HOME » NEWS » District » OUTRAGE OVER LOVE AFFAIR YOUNG MANS HOUSE SET ON FIRE BURNT DOWN CANK MAK

Crime News: ಪ್ರೇಮ ವಿವಾಹಕ್ಕೆ ಆಕ್ರೋಶ; ಯುವತಿ ಕಡೆಯವರಿಂದ ಯುವಕನ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆ

ಪ್ರೇಮ ವಿಚಾರವಾಗಿ ಗೋಣಿಘಟ್ಟಪುರ ವಾಸಿಯಾದ ರಾಹುಲ್ ಎಂಬುವವರ ಮನೆಗೆ ಇಂದು ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

news18-kannada
Updated:April 8, 2021, 7:20 AM IST
Crime News: ಪ್ರೇಮ ವಿವಾಹಕ್ಕೆ ಆಕ್ರೋಶ; ಯುವತಿ ಕಡೆಯವರಿಂದ ಯುವಕನ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆ
ಸಾಂದರ್ಭಿಕ ಚಿತ್ರ.
  • Share this:
ಆನೇಕಲ್ : ಅವ್ರು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.  ಹತ್ತಿರದ ಸಂಬಂಧಿಗಳು ಆಗಿದ್ದರಿಂದ ಸ್ವಲ್ಪ ಹೆಚ್ಚೆ ಹಚ್ಚಿಕೊಂಡಿದ್ದರು. ಅಲ್ಲದೇ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಇಬ್ಬರ ಪ್ರೀತಿ ಒಬ್ಬರನೊಬ್ಬರನ್ನು ಬಿಟ್ಟಿರದಷ್ಟು ಗಾಡವಾಗಿತ್ತು. ಆದ್ರೆ ಯುವತಿ ಮನೆಯವರಿಗೆ ಸುತರಾಮ್ ಇಷ್ಟವಿರಲಿಲ್ಲ. ಬೇರೊಬ್ಬ ಯುವಕನೊಂದಿಗೆ ಯುವತಿ ಮದುವೆಗೆ ಮುಂದಾಗಿದ್ದಾರು. ವಿಚಾರ ತಿಳಿದ ಯುವತಿ ಪ್ರಿಯಕರನ ಜೊತೆ ನಾಲ್ಕು ದಿನಗಳ ಹಿಂದೆ ಪರಾರಿಯಾಗಿದ್ದರು. ಆಕ್ರೋಶಗೊಂಡ ಯುವತಿ ಕುಟುಂಬದವರು ಇಂದು ನಸುಕಿನ ಜಾವ ಯುವಕನ ಮನೆಗೆ ಬೆಂಕಿ ಹಚ್ಚಿದ್ದು, ,ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. 

ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಗೋಣಿಘಟ್ಟಪುರ ಗ್ರಾಮದಲ್ಲಿ ಪ್ರೀತಿಸಿದ ಯುವಕನ ಜೊತೆ ಯುವತಿ ಪರಾರಿಯಾದ್ದರಿಂದ ಆಕ್ರೋಶಗೊಂಡ ಯುವತಿ ಕುಟುಂಬದವರು ಯುವಕನ ಮನೆಗೆ ಬೆಂಕಿ ಹಚ್ಚಿದ್ದು, ಬೈಕ್ ಸೇರಿದಂತೆ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗೋಣಿಘಟ್ಟಪುರ ವಾಸಿಯಾದ ರಾಹುಲ್ ಮತ್ತು ಮಾರತ್ ಹಳ್ಳಿ ಬಳಿಯ ಮುನ್ನೆಕೊಲ್ಲಾಳ ವಾಸಿಯಾದ ಮೋನಿಕಾ ಪರಸ್ಪರ ಪ್ರೀತಿಸಿ ನಾಲ್ಕು ದಿನಗಳ ಹಿಂದೆ ಪರಾರಿಯಾಗಿದ್ದಾರೆ. ಇದಕ್ಕೂ ಮೊದಲು ಯುವಕನ ಕುಟುಂಬದವರು ಮದುವೆ ವಿಚಾರ ಪ್ರಸ್ತಾಪಿಸಿದಾಗ ನಿರಾಕರಿಸಿದ್ದರು.

ಇದೀಗ ಯುವಕನ ಜೊತೆ ಯುವತಿ ಪರಾರಿಯಾಗಿರುವುದರಿಂದ ಯುವತಿ ಚಿಕ್ಕಪ್ಪ ಪಿಲ್ಲಾರೆಡ್ಡಿ ಎಂಬುವವರು ಮನೆಗೆ ಬೆಂಕಿ ಹಚ್ಚಿದ್ದಾರೆ.  ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಮನೆಗೆ ಬೆಂಕಿಹಚ್ಚಿದ್ದಾರೆ . ಯುವತಿ ಮನೆಯವರ ಕಿರುಕುಳಕ್ಕೆ ಬೇಸತ್ತು ಯುವಕನ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಹೊರಟು ಹೋಗಿದ್ದಾರೆ.  ಮನೆಯಲ್ಲಿ ಯಾರೂ ವಾಸ ಇಲ್ಲದೆ ಇದ್ದುದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಯುವಕನ ಚಿಕ್ಕಪ್ಪ ನಾಗರಾಜ್ ತಿಳಿಸಿದ್ದಾರೆ.

ಇನ್ನೂ ಪ್ರಿಯಕರ ರಾಹುಲ್ ಜೊತೆ ಯುವತಿ ಪರಾರಿಯಾಗಿರುವ ಬಗ್ಗೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿ ಕುಟುಂಬದವರು ದೂರು ನೀಡಿದ್ದರು. ಪೊಲೀಸರು ನಮ್ಮನ್ನು ಕರೆಸಿ ವಿಚಾರಣೆ ನಡೆಸಿದ್ದರು. ರಾಹುಲ್ ಮತ್ತು ಮೋನಿಕಾ ಪ್ರೇಮ ವಿಚಾರ ನಮಗೆ ತಿಳಿದಿರಲಿಲ್ಲ. ಆದರೂ ಮಾಹಿತಿ ಸಿಕ್ಕರೆ ಠಾಣೆಗೆ ಕರೆ ತರುವುದಾಗಿ ತಿಳಿಸಿದ್ದೆವು. ಈ ನಡುವೆ ಯುವತಿ ಕಡೆಯವರು ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆ ಸೇರಿದಂತೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಯುವಕ ರಾಹುಲ್ ಚಿಕ್ಕಮ್ಮ ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಜಕೀಯ ದ್ವೇಷ ಮತ್ತು ವಿರೋಧ ಪಕ್ಷಗಳನ್ನು ಹಣಿಯಲು ಕೇಂದ್ರದ ಏಜೆನ್ಸಿಗಳ ದುರುಪಯೋಗ; ಶಿವಸೇನೆ

ಪ್ರೇಮ ವಿಚಾರವಾಗಿ ಗೋಣಿಘಟ್ಟಪುರ ವಾಸಿಯಾದ ರಾಹುಲ್ ಎಂಬುವವರ ಮನೆಗೆ ಇಂದು ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಘಟನೆ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದ್ದು, ಶೀಘ್ರದಲ್ಲಯೇ ಬಂಧಿಸುವುದಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.
Youtube Video
ಒಟ್ನಲ್ಲಿ ಪ್ರೀತಿಗೆ ಕಣ್ಣಿಲ್ಲ ಅಂತಾರೆ ಯುವಕ ಯುವತಿ ಏನೋ ಪ್ರೀತಿಸಿ ಪರಾರಿಯಾಗಿದ್ದಾರೆ. ಆದ್ರೆ ಇಲ್ಲಿ ಯುವಕನ ಪೋಷಕರು ಭಯಕ್ಕೆ ಮನೆ ಬಿಟ್ಟು ಹೋಗಿದ್ದಾರೆ. ಇದೀಗ ಯುವತಿ ಕುಟುಂಬದವರು ಯುವಕನ ಮನೆಗೆ ಬೆಂಕಿ ಹಚ್ಚಿ ಪೊಲೀಸರ ಭಯದಿಂದ ನಾಪತ್ತೆಯಾಗಿದ್ದಾರೆ. ಪ್ರೇಮಿಗಳು ಪ್ರೀತಿಸುವುದರ ಜೊತೆಗೆ ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ.

(ವರದಿ : ಆದೂರು ಚಂದ್ರು)
Published by: MAshok Kumar
First published: April 8, 2021, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories