Onion Price: ತುಮಕೂರಿನ ಈರುಳ್ಳಿ ಬೆಳಗಾರರ ಕಣ್ಣಲ್ಲಿ ನೀರು ತರಿಸಿದ ಜಿಟಿಮಳೆ!

ಬೆಳೆ ಹಾಳಾಗಿರುವುದು.

ಬೆಳೆ ಹಾಳಾಗಿರುವುದು.

ನಾಲ್ಕು ತಿಂಗಳ ನಿರಂತರ ಪರಿಶ್ರಮದಿಂದ ಈರುಳ್ಳಿ ಬೆಳೆ ಕೈಗೆ ಬಂದಿತ್ತು. ಇನ್ನೂ ಹದಿನೈದು ದಿನ ಕಳೆದಿದ್ದರೆ ರೈತರು ಜೇಬು ತುಂಬ ಹಣ ಎಣಿಸುತ್ತಿದ್ದರು. ಆದರೆ, ಜಟಿಮಳೆ ಪರಿಣಾಮ ಎಲ್ಲಾ ಈರುಳ್ಳಿ ಬೆಳೆ ನೀರಿನಲ್ಲಿ ಕೊಳೆತು ಹೋಗಿದೆ.

  • Share this:

ತುಮಕೂರು : ಈ ಬಾರಿ ರಾಜ್ಯದಲ್ಲಿ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ . ಈ ನಡುವೆ ಕಳೆದ ಎರಡೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ . ಇನ್ನೂ ಶಿರಾ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಒಳ್ಳೆಯ ಇಳುವರಿಯ ನಿರಿಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರೈತರು ಕೃಷಿ ನಂಬಿ ಜೀವನ ಮಾಡುವವರ ಸಂಖ್ಯೆ ತುಂಬಾ ವಿರಳ. ಸಿಗುವ ಅಲ್ಪ ಸ್ವಲ್ಪ ಅಂತರ್ಜಲ ನೀರು ಬಳಸಿಕೊಂಡು ಸಮೃದ್ಧ ಬೆಳೆ ತೆಗೆದ ರೈತರ ಸಂಖ್ಯೆ ಅಗಾಧವಾಗಿದೆ . ಕಡ್ಲೆಕಾಯಿ , ಕಲ್ಲಂಗಡಿ ಬೆಳೆದ ರೈತರು ಕೈ ತುಂಬಾ ಹಣವನ್ನು ಗಳಿಸಿದ್ದಾರೆ . ಅದೇ ರೀತಿ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕರೆಕಲ್ಲು ಹಟ್ಟಿ , ಕ್ಯಾಸಮುದ್ರ , ಮುಸುದಲೋಟಿ , ಎಂಜಲಗೆರೆಯ ರೈತರು ಈರುಳ್ಳಿ ಬೆಳೆದಿದ್ದರು .


ನಾಲ್ಕು ತಿಂಗಳ ನಿರಂತರ ಪರಿಶ್ರಮದಿಂದ ಈರುಳ್ಳಿ ಬೆಳೆ ಕೈಗೆ ಬಂದಿತ್ತು. ಇನ್ನೂ ಹದಿನೈದು ದಿನ ಕಳೆದಿದ್ದರೆ ರೈತರು ಜೇಬು ತುಂಬ ಹಣ ಎಣಿಸುತ್ತಿದ್ದರು. ಆದರೆ, ಜಟಿಮಳೆ ಪರಿಣಾಮ ಎಲ್ಲಾ ಈರುಳ್ಳಿ ಬೆಳೆ ನೀರಿನಲ್ಲಿ ಕೊಳೆತು ಹೋಗಿದೆ. 5 ಹಳ್ಳಿಯ ಸುಮಾರು 30 ಕ್ಕೂ ಹೆಚ್ಚು ರೈತರು ಸುಮಾರು 80 ರಿಂದ 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆದಿದ್ದರು , ಅಂದಾಜು ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು.


ಇದನ್ನೂ ಓದಿ : ರೈತರ ಪ್ರತಿಭಟನೆ ಜೊತೆಗೆ ನಾಳೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರಿಂದಲೂ ಮುಷ್ಕರ


ಸರಿಸುಮಾರು 80 ಲಕ್ಷ ಆದಾಯದವನ್ನು ಈರುಳ್ಳಿ ಬೆಳೆಯಿಂದ ನಿರೀಕ್ಷೆ ಮಾಡಲಾಗಿತ್ತು . ಆದ್ರೀಗ ನಿರಂತರ ಮಳೆಯಿಂದ ಎಲ್ಲಾ ಬೆಳೆ ಕೊಳೆತು ಹೋಗಿದೆ . ಶಿರಾದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ . ಮಂತ್ರಿಗಳು , ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ . ಆದ್ರೆ ಈರುಳ್ಳಿ ಬೆಳೆದ ಈ ರೈತರಿಗೆ ಯಾವ ಅಧಿಕಾರಿಯೂ , ರಾಜಕೀಯ ಮುಖಂಡರು ಸಹಾಯ ಹಸ್ತ ಚಾಚಿಲ್ಲ.




ನಾಮಕಾವಸ್ಥೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮಾತನಾಡಿದ್ದಾರೆ . ಆದರೆ ರೈತರಿಗೆ ಈವರೆಗೂ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ , ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕಾಗಿದೆ.

Published by:MAshok Kumar
First published: