HOME » NEWS » District » ONLINE FRAUD IN THE NAME OF A SOLDIER A YOUNG MAN WHO LOSS MONEY TO GET A BIKE FOR A LOW PRICE RHHSN SAKLB

ಯೋಧನ ಹೆಸರಲ್ಲಿ ಆನ್​ಲೈನ್ ವಂಚನೆ; ಕಡಿಮೆ ದರಕ್ಕೆ ಬೈಕ್ ಸಿಗುತ್ತದೆ ಎಂದು ಹಣ ಹಾಕಿ ಮೋಸ ಹೋದ ಯುವಕ

ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಗುರುತು ಪರಿಚಯ ಇಲ್ಲದಿರುವವರಿಗೆ ಹಣ ಹಾಕುವ ಮೊದಲು ನೂರಾರು ಬಾರಿ ಯೋಚನೆ ಮಾಡಬೇಕಿದೆ. ಅದರಲ್ಲೂ ಅಮಾಯಕ ಜನರನ್ನೇ ಟಾರ್ಗೆಟ್ ಮಾಡುವ ಸೈಬರ್ ವಂಚಕರಿಂದ ಜನರು ಸಹ ಜಾಗುರಕತೆಯಿಂದ ಇರಬೇಕಾಗಿದೆ.

news18-kannada
Updated:April 5, 2021, 5:35 PM IST
ಯೋಧನ ಹೆಸರಲ್ಲಿ ಆನ್​ಲೈನ್ ವಂಚನೆ; ಕಡಿಮೆ ದರಕ್ಕೆ ಬೈಕ್ ಸಿಗುತ್ತದೆ ಎಂದು ಹಣ ಹಾಕಿ ಮೋಸ ಹೋದ ಯುವಕ
ಆನ್​ಲೈನ್​ನಲ್ಲಿ ಹಾಕಿದ್ದ ಬೈಕ್ ಫೋಟೋ
  • Share this:
ಹುಬ್ಬಳ್ಳಿ; ಇತ್ತೀಚೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಸೈಬರ್ ವಂಚನೆ ಹೆಚ್ಚಾಗಿ ನಡೆಯುತ್ತಿದೆ. ಇಲ್ಲೊಬ್ಬ ಖತರ್ನಾಕ್ ವ್ಯಕ್ತಿಯೊಬ್ಬ ದೇಶ ಕಾಯುವ ಸೈನಿಕರ ಹೆಸರಿನಲ್ಲಿ ವಿದ್ಯಾ ಕಾಶಿಯ ಯುವಕನಿಗೆ ಮೋಸ ಮಾಡಿದ್ದಾನೆ. ಇತ್ತ ಆನ್​ಲೈನ್​ನಲ್ಲಿ ಬೈಕ್​ ಫೋಟೋಗಳನ್ನು ನೋಡಿ, ಖರೀದಿಗೆ ಹಣ ಹಾಕಿದ್ದ ಯುವಕ, ಹಣ ಕಳೆದುಕೊಂಡು ಇದೀಗ ಕಂಗಾಲಾಗಿದ್ದಾನೆ.

ಹುಬ್ಬಳ್ಳಿ -ಧಾರವಾಡ ಜನರಿಗೆ ಇದೀಗ ಸೈಬರ್ ಕಾಟ ಹೆಚ್ಚಾಗಿ ಕಾಡುತ್ತಿದೆ. ಅದರಲ್ಲೂ ಮುಖವನ್ನೇ ನೋಡದೆ ಕೇವಲ ಒಂದೇ ಒಂದು ನಂಬಿಕೆ ಮೇಲೆ ಜನರು ದಿನದಿಂದ ದಿನಕ್ಕೆ ಹಣ ಕಳೆದುಕೊಳ್ಳುತ್ತಿದ್ದಾರೆ. ಹೌದು, ಇಂಥದ್ದೇ ಘಟನೆ ಒಂದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಆನ್ ಲೈನ್ ವಂಚನೆ ನಡೆದಿದೆ. ಅದೂ ಸಹ ಯೋಧನ ಹೆಸರಲ್ಲಿ. ಐಷಾರಾಮಿ ಬೈಕ್ ಖರೀದಿಸಬೇಕೆಂದುಕೊಂಡಿದ್ದ ಯುವಕನಿಗೆ ಮೋಸವಾಗಿದೆ. ಯೋಧನ ಹೆಸರಲ್ಲಿ ಯುವಕನಿಗೆ ವಂಚನೆ ಮಾಡಲಾಗಿದೆ. ಧಾರವಾಡದ ಮಲ್ಲಿಕ್ ವಂಚನೆಗೆ ಒಳಗಾದ ಯುವಕನಾಗಿದ್ದಾನೆ. ಮೊಬೈಲ್ ಕಾಲ್ ಮೂಲಕವೇ ಬೈಕ್ ವ್ಯವಹಾರ ಮಾಡಲಾಗಿತ್ತು. ವಿನೋದ್ ಎಂಬಾತನ ಹೆಸರಲ್ಲಿದ್ದ ಬೈಕ್ ಡಾಕ್ಯುಮೆಂಟ್ಸ್ ತೋರಿಸಿ ವಂಚನೆ ಮಾಡಲಾಗಿದೆ.

ಹೊಸ ಬೈಕ್ ಅನ್ನು ಕಡಿಮೆ ದರಕ್ಕೆ ನೀಡೋದಾಗಿ ವಂಚನೆ ಮಾಡಲಾಗಿದೆ. ತಾನು ಯೋಧ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ, ಹೊಸ ಬೈಕ್ ಫೋಟೋಗಳನ್ನು ಹಾಕಿದ್ದ. ಬೈಕ್ ಪ್ಯಾಕಿಂಗ್ ಮಾಡಿ ಫೋಟೋ ಹಾಕಿದ್ದ ವ್ಯಕ್ತಿ ಹಣ ಪಾವತಿಸಿದರೆ ಕೂಡಲೇ ಕಳಿಸಿಕೊಡೋದಾಗಿ ತಿಳಿಸಿದ್ದ. ಯೋಧ ಮೋಸ ಮಾಡಲ್ಲವೆಂದು ನಂಬಿ ಆನ್ ಲೈನ್ ಮೂಲಕ ಮಲ್ಲಿಕ್ ಹಣ ಪಾವತಿ ಮಾಡಿದ್ದ. ಜಿ.ಎಸ್.ಟಿ. ಇತ್ಯಾದಿ ಹೆಸರಲ್ಲಿ 20 ಸಾವಿರಕ್ಕೂ ಹೆಚ್ಚು ಹಣವನ್ನು ಅಪರಿಚಿತ ಪಡೆದಿದ್ದ.

ಇದನ್ನು ಓದಿ: ಸಿಎಂ ವಿರುದ್ಧ ಸಚಿವ ಈಶ್ವರಪ್ಪ ದೂರಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ; ಸಿ.ಟಿ. ರವಿ

ರಂಗಲತಾ ನಾಯಕ್ ಅನ್ನೋ ಹೆಸರಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡ ನಂತರ ಫೋನ್ ಬಂದ್ ಆಗಿದೆ. ಬೈಕ್ ನೀಡುವುದಾಗಿ ಹೇಳಿದ್ದ ವ್ಯಕ್ತಿ, ಯುವಕನನ್ನ ನಂಬಿಸಲು ಬೈಕ್ ಫೋಟೋ ಸೇರಿದಂತೆ ತಾನು ಸೈನಿಕ ಎನ್ನುವುದನ್ನು ತೋರಿಸಲು ಫೋಟೋಗಳನ್ನ ಸಹ ಕಳಿಸಿದ್ದ. ಅಲ್ಲದೆ ಜಿಎಸ್​ಟಿಗಾಗಿ ಹಣ ಪಡೆದಿದ್ದ ಸೈಬರ್ ವಂಚಕ ಫೆಕ್ ಜಿಎಸ್​ಟಿ ಬಿಲ್ ಗಳನ್ನು ಸೃಷ್ಟಿಸಿ  ಯುವಕನನ್ನು ವಂಚಿಸಿದ್ದಾನೆ. ಹಣ ಕಳೆದುಕೊಂಡ ಮಲ್ಲಿಕ್, ತಾನು ಮೋಸ ಹೋಗಿರುವುದು ಗೊತ್ತಾದ ಮೇಲೆ ಹುಬ್ಬಳ್ಳಿ ಸೈಬರ್ ಠಾಣೆ ಮೆಟ್ಟಿಲೇರಿದ್ದಾನೆ. ದೇಶ ಕಾಯುವ ಯೋಧ ಮೋಸ ಮಾಡಲ್ಲ ಅನ್ನೊ ನಂಬಿಕೆಯಿಂದ ಹಣ ಹಾಕಿದೆ. ಆದರೆ ಯೋಧನ ಹೆಸರಲ್ಲಿ ವಂಚನೆ ಮಾಡಿದ್ದಾನೆ ಅಂತ ನಂತರ ಅರಿವಿಗೆ ಬಂದಿದೆ ಎಂದು ಮಲ್ಲಿಕ್ ಆರೋಪಿಸಿದ್ದಾರೆ. ಸೈಬರ್ ಠಾಣೆ ಪೊಲೀಸರಿಂದ ಆನ್ ಲೈನ್ ವಂಚನೆ ತನಿಖೆ ಆರಂಭಗೊಂಡಿದೆ.
Youtube Video
ಒಟ್ಟಾರೆ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಗುರುತು ಪರಿಚಯ ಇಲ್ಲದಿರುವವರಿಗೆ ಹಣ ಹಾಕುವ ಮೊದಲು ನೂರಾರು ಬಾರಿ ಯೋಚನೆ ಮಾಡಬೇಕಿದೆ. ಅದರಲ್ಲೂ ಅಮಾಯಕ ಜನರನ್ನೇ ಟಾರ್ಗೆಟ್ ಮಾಡುವ ಸೈಬರ್ ವಂಚಕರಿಂದ ಜನರು ಸಹ ಜಾಗುರಕತೆಯಿಂದ ಇರಬೇಕಾಗಿದೆ.

ವರದಿ - ಶಿವರಾಮ ಅಸುಂಡಿ
Published by: HR Ramesh
First published: April 5, 2021, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories