Online Education| ಕೊಪ್ಪಳದ ಬಡ ಮಕ್ಕಳ ಪಾಲಿಗೆ ಗಗನ ಕುಸುವಮವಾದ ಆನ್​ಲೈನ್ ಶಿಕ್ಷಣ

ಬಡ ವಿದ್ಯಾರ್ಥಿಗಳೇ ಅಧಿಕವಾಗಿರುವ ಕೊಪ್ಪಳದ ಸರ್ಕಾರಿ ಶಾಲೆಯ ಮಕ್ಕಳು ಅನ್​ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಕೊಪ್ಪಳದ ಬಡ ಮಕ್ಕಳು.

ಕೊಪ್ಪಳದ ಬಡ ಮಕ್ಕಳು.

  • Share this:
ಕೊಪ್ಪಳ: ಮಹಾಮಾರಿ ಕೊರೋನಾ‌ ಎರಡನೆಯ ಅಲೆ ಕಡಿಮೆಯಾಗುತ್ತಿದ್ದಂತೆ ಶಾಲೆಗಳಲ್ಲಿ ಈಗ ಆನ್ ಲೈನ್ ಶಿಕ್ಷಣ ನೀಡಲು ಮುಂದಾಗಿದೆ. ಒಂದರಿಂದ ಹತ್ತನೆಯ ತರಗತಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡಲು ಜುಲೈ ಒಂದರಿಂದ ಆದೇಶ ಹೊರಡಿಸಿದೆ. ಆದರೆ, ಆನ್ ಲೈನ್ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ನಾನಾರೀತಿಯ ತೊಂದರೆ ಅನುಭವಿಸುತ್ತಿವೆ. ಬಡ ವಿದ್ಯಾರ್ಥಿಗಳೇ ಅಧಿಕವಾಗಿರುವ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆನ್ ಲೈನ್ ಶಿಕ್ಷಣ ಕೊಡಿಸಲು ಪಾಲಕರ ಪರದಾಟ ಹಾಗು ಮಕ್ಕಳ ಪರದಾಟ ಹೇಗೆ ಎಂಬುವುದನ್ನು ಇಲ್ಲಿ ಒಂದೊಂದು ಮಗುವಿನ ಸಮಸ್ಯೆ ಅನಾವರಣಗೊಳ್ಳುತ್ತಿದೆ. ಬಡವರೇ ಹೆಚ್ಚು ಇರುವ ಕೊಪ್ಪಳ‌ ಜಿಲ್ಲೆಯ ಸರಕಾರಿ ಶಾಲೆಯ ಮಕ್ಕಳ ಭವಣೆ ಇಲ್ಲಿದೆ.

ಘಟನೆ ಒಂದು: ಕೊಪ್ಪಳದ ಪಲ್ಟನ್ ಗಲ್ಲಿಯಲ್ಲಿರುವ ಶಹನಾಜ್ ರವರಿಗೆ ಇಬ್ಬರು ಮಕ್ಕಳು, ಅವರ ಪತಿ ಕಟ್ಟಡ ಕೆಲಸ ಮಾಡುತ್ತಿದ್ದಾರೆ, ಚಿಕ್ಕ ಮನೆಯಲ್ಲಿ ವಾಸವಾಗಿರುವ ಈ ಕುಟುಂಬದಲ್ಲಿ ಎಸ್ಎಸ್ಎಲ್ ಸಿ ಓದುತ್ತಿರುವ ಒಬ್ಬ, ಏಳನೆಯ ತರಗತಿ ಓದುತ್ತಿರುವ ಇನ್ನೊಬ್ಬ ಮಗನಿದ್ದಾನೆ. ಈ ಇಬ್ಬರಿಗೂ ಆಂಡ್ರೆಡ್ ಫೋನು ಕೊಡಿಸಲು ಆಗುವುದಿಲ್ಲ, ಕಳೆದ ಬಾರಿ ಹೇಗೊ ಸಾಲ ಮಾಡಿಕೊಂಡು 3 ಸಾವಿರ ರೂಪಾಯಿಗೆ ಒಂದು ಸೆಕೆಂಡ್ ಹ್ಯಾಂಡ್ ಫೋನು ತಂದಿದ್ದರು, ಆದರೆ ಅದು ಒಬ್ಬನಿಗೆ ಮಾತ್ರವಾಯಿತು, ಇನ್ನೊಬ್ಬನಿಗೆ ಇಲ್ಲ. ಈ ಫೋನಿಗೆ ಕರೆನ್ಸಿ ಹಾಕಿಸೋದು ಕಷ್ಟವಾಗಿದ್ದರಿಂದ ಈ ಫೋನು ಬಂದ್ ಆಗಿದೆ, ಇದರಿಂದ ಇವರ ಇಬ್ಬರ ಮಕ್ಕಳು ಈಗ ಆನ್ ಲೈನ್ ಶಿಕ್ಷಣದಿಂದ ವಂಚಿತವಾಗಿದ್ದಾರೆ.

ಘಟನೆ 2: ಹುಲಿಗೆಮ್ಮ ಎಂಬ ಬಾಲಕಿ, ಆಕೆ ಈಗ 6 ತರಗತಿ, ತಂದೆ ತಾಯಿ ಇಬ್ಬರು ತೀರಾ ಬಡವರು ಅವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಇನ್ನೂ ಟಿವಿಯಂತೂ ದೂರವಾಯಿತು, ಈಗ ಆನ್ ಲೈನ್ ಶಿಕ್ಷಣ ಎನ್ನುತ್ತಾರೆ. ಆನ್ ಲೈನ್ ಶಿಕ್ಷಣಕ್ಕೆ ಯಾವುದೇ ಸೌಲಭ್ಯವಿಲ್ಲ. ಅನಿವಾರ್ಯವಾಗಿ ಪಕ್ಕದ ಮನೆಗೋಗಬೇಕು, ನಿತ್ಯ ಬೇರೆಯವರ ಮನೆ ಹೋಗಿ ಚಂದನ ಟಿವಿ ನೋಡುವುದು ಕಷ್ಟ.

ಬಹುತೇಕರ ಮನೆಯಲ್ಲಿ ಇದೇ ರೀತಿ ಒಂದಿಲ್ಲ ಒಂದು ಸಮಸ್ಯೆ ಗಳಿವೆ, ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿರಲಿಲ್ಲ, ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಫೋನು ಖರೀದಿಸುವುದು, ಮನೆಯಲ್ಲಿ ಟಿವಿ ಇದ್ದರೂ ಅದಕ್ಕೆ ರಿಚಾರ್ಜ್ ಮಾಡಿಸಲು ಆಗುತ್ತಿಲ್ಲ. ಇದರಿಂದ ಬಡವರ ಮಕ್ಕಳ ಓದು ದೇವರೇ ದಿಕ್ಕು ಎನ್ನುತ್ತಾರೆ.ಇದು ಕೇವಲ ಒಂದೆರಡು ಮಕ್ಕಳ ಸಮಸ್ಯೆ ಅಲ್ಲ ಕೊಪ್ಪಳ‌ ಜಿಲ್ಲೆಯಲ್ಲಿ ಆನ್ ಲೈನ್ ಶಿಕ್ಷಣ ಕೊಡಲು ಯೋಜನೆ ಒಂದು ಹಾಗು ಯೋಜನೆ ಎರಡು ಎಂದು ಎರಡು ಗುಂಪು ಮಾಡಿದ್ದು ಆನ್ ಲೈನ್ ಶಿಕ್ಷಣ ಪಡೆಯಲು, ಆಂಡ್ರೆಡ್ ಫೋನು, ಸದಾ ಪೋನು, ಚಂದನ ಟಿವಿ ನೋಡಲು ಟಿವಿರುವ ಮಕ್ಕಳ 6-10 ನೆಯ ತರಗತಿಯವರಿಗೆ 77864 ಮಕ್ಕಳಿದ್ದರೆ, ಈ ಯಾವ ಸೌಲಭ್ಯವಿಲ್ಲದ 17498 ಮಕ್ಕಳಿದ್ದಾರೆ.

ಇದನ್ನೂ ಓದಿ: ಯುಪಿ ಚುನಾವಣೆ 2022| 300ಕ್ಕೂ ಅಧಿಕ ಸ್ಥಾನ ಗಳಿಸುವ ಓವೈಸಿ ಸವಾಲನ್ನು ಸ್ವೀಕರಿಸಿದ್ದೇನೆ; ಯೋಗಿ ಆದಿತ್ಯನಾಥ್

ಈಗ ಸರಕಾರ 1 ನೆಯ ತರಗತಿಯಿಂದ ಆನ್ ಲೈನ್ ಶಿಕ್ಷಣ ನೀಡಲಿದೆ,  ಒಂದನೆಯ ತರಗತಿಯಿಂದ ಐದನೆಯ ತರಗತಿಯವರೆಗೂ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಪಡೆಯುವ ಸೌಲಭ್ಯದ ಬಗ್ಗೆ ಈಗ ಶಿಕ್ಷಕರು ಸಮಿಕ್ಷೆ ನಡೆಸುತ್ತಿದ್ದಾರೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೆರೆ. ಸರಿಸುಮಾರು 35 ಸಾವಿರ ಮಕ್ಕಳು ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಈ ಕಾರಣಕ್ಕಾಗಿ ಸರಕಾರ ಶಾಲೆಯ ತರಗತಿ ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: