Operation Lotus: ಕೋಲಾರದಲ್ಲಿ  ಆಪರೇಷನ್ ಕಮಲ ಸಕ್ಸಸ್, ಕಾಂಗ್ರೆಸ್ ಗೆ ಜಿಲ್ಲಾಧ್ಯಕ್ಷ್ಯ ಚಂದ್ರಾರೆಡ್ಡಿ ಗುಡ್ ಬೈ

ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಾಗಿ ಸೇವೆ ಸಲ್ಲಿಸಿದರೂ ಮನ್ನಣೆ ನೀಡಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ವಿಆರ್ ಸುದರ್ಶನ್ ಹಾಗೂ ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ್ಯ ಚಂದ್ರಾರೆಡ್ಡಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಆಪರೇಷನ್ ಕಮಲ

ಆಪರೇಷನ್ ಕಮಲ

  • Share this:
ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಕಾಂಗ್ರೆಸ್ (Congress) ಪಕ್ಷ 15 ಸ್ಥಾನಗಳನ್ನ ಗೆಲ್ಲಲಿದೆ ಎಂದು ಕಾಂಗ್ರೆಸ್ ಪಕ್ಷ ವಿಶ್ವಾಸ ಹೊಂದಿದೆ. ಆದರೆ ಪಕ್ಷದಲ್ಲಿನ ಭಿನ್ನಮತ ಸ್ಪೋಟದಿಂದ ಚುನಾವಣೆ ವೇಳೆ ಕೈ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ (Kolar And Chikkaballapur) ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಮ್ ಎಲ್ ಅನಿಲ್ ಕುಮಾರ್ (ML Anilkumar) ರನ್ನ ಪಕ್ಷ ಘೋಷಿಸಿದ್ದು, ಇದೀಗ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ (KH Muniyappa) ಸೇರಿದಂತೆ, ಮಾಜಿ ಸಭಾಪತಿ ವಿಆರ್ ಸುದರ್ಶನ್ (VR Sudarshan) ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಕೆ ಚಂದ್ರಾರೆಡ್ಡಿ (K Chandrareddy) ಪಕ್ಷದ ವಿರುದ್ದವೇ ನೇರವಾಗಿ ಗುಡುಗುವಂತೆ ಮಾಡಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಚಂದ್ರಾರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಕೆಲಸ ಮಾಡಿದ್ದ ಚಂದ್ರಾರೆಡ್ಡಿ,  6 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ನಂತರ ಆ ಬಗ್ಗೆ ಮಾತನಾಡಿದ  ಅವರು, ಪಕ್ಷದಲ್ಲಿ ನಾನು ನಿಷ್ಠಾವಂತರಾಗಿ ದುಡಿದಿದ್ದಕ್ಕೆ ನನಗೆ ಅನ್ಯಾಯ ಮಾಡಿದೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಿಲ್ ಕುಮಾರ್ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಅಂತಹವರಿಗೆ ಕಾಂಗ್ರೆಸ್ ಪಕ್ಷ ಪರಿಷತ್ ಟಿಕೆಟ್ ನೀಡಿದೆ. ಇದೆಂಥಹಾ ನ್ಯಾಯ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ನಾಯಕರು ಇದಕ್ಕೆ ಬೆಂಬಲ ನೀಡಿದ್ದಾರೆ.

ಬಿಜೆಪಿ ಸೇರ್ಪಡೆಗೆ ಯಾವುದೇ ಷರತ್ತು ಹಾಕಿಲ್ಲ

ಪರಿಷತ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದೇ ಇರೋರಿಗೆ ಟಿಕೆಟ್ ನೀಡಿದ್ದು ಆಶ್ಚರ್ಯ ಉಂಟು ಮಾಡಿದೆ. ಪಕ್ಷದಲ್ಲಿನ ಬೆಳವಣಿಗೆಗೆ ಬೇಸತ್ತು ಹೊರ ಬಂದಿರುವೆ. ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿರುವೆ. ಬಿಜೆಪಿ ಸೇರ್ಪಡೆಗೆ ಯಾವುದೇ ಷರತ್ತು ಹಾಕಿಲ್ಲ, ಪಕ್ಷ ಗುರ್ತಿಸಿ ಅವಕಾಶ ನೀಡಿದರೆ ಸಂತೋಷ ಎಂದು ತಿಳಿಸಿದ್ದಾರೆ.

 ಕಾಂಗ್ರೆಸ್ ಪಕ್ಷದಿಂದ ಸತತ ಅನ್ಯಾಯವೇ ಆಗಿದೆ - ಮಾಜಿ ಸಭಾಪತಿ ಸುದರ್ಶನ್ 

ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಇರುವುದಕ್ಕೆ, ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಭಾಪತಿ ವಿಆರ್ ಸುದರ್ಶನ್ ಸಹ ಬಹಿರಂಗವಾಗಿ ಬೇಸರ ಹೊರಹಾಕಿದ್ದಾರೆ. ಕೋಲಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಮುಖಂಡರಿಗೆ ಟಿಕೆಟ್ ಕೈ ತಪ್ಪಿದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಏನೂ ಮಾತನಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಉಪ್ಪು ತಿಂದೋರು ನೀರು ಕುಡಿಯಲಿ: Siddaramaiah

ಪಕ್ಷದಲ್ಲಿ ನಾನು ನಿಷ್ಟಾವಂತನಾಗಿ ಕೆಲಸ ಮಾಡಿರುವೆ. ಪ್ರತಿಬಾರಿ ಅವಕಾಶ ಕೇಳಿದಾಗಲೂ ತಪ್ಪುತ್ತಿದೆ. ಈ ಬಗ್ಗೆ ನನಗೆ ಅಸಮಾಧಾನ ಇದೆ ಮುಂದೆ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಬಗ್ಗೆ ಮತದಾರರ ವಿವೇಚನೆಗೆ ತೀರ್ಮಾನಕ್ಕೆ ಬಿಡುತ್ತಿರುವೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ದವೇ ಬೇಸರ ಹೊರಹಾಕಿದರು.

ಕಾಣುತ್ತಿಲ್ಲ ಕೆಎಚ್ ಮುನಿಯಪ್ಪ , ಕೈ ಭಿನ್ನಮತ, ಬಿಜೆಪಿ ಅಭ್ಯರ್ಥಿಗೆ ಮುನ್ನಡೆಯಾಗುವ ಸಾಧ್ಯತೆ

ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಚಂದ್ರಾರೆಡ್ಡಿ ಬಿಜೆಪಿ ಸೇರ್ಪಡೆಯಿಂದ, ಬಂಗಾರಪೇಟೆ ಹಾಗೂ ಕೆಜಿಎಪ್ ತಾಲೂಕಿನಲ್ಲಿ ಬಿಜೆಪಿ ಆನೆಬಲ ಸಿಕ್ಕಂತಾಗಿದೆ. ಹೀಗಾಗಿ ಸಹಜವಾಗಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಈ ಮಧ್ಯೆ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಾಗಿ ಹೇಳಿರುವ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಇದುವರೆಗೂ ಕೈ ಅಭ್ಯರ್ಥಿ ಅನಿಲ್ ಕುಮಾರ್ ಪರವಾಗಿ ಒಂದು ಬಾರಿಯು ಪ್ರಚಾರ ನಡೆಸಿಲ್ಲ.

ಅನಿಲ್ ಕುಮಾರ್ ಹಾಗೂ ಕೆಎಚ್ ಮುನಿಯಪ್ಪ ಮಧ್ಯೆ ಭಿನ್ನಾಭಿಪ್ರಾಯ ಇದ್ದು ಇದೇ ಕಾರಣದಿಂದ ಟಿಕೆಟ್ ನೀಡದಂತೆಯೂ‌ ಕೆಎಚ್ ಮುನಿಯಪ್ಪ ಒತ್ತಡ ಹೇರಿದ್ದರು. ಆದರೂ ಸಿದ್ದರಾಮಯ್ಯ ಬಳಿ ಆಪ್ತರಾಗಿರುವ ರಮೇಶ್ ಕುಮಾರ್, ತಮ್ಮ ಆಪ್ತ ಅನಿಲ್ ಕುಮಾರ್ ರಿಗೆ ಟಿಕೆಟ್ ಕೊಡಿಸಿದ್ದಾರೆ,.ಆದರೆ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯದಿಂದ, ಜಿಲ್ಲೆಯಲ್ಲಿ ಬಿಜೆಪಿಗೆ  ಹೆಚ್ಚು ಲಾಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:  ಒಂದು ಗುಂಡಿನಿಂದ 17 ಗುಂಡು, ಬಳಿಕ ಬಾಂಬ್, ಇದು ಕಾಂಗ್ರೆಸ್ ಕೊಡುಗೆ: ನಳಿನ್ ಕುಮಾರ್ ಕಟೀಲ್

ಸಚಿವ ಸುಧಾಕರ್, ಉಸ್ತುವಾರಿ ಸಚಿವ ಮುನಿರತ್ನ ವಿಧಾನ ಪರಿಷತ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ವೇಣುಗೋಪಾಲ ಪರ  ಭರ್ಜರಿ ಮತಯಾಚನೆ ಮಾಡ್ತಿದ್ದಾರೆ. ಇದರ ಜೊತೆಗೆ ಆಪರೇಷನ್ ಕಮಲಕ್ಕು ನಾಯಕರು ಕೈ ಹಾಕಿದ್ದು, ಜಿಲ್ಲೆಯ ವಿಪಕ್ಷಗಳ ನಾಯಕರನ್ನ ಕಮಲ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನ ಭಿನ್ನಮತ ಬೆಂಬಿಡದೆ ಕಾಡುತ್ತಿದ್ದು  ಈ ಬಗ್ಗೆ ಪಕ್ಷದ ಹಿರಿಯ ನಾಯಕರು ಗಮನ ಹರಿಸಿ ಬಗೆಹರಿಸದೆ ಇದ್ದರೆ ವಿಪಕ್ಷಗಳಿಗೆ ಇದು ಲಾಭವಾಗುವ ಸಾಧ್ಯತೆ ಹೆಚ್ಚಿದೆ.
Published by:Mahmadrafik K
First published: