ತೋಟಗಾರಿಕೆ ಬೆಳೆಗಳಿಗೆ ಹೆಸರಾಗಿರುವ ಬಸವ ನಾಡಿನಲ್ಲೀಗ ಈರುಳ್ಳಿಗೆ ಬೆಲೆಯಿದ್ದರೂ ಇಳುವರಿಯದ್ದೆ ಸಮಸ್ಯೆ

ಈ ವರ್ಷ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ 7851 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದ್ದು, ತೋಟಗಾರಿಕೆ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಸುಮಾರು 1296 ಹೆಕ್ಟೆರ್ ನಲ್ಲಿ ಬೆಳೆಯಲಾದ ಈರುಳ್ಳಿ ಮಳೆಗೆ ಆಹುತಿಯಾಗಿದೆ.  ಹೀಗಾಗಿ ಈರುಳ್ಳಿ ಇಳುವರಿ ಕಡಿಮೆಯಾಗಿದ್ದು, ಉಳ್ಳಾಗಡ್ಡಿಗೆ ಉತ್ತಮ ಬೆಲೆ ಬಂದಿದೆ.

ಈರುಳ್ಳಿ ದಾಸ್ತಾನು.

ಈರುಳ್ಳಿ ದಾಸ್ತಾನು.

  • Share this:
ವಿಜಯಪುರ: ಒಂದು ಬಾರಿ ರೈತರಿಗೆ ಮತ್ತೋಂದು ಬಾರಿ ಗ್ರಾಹಕರಿಗೆ ಕಣ್ಣೀರು ತರಿಸುವ ಈ ಈರುಳ್ಳಿ ಮಾರಾಟಕ್ಕೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಅದರದೇ ಆದ ವ್ಯವಸ್ಥೆಯಿದೆ. ಇಲ್ಲಿ ಪರಂಪರಾಗತವಾಗಿ ನಡೆಯುತ್ತಿರುವ ಉಳ್ಳಾಗಡ್ಡೆ ಮಾರುಕಟ್ಟೆ ವ್ಯವಸ್ಥೆ ಎಲ್ಲರಿಗೂ ಮಾದರಿಯಾಗಿದೆ. ತೋಟಗಾರಿಗೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಬಸವನಾಡು ವಿಜಯಪುರ ಜಿಲ್ಲೆ ಉಳ್ಳಾಗಡ್ಡಿಗೂ ಫೇಮಸ್.  ಇಲ್ಲಿ ಬೆಳೆಯಲಾಗುವು ಈರುಳ್ಳಿಗೆ ರಾಜ್ಯವಷ್ಟೇ ಅಲ್ಲ, ದೇಶದ ನಾನಾ ರಾಜ್ಯಗಳಲ್ಲಿಯೂ ಬೇಡಿಕೆಯಿದೆ.  ಒಣ ಬೇಸಾಯ ಮಾಡುವ ರೈತರು ವರ್ಷದಲ್ಲಿ ಒಂದು ಬಾರಿ ಈರುಳ್ಳಿ ಬೆಳೆದರೆ, ನೀರಾವರಿ ಪದ್ಧತಿಯಡಿ ಕೃಷಿ ಮಾಡುವ ಅನ್ನದಾತರು ವರ್ಷದಲ್ಲಿ ಎರಡು ಬಾರಿ ಉಳ್ಳಾಗಡ್ಡೆ ಬೆಳೆದು ಆದಾಯ ಕಂಡುಕೊಳ್ಳುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಈರುಳ್ಳಿ ಮಾರುಕಟ್ಟೆಗೆ ಎರಡು ಬಗೆಯಲ್ಲಿ ನಡೆಯುತ್ತಿದೆ.  ರೈತರ ಹೊಲಗಳಿಗೆ ಬರುವ ದಲ್ಲಾಳಿಗಳು ಖುದ್ದಾಗಿ ಖರೀದಿಸಿ ರಾಜ್ಯ ಮತ್ತು ನಾನಾ ರಾಜ್ಯಗಳ ಪ್ರಮುಖ ಮಾರುಕಟ್ಟೆಗಳಿಗೆ ಈರುಳ್ಳಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಎರಡನೇ ಬಗೆಯ ವ್ಯಾಪಾರ ವ್ಯಸಸ್ಥೆಯೇ ಫೇಮಸ್ ಆಗಿದೆ.  ವಿಜಯಪುರ ಎಪಿಎಂಸಿಯಲ್ಲಿ ಪ್ರತಿ ಬುಧವಾರ ಮತ್ತು ರವಿವಾರ ಈರುಳ್ಳಿಗಾಗಿಯೇ ಮಾರುಕಟ್ಟೆ ನಡೆಯುತ್ತದೆ.

ಇಲ್ಲಿಗೆ ಆಗಮಿಸುವ ರೈತರು ತಮ್ಮ ಜೊತೆ ನಾನಾ ಸರಕು ಸಾಗಣೆ ವಾಹನಗಳನ್ನು ತರುವ ಉಳ್ಳಾಗಡ್ಡೆಯನ್ನು ಇಲ್ಲಿರುವ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.  ಇವರು ಈರುಳ್ಳಿ ತರುವ ದಿನ ಮಾರುಕಟ್ಟೆಯಲ್ಲಿರುವ ದರದ ಅನ್ವಯ ಇವರಿಗೆ ಹಣ ನೀಡಲಾಗುತ್ತದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರರಾದ ಗುರಪ್ಪ ಕುರಿ, ಸುರೇಶ ಕಾಳಗಿ ಮತ್ತು ಪರಸು ಯಮನಪ್ಪ ಇಟಗಿ.

ವಿಜಯಪುರ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯುವ ಬಹುತೇಕ ರೈತರು ಎಪಿಎಂಸಿಯನ್ನೇ ಅವಲಂಬಿಸಿದ್ದಾರೆ.  ಇಲ್ಲಿರುವ ಉಲ್ಳಾಗಡ್ಡಿ ಖರೀದಿಸುವ ಏಜೆಂಟರು ತೈತರಿಂದ ಈರುಳ್ಳಿ ಖರೀದಿಸಿ ತೂಕ ಮಾಡುತ್ತಾರೆ.  ಪ್ರತಿಯೊಂದು ಚೀಲದಲ್ಲಿರುವ ಉಳ್ಳಾಗಡ್ಡೆಯ ಒಟ್ಟು ತೂಕವನ್ನು ನೋಟ್ ಮಾಡಿಟ್ಟುಕೊಳ್ಳುತ್ತಾರೆ.  ಬಳಿಕ ಆಯಾ ಈರುಳ್ಳಿ ಚೀಲಗಳ ಮೇಲೆ ರೈತರ ಸಂಖ್ಯೆ ಮತ್ತು ತೂಕವನ್ನು ಮಾರ್ಕರ್ ನಿಂದ ಹಾಕುತ್ತಾರೆ.  ಬಳಿಕ ಸಂಜೆಯ ವೇಳೆಗೆ ಈರುಳ್ಳಿ ಖರೀದಿಸಿದ ರೈತರಿಗೆ ಅಂದಿನ ಮಾರುಕಟ್ಟೆಯಲ್ಲಿರುವ ದರದಂತೆ ಹಣ ನೀಡಲಾಗುತ್ತಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳಾದ ಚಂದ್ರಶೇಖರ ಅಗಸರ ಮತ್ತು ಸದಾನಂದ ಕಾಂಬಳೆ.

ಇದನ್ನೂ ಓದಿ: Huge Blast - ಶಿವಮೊಗ್ಗದಲ್ಲಿ ಭಾರೀ ಡೈನಮೈಟ್ ಸ್ಫೋಟ; 6ಕ್ಕೂ ಮಂದಿ ದುರ್ಮರಣ

ಈ ವರ್ಷ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ 7851 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಲಾಗಿದ್ದು, ತೋಟಗಾರಿಕೆ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಸುಮಾರು 1296 ಹೆಕ್ಟೆರ್ ನಲ್ಲಿ ಬೆಳೆಯಲಾದ ಈರುಳ್ಳಿ ಮಳೆಗೆ ಆಹುತಿಯಾಗಿದೆ.  ಹೀಗಾಗಿ ಈರುಳ್ಳಿ ಇಳುವರಿ ಕಡಿಮೆಯಾಗಿದ್ದು, ಉಳ್ಳಾಗಡ್ಡಿಗೆ ಉತ್ತಮ ಬೆಲೆ ಬಂದಿದೆ.  ಸಧ್ಯಕ್ಕೆ ವಿಜಯಪುರ ಎಪಿಎಂಸಿ ಯಲ್ಲಿ ರೈತರು ಪ್ರತಿ ಕಿಲೋ ಈರುಳ್ಳಿಗೆ ರೂ. 15 ರೂ. 35ರ ವರೆಗೆ ಮಾರಾಟ ಮಾಡುತ್ತಿದ್ದಾರೆ.

ಈ ರೈತರಿಂದ ಈರುಳ್ಳಿ ಖರೀದಿಸುವ ಇಲ್ಲಿನ ಎಪಿಎಂಸಿ ವ್ಯಾಪಾರಿಗಳು ಅದನ್ನು ಸಗಟು ರೂಪದಲ್ಲಿ ಕರ್ನಾಟಕದ ನಾನಾ ಜಿಲ್ಲೆಗಳು ಮತ್ತು ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ.  ಅಲ್ಲದೇ ಇಲ್ಲಿನ ಎಪಿಎಂಸಿ ಮೂಲಕ ಸರಕಾರಕ್ಕೆ ಪ್ರತಿ ವ್ಯವಹಾರಕ್ಕೆ ನಿಗದಿ ಪಡಿಸಿದ ದರದಲ್ಲಿ ಶುಲ್ಕವನ್ನೂ ಕಟ್ಟುತ್ತಾರೆ.  ಅಲ್ಲದೇ, ಬೇರೆಕಡೆ ಮಾರಾಟ ಮಾಡುವುದರಿಂದ ಸಿಗುವ ಶೇಕಡಾವಾರು ಲೆಕ್ಕದಲ್ಲಿ ಆದಾಯ ಪಡೆಯುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ಬೆಳೆಯಲಾಗುವ ಈರುಳ್ಳಿಯನ್ನು ಬಹುತೇಕ ಎಪಿಎಂಸಿ ಮೂಲಕವೇ ಮಾರಾಟ ಮಾಡುತ್ತಿರುವುದು ಗಮನಾರ್ಹವಾಗಿದೆ.
Published by:MAshok Kumar
First published: