ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಆನ್​ಲೈನ್ ಮೂಲಕ ಪ್ರವೇಶಾತಿ; ಡಿಸಿಎಂ ಅಶ್ವಥ ನಾರಾಯಣ ಮೆಚ್ಚುಗೆ

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಪ್ರವೇಶಾತಿ, ಶುಲ್ಕ, ಸೀಟು ಹಂಚಿಕೆ, ರೋಸ್ಟರ್ ಸೇರಿ ಎಲ್ಲಾ ಪ್ರಕ್ರಿಯೆಗಳು ಆನ್​ಲೈನ್​ನಲ್ಲಿವೆ. ಬೇರೆ ಶಿಕ್ಷಣ ಸಂಸ್ಥೆಗಳು ಇದೇ ಮಾದರಿ ಅನುಸರಿಸಬೇಕು ಎಂದು ಡಿಸಿಎಂ ಅಶ್ವಥ ನಾರಾಯಣ ಕರೆ ನೀಡಿದ್ದಾರೆ.

news18-kannada
Updated:October 20, 2020, 5:59 PM IST
ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಆನ್​ಲೈನ್ ಮೂಲಕ ಪ್ರವೇಶಾತಿ; ಡಿಸಿಎಂ ಅಶ್ವಥ ನಾರಾಯಣ ಮೆಚ್ಚುಗೆ
ಆನ್​ಲೈನ್
  • Share this:
ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ಬಹುತೇಕ ಎಲ್ಲ ಸಮಸ್ಯೆಗಳಿಗೂ ಟೆಕ್ನಾಲಜಿಯೇ ಪರಿಹಾರ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದರು. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮಂಗಳವಾರ ಹಮ್ಮಿಕೊಂಡಿದ್ದ ಅನ್‌ಲೈನ್‌ ಮೂಲಕ ಪ್ರವೇಶಾತಿ ಪಡೆಯುವ ಪ್ರಕ್ರಿಯೆಗೆ ಬೆಂಗಳೂರಿನಿಂದಲೇ ವರ್ಚುಯಲ್‌ ವೇದಿಕೆ ಮೂಲಕ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕವೇ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ವ್ಯವಸ್ಥೆಯನ್ನು ಶ್ರೀ ಕೃಷ್ಣದೇವರಾಯ ವಿವಿ ರೂಪಿಸಿದೆ. ಈವರೆಗೂ ಎಲ್ಲಿಯೂ ಇಂಥ ವ್ಯವಸ್ಥೆ ಇರಲಿಲ್ಲ. ಪ್ರವೇಶ, ಶುಲ್ಕ ಪಾವತಿ, ಸೀಟು ಹಂಚಿಕೆ, ರೋಸ್ಟರ್ ಸೇರಿ ಎಲ್ಲ ಪ್ರಕ್ರಿಯೆಗಳು ಅನ್​ಲೈನ್​ನಲ್ಲಿಯೇ ನಡೆಯಲಿವೆ. ಇತರೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೆಲ್ಲವೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ಕೋವಿಡ್‌ನಂಥ ಮಾರಕ, ವೇಗವಾಗಿ ಹರಡುವ ಸೋಂಕಿನ ಕಾಲದಲ್ಲಿ ಮನೆಯಿಂದಲೇ ಸುರಕ್ಷಿತವಾಗಿ ವಿದ್ಯಾರ್ಥಿಗಳು ವಿವಿಯಲ್ಲಿನ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪೋಷಕರಿಗೂ ಇದರಿಂದ ಹೆಚ್ಚು ಅನುಕೂಲವಾಗಿದೆ. ಶ್ರೀ ಕೃಷ್ಣದೇವರಾಯ ವಿವಿಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಟೆಕ್ನಾಲಜಿ ಬಳಕೆಯಾಗಲಿ: ಇವತ್ತು ಕೋವಿಡ್‌ ಅನ್ನು ಹತ್ತಿಕ್ಕಲು ತಂತ್ರಜ್ಞಾನವೇ ದೊಡ್ಡ ಶಕ್ತಿಯಾಗಿ ನಮ್ಮ ಕೈಹಿಡಿದೆ. ಯಾವುದೇ ಕ್ಷೇತ್ರಕ್ಕೆ ಬೇಕಾದರೂ ಸರಿಹೊಂದುವ ತಂತ್ರಜ್ಞಾನ ನಮ್ಮಲ್ಲಿ ವಿಪುಲವಾಗಿ ಲಭ್ಯವಿದೆ. ಅದನ್ನು ಬಳಕೆ ಮಾಡಿಕೊಳ್ಳಲು ಹಿಂಜರಿಯಬಾರದು. ಅಗತ್ಯಕ್ಕೆ ತಕ್ಕಂತೆ ಅದನ್ನೂ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ಟೆಕ್ನಾಲಜಿ ಬಗ್ಗೆ ಹಿಂಜರಿಕೆ ಇದ್ದರೆ ನಾವು ಹಿಂದುಳಿದುಬಿಡುತ್ತೇವೆ ಎಂದರು ಉಪ ಮುಖ್ಯಮಂತ್ರಿ.

ಇದನ್ನೂ ಓದಿ: ಐದು ವರ್ಷದ ಹಿಂದೆ ನಾಪತ್ತೆಯಾದ ದಲಿತ ಯುವತಿಗಾಗಿ ಪೋಷಕರ ಹುಡುಕಾಟ; ಮರ್ಯಾದಾ ಹತ್ಯೆ ಶಂಕೆ?

ಈಗಾಗಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಇಲಾಖೆಯಲ್ಲಿ ʼಇ-ಆಫೀಸ್ʼ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆನ್’ಲೈನ್ ಅಪ್ಲಿಯೇಷನ್ ವ್ಯವಸ್ಥೆ ಮೂಲಕ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಇಲಾಖೆಯಲ್ಲಿ ಹಿಂದೆಂದೂ ಕಾಣದಂಥ ಪಾರದರ್ಶಕತೆ ಮತ್ತು ಆಡಳಿತದಲ್ಲಿ ಜವಾಬ್ದಾರಿತನವನ್ನು ತರಲಾಗಿದೆ ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಸಿದ್ದು ಅಲಗೂರು ಸೇರಿದಂತೆ ಹಲವರು ಈ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ: ಶರಣು ಹಂಪಿ
Published by: Vijayasarthy SN
First published: October 20, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading