HOME » NEWS » District » ORGANIC MANDYA INSTITUTE GET CENTRAL GOVERNMENT AWARD FOR AGRICULTURE ACHIEVEMENT RH RGM

ಸಕ್ಕರೆನಾಡಿಗೆ ಕೀರ್ತಿ ತಂದ ಆರ್ಗ್ಯಾನಿಕ್ ಮಂಡ್ಯ; ಅಮೆರಿಕ ತೊರೆದು ರೈತರ ನೆರವಿಗೆ ಸಂಸ್ಥೆ ಕಟ್ಟಿದ ಯುವ ಉದ್ಯಮಿ

ಒಟ್ಟಾರೆ ಈ ಆರ್ಗ್ಯಾನಿಕ್ ಮಂಡ್ಯ  ಹೆಸರಿನ ಸಂಸ್ಥೆ ಇದೀಗ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಕೃಷಿ ಕ್ಷೇತ್ರದ ಉದ್ಯಮದಲ್ಲಿ‌ ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜೊತೆಗೆ ನೌಕಾದಳದ ಸೈನಿಕರಿಗೆ ಸಾವಯವ ಕೃಷಿ ಉತ್ಪನ್ನಗಳನ್ನು ರಪ್ತು ಮಾಡುವ ಅವಕಾಶ ಪಡೆದಿರೋದು ಮಂಡ್ಯದ ರೈತರ ಹೆಮ್ಮೆಯ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

news18-kannada
Updated:November 28, 2020, 5:38 PM IST
ಸಕ್ಕರೆನಾಡಿಗೆ ಕೀರ್ತಿ ತಂದ ಆರ್ಗ್ಯಾನಿಕ್ ಮಂಡ್ಯ; ಅಮೆರಿಕ ತೊರೆದು ರೈತರ ನೆರವಿಗೆ ಸಂಸ್ಥೆ ಕಟ್ಟಿದ ಯುವ ಉದ್ಯಮಿ
ಆರ್ಗ್ಯಾನಿಕ ಮಂಡ್ಯ ಸಂಸ್ಥೆ
  • Share this:
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಆರ್ಗ್ಯಾನಿಕ್ ಮಂಡ್ಯ ಎನ್ನುವ ಸಂಸ್ಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಮಂಡ್ಯದ ಯುವ ಉದ್ಯಮಿಯೊಬ್ಬರು ದೂರದ ಅಮೆರಿಕಾದಲ್ಲಿನ ಕೆಲಸ ಬಿಟ್ಟು ಬಂದು ಮಂಡ್ಯದಲ್ಲಿ ರೈತರಿಗಾಗಿ ಸ್ಥಾಪಿಸಿದ ಈ ಸಂಸ್ಥೆಗೆ ಇದೀಗ ಸ್ಟಾರ್ಟಪ್ ಇಂಡಿಯಾದಲ್ಲಿ ಕೃಷಿ ಕ್ಷೇತ್ರದ ಸೇವೆಗಾಗಿ ಕೇಂದ್ರದ ಪ್ರಶಸ್ತಿಗೆ ಭಾಜನವಾಗಿದೆ. ಅದರ  ಜೊತೆಗೆ ಇದೀಗ ಈ ಸಂಸ್ಥೆಯ ಉತ್ಪನ್ನಗಳು ಭಾರತೀಯ ನೌಕಾಸೇನೆಗೂ ರವಾನಿಸುವ ಮೂಲಕ ಆರ್ಗ್ಯಾನಿ ಕ್ ಮಂಡ್ಯ  ಸಂಸ್ಥೆ ಸಾಧನೆ ಮಾಡಿದೆ.

ಹೌದು! ಸಕ್ಕರೆನಾಡು ಮಂಡ್ಯದ ಆರ್ಗ್ಯಾನಿಕ್ ಮಂಡ್ಯ ಎನ್ನುವ ಸಂಸ್ಥೆಯೊಂದು ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗ್ತಿದೆ. ದೂರದ ಅಮೇರಿಕಾದಲ್ಲಿ ಕೈತುಂಬಾ ಸಂಬಳ ಬರ್ತಿದ್ದ ಕೆಲಸ ಬಿಟ್ಟು ಮಂಡ್ಯಕ್ಕೆ ಬಂದ ಯುವಕನೋರ್ವ ಜಿಲ್ಲೆಯಲ್ಲಿ ರೈತರಿಗಾಗಿ ಆರ್ಗ್ಯಾನಿಕ್ ಮಂಡ್ಯ ಹೆಸರಲ್ಲಿ ಸಂಸ್ಥೆ ತೆರೆದು ಜಿಲ್ಲೆಯಲ್ಲಿ ರೈತರೊಂದಿಗೆ ಸಾವಯವ ಕೃಷಿ ಪದ್ದತಿಗೆ ನಾಂದಿ ಹಾಡಿದರು. ಇದರಿಂದಾಗಿ ರೈತರು ಬೆಳೆದ ಸಾವಯವ ಕೃಷಿ ಆಹಾರ ಉತ್ಪನ್ನವನ್ನು ಮಾರಾಟ ಮಾಡುತ್ತಾ ಇಂದು ಯಶಸ್ವಿ‌ ಉದ್ಯಮಿಯಾಗಿದ್ದಾರೆ. ಇವರ ಈ ಸಾಧನೆಗೆ ಕೇಂದ್ರ ಸರ್ಕಾರ ಈ ಬಾರಿ ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ಕೇಂದ್ರದ  ಸರ್ಕಾರದ ಸ್ಟಾರ್ಟರ್ಪ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆ ಇದೀಗ ಈ ಸಂಸ್ಥೆಯ ಸಾವಯವ ಕೃಷಿ ಆಹಾರ ಉತ್ಪನ್ನವನ್ನು ಕೇಂದ್ರದ ನೌಕಾ ಸೇನೆ ಯೋಧರಿಗೆ ಕೂಡ ರವಾನಿಸಲು ಅನುಮತಿ ಸಿಕ್ಕಿದ್ದೆ.ಈ ಸಂಸ್ಥೆಯಲ್ಲಿ ಉತ್ಪಾದಿಸುವ ಸಾವಯವ ಬೆಲ್ಲ, ಸೊಪ್ಪು,ಕಾಳು, ಕಿರು ಆಹಾನ್ಯ ಧಾನ್ಯ ಸೇರಿ 40 ಬಗೆಯ ಪದಾರ್ಥವನ್ನು ಸೇನೆಗೆ ಕಳಿಸುವಂತೆ  ಮನವಿ ಮಾಡಿಕೊಂಡಿದೆ. ಇದಕ್ಕೆ ಈ ಸಂಸ್ಥೆಯ  ಸಂಸ್ಥಾಪಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಸಿಲಿಕಾನ್ ಸಿಟಿ ಜನರ ಸಮಸ್ಯೆ ಆಲಿಸಲು ಮುಂದಾದ ಖಾಕಿ; ಪ್ರತಿ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಆಯೋಜನೆ‌‌

ಇನ್ನು ಕಳೆದ ಐದು ವರ್ಷಗಳ ಹಿಂದೆ ಈ ಸಂಸ್ಥೆ ಆರಂಭಿಸಿದಾಗ ಕೇವಲ 20 ಪದಾರ್ಥಗಳು ಮಾತ್ರ ಇತ್ತು. ಇಂದು ಈ ಸಂಸ್ಥೆ 400 ಕ್ಕೂ ಹೆಚ್ಚು ಪಾದಾರ್ಥಗಳನ್ನು  ಹೊಂದಿದ್ದು ರಾಜ್ಯದಲ್ಲಿ 10 ಕ್ಕೂ ಹೆಚ್ಚು ಕಡೆ ತನ್ನ ಮಾರಾಟ ಮಳಿಗೆ ಹೊಂದಿದೆ. ‌ಅಲ್ಲದೇ ಜಿಲ್ಲೆ ಹಾಗೂ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಸಾವಯವ ಪದ್ದತಿಯಲ್ಲಿ ರೈತರು‌ ಬೆಳೆದ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಮಾರಾಟ ಮಾಡಿ ರೈತರಿಗೂ ಮತ್ತು ಸಂಸ್ಥೆಗೂ ಲಾಭ‌ ಮಾಡಿಕೊಡುತ್ತಿದೆ. ಜೊತೆಗೆ 200 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದೆ. ಇದರ ಜೊತೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ  ತನ್ನ ಸಂಸ್ಥೆಯ ಪದಾರ್ಥಗಳ ವ್ಯಾಪಾರ ವಹಿವಾಟು‌ ನಡೆಸಲು ಸಿದ್ದತೆ ನಡೆಸುತ್ತಿದೆ. ರೈತರು ಬೆಳೆದ ಉತ್ಪನ್ನಗಳನ್ನು ಈ‌ ಆರ್ಗ್ಯಾನಿಕ್ ಸಂಸ್ಥೆ ನೇರವಾಗಿ ಖರೀದಿಸುವ ಮೂಲಕ ರೈತರಿಗೂ ಲಾಭ ಮಾಡಿಕೊಡ್ತಿದೆ. ಇದ್ರಿಂದಾಗಿ  ಈ ಆರ್ಗ್ಯಾನಿಕ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ಟಾರೆ ಈ ಆರ್ಗ್ಯಾನಿಕ್ ಮಂಡ್ಯ  ಹೆಸರಿನ ಸಂಸ್ಥೆ ಇದೀಗ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಕೃಷಿ ಕ್ಷೇತ್ರದ ಉದ್ಯಮದಲ್ಲಿ‌ ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜೊತೆಗೆ ನೌಕಾದಳದ ಸೈನಿಕರಿಗೆ ಸಾವಯವ ಕೃಷಿ ಉತ್ಪನ್ನಗಳನ್ನು ರಪ್ತು ಮಾಡುವ ಅವಕಾಶ ಪಡೆದಿರೋದು ಮಂಡ್ಯದ ರೈತರ ಹೆಮ್ಮೆಯ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Published by: HR Ramesh
First published: November 28, 2020, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories