸೀಜ್​ಗೆ ಹೈಕೋರ್ಟ್​ ಸೂಚನೆ; ಆಸ್ಪತ್ರೆ ಮೇಲೆ ಪೊಲೀಸರ ದಾಳಿ!

ಬಹರೈನ್ ನ ಮನಾಮಾ  ಬಂದರಿನಿಂದ ನೌಕೆ ಹೊರಟಿದ್ದು,ನೌಕೆಯಲ್ಲಿ ಕೊವೀಡ್ ಚಿಕಿತ್ಸಗೆ ಬಳಸುವ ಇತರ ವೈದ್ಯಕೀಯ ಉಪಕರಣಗಳನ್ನೂ ಹೊಂದಿದೆ. ಬಹರೈನ್ ನಿಂದ ಬಂದ ಆಕ್ಸಿಜನ್ ನಮಮಂಗಳೂರು ಬಂದರಿನಲ್ಲಿ ಶೇಖರಣೆ ಮಾಡಲಾಗಿದ್ದು,ಯಾವ ಜಿಲ್ಲೆಗೆ ಕಳುಹಿಸಬೇಕು ಎಂಬುವುದನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ.ಸರ್ಕಾರದ ಸೂಚನೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಆಕ್ಸಿಜನ್ ಸರಬರಾಜು ಮಾಡಲಿದೆ.
Youtube Video

ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಈಗಾಗಲೇ ನೂರಾರು ಸೋಂಕಿತರು ಮೃತಪಟ್ಟಿದ್ದು,ಹಲವು ರಾಷ್ಟ್ರಗಳು ಆಕ್ಸಿಜನ್ ನೆರವು ನೀಡಿದೆ..ಈಗಾಗಲೇ ಸೌದಿ ಆರೇಬಿಯಾ,ಯುಎಇ ಮತ್ತಿತರ ರಾಷ್ಟ್ರ ಗಳು ಈಗಾಗಲೇ ಆಕ್ಸಿಜನ್ ನೆರವು ನೀಡಿದ್ದು,ಈ ಹಿನ್ನಲೆಯಲ್ಲಿ ಬಹರೈನ್ ಆಕ್ಸಿಜನ್ ನೆರವು ನೀಡಿದೆ.
Published by: MAshok Kumar
First published: May 5, 2021, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories