HOME » NEWS » District » OPERATION OF THE BELGAUM POLICE THE ARREST OF 9 ASSOCIATES OF THE GOKAK TIGER GANG HK

ಬೆಳಗಾವಿ ಪೊಲೀಸರ ಕಾರ್ಯಾಚರಣೆ - ಗೋಕಾಕ್ ಟೈಗರ್ ಗ್ಯಾಂಗ್​​​ನ 9 ಜನ ಸಹಚರರ ಬಂಧನ

ಆರೋಪಿಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು 30 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡು, 4 ತಲ್ವಾರ್, 3 ಜಂಬೆ ಹಾಗೂ 22 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ

news18-kannada
Updated:September 3, 2020, 7:15 AM IST
ಬೆಳಗಾವಿ ಪೊಲೀಸರ ಕಾರ್ಯಾಚರಣೆ - ಗೋಕಾಕ್ ಟೈಗರ್ ಗ್ಯಾಂಗ್​​​ನ 9 ಜನ ಸಹಚರರ ಬಂಧನ
ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡ ವಸ್ತುಗಳು
  • Share this:
ಬೆಳಗಾವಿ(ಸೆಪ್ಟೆಂಬರ್ 03): ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗೋಕಾಕ್ ನ ಟೈಗರ್ ಗ್ಯಾಂಗ್​​​ನ 9 ಜನ ಸದಸ್ಯ ಬಂಧಿಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳ ಮನೆಗಳನ್ನು ಸರ್ಚ್ ಮಾಡಿಲಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.

ಗೋಕಾಕ್ ನಗರದ ಆದಿಜಾಂಭವ ನಗರದಲ್ಲಿ ಮೇ ತಿಂಗಳಲ್ಲಿ ದಲಿತ ಯುವಕ ಸಿದ್ದಪ್ಪ ಕನಮಡ್ಡಿ ಎಂಬ ಯುವಕನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಗೋಕಾಕ್ ಶಹರ ಪೊಲೀಸರು ತನಿಖೆ ಆರಂಭಿಸಿದ್ದರು. ಕೊಲೆಗೆ ಈ ಹಿಂದೆ ನಡೆದ ರೋಹಿತ್ ಪಾಟೀಲ್ ಕೊಲೆಯ ಸೇಡಿನ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 9 ಜನರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಈ ಪ್ರಕರಣ ಬೆನ್ನತ್ತಿಗೆ ಪೊಲೀಸರಿಗೆ ಹತ್ಯೆ ಪ್ರಕರಣದ ಹಿಂದೆ ಟೈಗರ್ ಗ್ಯಾಂಗ್ ನ ಕೈವಾಡ ಇರುವ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ ಕೋರ್ಟ್ ನಿಂದ ಸರ್ಚ್ ವಾರಂಟೆ ಪಡೆದು ಇಂದು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದರು.

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬುರಗಿ ನೇತೃತ್ವದಲ್ಲಿ ದಾಖಲೆ ನಡೆಸಲಾಗಿತ್ತು. ಈ ವೇಳೆಯಲ್ಲಿ ಅಪಾರ ಪ್ರಮಾಣದ ನಗದು ಹಣ, ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗೋಕಾಕ್ ನಗರದಲ್ಲಿ ಟೈಗರ್ ಗ್ಯಾಂಗ್ 2006ರಿಂದಲೇ ಆ್ಯಕ್ಟಿವ್ ಆಗಿದೆ. ಹಣ ವಸೂಲಿ, ವೈಯಕ್ತಿಕ ಪ್ರತಿಷ್ಠೆಯ ಸಲುವಾಗಿ ಅನೇಕ ಕೊಲೆ, ಕೊಲೆಯತ್ನ ಪ್ರಕರಣಗಳು ಗ್ಯಾಂಗ್ ಗೆ ಸೇರಿದ ಯುವಕರು ಮಾಡಿದ್ದಾರೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಅನೇಕ ಅಪರಾದ ಕೃತ್ಯಗಳನ್ನು ಎಸಗಿದ್ದಾರೆ. ಇನ್ನೂ ಅನೇಕ ಯುವಕರನ್ನು ಈ ಗ್ಯಾಂಗ್ ನತ್ತ ಸೆಳೆಯಲಾಗಿತ್ತು.

ಇದನ್ನೂ ಓದಿ : ಕಲಬುರ್ಗಿಯಲ್ಲಿ ಪೋಷಕರ ಬುದ್ಧಿಮಾತಿಗೆ ಮನೆಬಿಟ್ಟ ವಿದ್ಯಾರ್ಥಿ ; ಕಲ್ಲಿನ ಗಣಿಗೆ ಜಿಗಿದು ಆತ್ಮಹತ್ಯೆ

ಕೊಲೆ ಪ್ರಕರಣ ಸಂಬಂಧ ಬಂಧಿತ ಸುನಿಲ್ ಮುರ್ಕಿಬಾವಿ, ಕೇದಾರಿ ಜಾಧವ, ಗಂಗಾಧರ ಶಿಂಧೆ, ವಿನಾಯಕ ಹಡಗಿನಾಳ, ವಿಠಲ ಪವಾರ್, ವಿನೋದ್ ಹೊಸಮನಿ, ಕಿರಣ ದೊಡ್ಡನ್ನವರ್, ರವಿ ಚೂನ್ನವರ್, ಸಂತೋಷ ಚಿಗಡೊಳ್ಳಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಆರೋಪಿಗಳ ಮನೆ ಮೇಲೆ ದಾಳಿ ಮಾಡಿದ ಪೊಲೀಸರು 30 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡು, 4 ತಲ್ವಾರ್, 3 ಜಂಬೆ ಹಾಗೂ 22 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಪ್ರಕಾರ ದೂರು ದಾಖಲಾಗಿದೆ. ತನಿಖೆ ವೇಳೆಯಲ್ಲಿ ಪೊಲೀಸರಿಗೆ ಗ್ಯಾಂಗ್ ಸಂಬಂಧಿಸಿದ ಅನೇಕ ಮಹತ್ವದ ವಿಚಾರಗಳು ಗೊತ್ತಾಗಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ.
Published by: G Hareeshkumar
First published: September 3, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories