HOME » NEWS » District » OUTRAGE AGAINST MINISTER SHRIMANT PATIL PROTEST FOR TO DEMAND MINISTERS APOLOGIZE HK

ಶ್ರೀಮಂತ ಪಾಟೀಲ ವಿರುದ್ದ ಭುಗಿಲೆದ್ದ ಆಕ್ರೋಶ ; ಸಚಿವರ ಕ್ಷಮಾಪಣೆಗೆ ಆಗ್ರಹಿಸಿ ಪ್ರತಿಭಟನೆ

ಕಾಗವಾಡ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಕೂಡಲೆ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

news18-kannada
Updated:August 13, 2020, 5:40 PM IST
ಶ್ರೀಮಂತ ಪಾಟೀಲ ವಿರುದ್ದ ಭುಗಿಲೆದ್ದ ಆಕ್ರೋಶ ; ಸಚಿವರ ಕ್ಷಮಾಪಣೆಗೆ ಆಗ್ರಹಿಸಿ ಪ್ರತಿಭಟನೆ
ಪ್ರತಿಭಟನಾಕಾರರು
  • Share this:
ಚಿಕ್ಕೋಡಿ(ಆಗಸ್ಟ್. 13): ಜವಳಿ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸದಾ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ಸುದ್ದಿಯಾಗುತ್ತಲೆ ಇರುತ್ತಾರೆ. ಕಳೆದ 15 ದಿನಗಳ ಹಿಂದಷ್ಟೇ ಕರ್ನಾಟಕ ನೆಲದಲ್ಲಿ ನಿಂತು ಮರಾಠಿ ಪ್ರೇಮ ತೋರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಶ್ರೀಮಂತ ಪಾಟೀಲ ಈಗ ಮತ್ತೊಮ್ಮೆ ಸಚಿವರನ್ನ ಪ್ರಶ್ನೆ ಮಾಡಿದ್ದ ನೆರೆ ಸಂತ್ರಸ್ತರನ್ನ ಕುಡುಕರು ಎನ್ನುವ ಮೂಲಕ ವಿವಾದವನ್ನ ಸೃಷ್ಟಿಸಿದ್ದಾರೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಗಲ್ಲಿ ಸುರಿದ ಭಾರಿ ಮಳೆಯಿಂದ ಕೃಷ್ಣಾ ತೀರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೆ ಕಳೆದ ವರ್ಷವು ಸಚಿವರ ಕಾಗವಾಡ ಕ್ಷೇತ್ರದ 20 ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನುಗ್ಗಿ ಪ್ರವಾಹ ಬಂದಿತ್ತು ಈ ಬಾರಿಯುಜುಗುಳು ಮುಳವಾಡ, ಮಂಗಾವತಿ ಗ್ರಾಮಗಳ ತೀರದಲ್ಲಿ ನೀರು ನುಗ್ಗಿ ಬೆಳೆ ಹಾಣಿಯಾಗಿ ಸಾಕಷ್ಟು ನಷ್ಟವನ್ನ ಸಂತ್ರಸ್ತರು ಅನುಭವಿಸಿದ್ದರು. ಇದರ ಪರಿಶೀಲನೆಗೆ ತೆರಳಿದ್ದಾಗ ಸಚಿವರನ್ನ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು.

ಸಂತ್ರಸ್ತರ ಸಂಕಷ್ಟಕ್ಕೆ ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲಾ ಕಳೆದ ವರ್ಷ ಪ್ರವಾಹ ಬಂದಾಗ ಸಾವಿರಾರು ಸಂತ್ರಸ್ತರು ಮನೆ ಮಠಗಳನ್ನ ಕಳೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಾಗ ಎಲ್ಲರಿಗೂ ಪರಿಹಾರ ಕೊಡುವ ಭರವಸೆ ನೀವು ಕೊಟ್ಟಿದ್ರಿ ಅಲ್ಲದೆ ಸ್ವತಃ ಮುಖ್ಯಮಂತ್ರಿಗಳು ಕೊಟ್ಟಿದ್ದರು. ಅಂದು ಸುಳ್ಳು ಭರವಸೆಗಳನ್ನು ನೀಡಿ ಮತಗಳನ್ನು ಪಡೆದು ಸಚಿವಾರದ ಬಳಿಕ ಮತ್ತೆ ಈ ಕಡೆಗೆ ನೀವು ತಲೆ ಹಾಕಿಲ್ಲ. ಪ್ರವಾಹ ಸಂತ್ರಸ್ತರ ಬದುಕಿನ ಬಗ್ಗೆ ನಿಮಗೆ ಕಿಂಚಿತ್ತೂ ಕಾಳಜಿ ಇಲ್ಲಾ. ಎಂದು ಕಳೆದ ಎರಡು ದಿನಗಳ ಹಿಂದೆ ಮುಳವಾಡ ಗ್ರಾಮಕ್ಕೆ ಸಚಿವರು ಭೇಟಿ ನೀಡಿದಾಗ ಇಲ್ಲಿನ ಜನ ಸಚಿವರನ್ನ ತರಾಟೆಗೆ ತೆಗೆದುಕೊಂಡಿದ್ದರು.

ಜವಳಿ ಖಾತೆ ಸಚಿವರೆ ಜನ ಸತ್ತಮೇಲೆ ಬರುತ್ತೀರಾ. ಇಷ್ಟು ದಿನ ಬರದವರು ಈಗ ಯಾಕೆ ಬಂದಿದ್ದೀರಿ. ನಿಮಗೆ ಜನರ ಜೀವಕ್ಕಿಂತ ಅಧಿಕಾರ ದಾಹವೇ ಹೆಚ್ಚಾಯ್ತು ಎಂದು ಜನ ಆಕ್ರೋಶ ಹೊರ ಹಾಕಿದ್ದರು. ಆದರೆ ಮಾರನೇ ದಿನವೇ ಗಲಾಟೆ ನಡೆದ ವಿಚಾರವಾಗಿ ಮಾತನಾಡಿ ಗಲಾಟೆ ಮಾಡಿದವರು ಕುಡುಕರು. ಕುಡುಕರು ಹಾಗೆ ಮಾತನಾಡಿದ್ದಾರೆ ಎಂದು ಸಂತ್ರಸ್ತರ ವಿಚಾರವಾಗಿ ಹಗುರವಾಗಿ ಮಾತನಾಡುವ ಮೂಲಕ ವಿವಾದವನ್ನ ಹುಟ್ಟು ಹಾಕಿದ್ದರು.

ಇನ್ನು ಸಂತ್ರಸ್ತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶ್ರೀಮಂತ ಪಾಟೀಲ ವಿರುದ್ಧ ಆಕ್ರೋಶ ಬುಗಿಲೆದ್ದಿದೆ. ಕೂಡಲೆ ಸಚಿವರು ಸಂತ್ರಸ್ತರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಇಂದು ಕನ್ನಡಪರ ಹೋರಾಟಗಾರ ಬಸನಗೌಡ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕಾಗವಾಡ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ಕೂಡಲೆ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ :  ಐದು ತಿಂಗಳ ನಂತರ ಕೋವಿಡ್ ಸಹಾಯವಾಣಿ – ಸರ್ಕಾರದ ದೂರದೃಷ್ಟಿಗೆ ಸಲಾಂ ; ಪ್ರಿಯಾಂಕ್ ಖರ್ಗೆ ವ್ಯಂಗ್ಯಇನ್ನು 15 ದಿನಗಳ ಹಿಂದಷ್ಟೇ ಅಥಣಿ ತಾಲೂಕಿನ ಬಳಿಗೇರಿ ಗ್ರಾಮದ ಹೊರ ವಲಯದಲ್ಲಿ ಮಹಾರಾಷ್ಟ್ರದ ಕೃಷಿ ಸಚಿವ ವಿಶ್ವಜೀತ ಕದಂ ಅವರ ಸಕ್ಕರೆ ಕಾರ್ಖಾನೆ ಭೂಮಿ ಪೂಜೆಯಲ್ಲು ಕನ್ನಡವನ್ನ ಗಾಳಿಗೆ ತೂರಿ ಮರಾಠಿ ಪ್ರೇಮ ಮೇರೆದಿದ್ದರು. ಕರ್ನಾಟದಲ್ಲೆ ಕಾರ್ಯಕ್ರಮ ನಡೆದರು ಎಲ್ಲಿಯೂ ಕನ್ನಡ ಬಳಕೆ ಮಾಡದೆ ಮರಾಠಿಯಲ್ಲೆ ಭಾಷಣ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಶ್ರೀಮಂತ ಪಾಟೀಲ ಗುರಿಯಾದ್ರು ಸಾಕಷ್ಟು ಪ್ರತಿಭಟನೆಗಳು ನಡೆದು ಪ್ರಕರಣ ಮಾಸುವ ಮುನ್ನವೆ ಮತ್ತೊಮ್ಮೆ ಸಂತ್ರಸ್ತರನ್ನ ಕುಡುಕರು ಎನ್ನುವ ಮೂಲಕ ಮತ್ತೊಂದು ವಿವಾದವನ್ನ ಹುಟ್ಟು ಹಾಕಿದ್ದಾರೆ.

ಒಟ್ಟಿನಲ್ಲಿ ಸದಾ ಒಂದಿಲ್ಲೊಂದು ವಿವಾದ ಹುಟ್ಟು ಹಾಕುತ್ತಿರುವ ಸಚಿವರು ಕೂಡಲೆ ಕ್ಷಮೆ ಯಾಚನೆ ಮಾಡಬೇಕು ಅಲ್ಲದೆ ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನ ಕೂಡಲೆ ಈಡೇರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
Published by: G Hareeshkumar
First published: August 13, 2020, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories