news18-kannada Updated:October 22, 2020, 5:51 PM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ(ಅಕ್ಟೋಬರ್. 22): ಬಾಗಲಕೋಟೆ ಜಿಲ್ಲೆಯಲ್ಲಿ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಗೆ ಈರುಳ್ಳಿ ಬೆಳೆ ನೆಲಕಚ್ಚಿದೆ. ಇದರ ಪರಿಣಾಮವಾಗಿ ಇದೀಗ ಒಂದೆಡೆ ರೈತರ ಪಾಲಿಗೆ ಕಣ್ಣುರುಳಿಯಾಗಿದ್ದರೆ. ಇದೀಗ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಕೆಜಿ ಈರುಳ್ಳಿ 100 ರ ಗಡಿ ಬಂದು ತಲುಪಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಈರುಳ್ಳಿ ದರ ಕೇಳಿದ ಗ್ರಾಹಕರು ಶಾಕ್ ಆಗುತ್ತಿದ್ದು, ಜೇಬಿಗೆ ಹೊರೆ ಬೀಳುತ್ತಿದೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತೆ. ಆದರೆ, ಈ ಬಾರಿ ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲಿ ಮಳೆ ಪ್ರವಾಹದಿಂದ ಈರುಳ್ಳಿ ಬೆಳೆ ಹಾನಿಯಾಗಿ, ಬೆಲೆ ಹೊರೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 39, 800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿಂದಲೇ ಈರುಳ್ಳಿ ಬೆಳೆಗಾರರ ಬೆನ್ನಿಗೆ ಮಳೆ ಬೇತಾಳನಂತೆ ಕಾಡತೊಡಗಿದೆ.
ಆಗಸ್ಟ್ ತಿಂಗಳಿಂದ ಅಕ್ಟೋಬರ್ ತಿಂಗಳ ವರೆಗೆ ಮಳೆಯಿಂದ ಅಂದಾಜು 38 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ಕೊಳೆತು,ದುರ್ನಾತ ಬೀರುವದರೊಂದಿಗೆ ಹಾನಿಯಾಗಿದೆ.ಕಳೆದ ವಾರದ ಹಿಂದೆ ಕೆಜಿಗೆ ಈರುಳ್ಳಿ 40 ರೂಪಾಯಿ ಇತ್ತು. ಇದೀಗ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾದಂತೆ, ಮಾರುಕಟ್ಟೆಗೆ ಈರುಳ್ಳಿ ಬರುವದರಲ್ಲೂ ಕೊರತೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ಕೆಜೆಗೆ 80 ರಿಂದ 100ರೂಪಾಯಿವರೆಗೆ(ಈರುಳ್ಳಿ ಅಳತೆ, ಗುಣಮಟ್ಟ ಆಧರಿಸಿ) ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಗ್ರಾಹಕರು 1 ಕೆಜಿ ಈರುಳ್ಳಿ ಖರೀದಿಸುವವರು ದರ ಹೆಚ್ಚಾಗಿದಕ್ಕೆ ಅರ್ಧ ಕೆಜಿ ಖರೀದಿಸುವಂತಾಗಿದೆ. ಇನ್ನು ವಿಚಿತ್ರವೆಂದರೆ ರೈತರು ಹೊಲದಲ್ಲಿ ಬೆಳೆದ ಈರುಳ್ಳಿ ಹಾನಿಯಾದ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ಬಳಕೆಗೆ ಈರುಳ್ಳಿ ಖರೀದಿಸುವ ಪರಿಸ್ಥಿತಿಯಿದೆ. ಈರುಳ್ಳಿ ಬೆಲೆ ಜೊತೆಗೆ ಟೊಮೋಟೊ, ಆಲೂಗಡ್ಡೆ, ಬದನೆಕಾಯಿ, ಸೇರಿದಂತೆ ಇತರೆ ಕಾಯಿಪಲ್ಲೆಗಳ ದರ ದುಪ್ಪಟ್ಟಾಗಿದೆ.ಮಳೆಯಿಂದ ಹೊಲದಲ್ಲಿನ ಈರುಳ್ಳಿ ಹಾನಿಯಾಗಿದೆ.
ಈಗ ಮನೆ ಬಳಕೆಗೆ ಈರುಳ್ಳಿ ಖರೀದಿಸುವದಕ್ಕೆ ಮಾರುಕಟ್ಟೆಗೆ ಬಂದಿದ್ದೇನೆ. ಈರುಳ್ಳಿ ಬೆಳೆ ಹಾನಿಯಿಂದ ರೈತರು ಸಂಕಷ್ಟ, ಇನ್ನೊಂದೆಡೆ ಬೆಲೆಯೇರಿಕೆಯಿಂದ ಗ್ರಾಹಕರಿಗೂ ಹೊರೆಯಾಗಿದೆ. ಸರ್ಕಾರ ಹಾನಿಯಾದ ಈರುಳ್ಳಿ ಬೆಳೆಗಾರರಿಗೆ ಪರಿಹಾರ ಕೊಡಬೇಕು, ದಿನಬಳಕೆ ವಸ್ತುಗಳ ದರ ಏರಿಕೆ ನಿಯಂತ್ರಣಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಹಕರ ಈರಪ್ಪ.
ಇದನ್ನೂ ಓದಿ :
ಪ್ರವಾಹ ಪೀಡಿತ ಪ್ರದೇಶದಲ್ಲಿ ಪಿಎಸ್ಐಗೆ ಚೆಲ್ಲಾಟ ; ಸಂತ್ರಸ್ತರಿಗೆ ಪ್ರಾಣ ಸಂಕಟ
ಇನ್ನು ವ್ಯಾಪಾರಸ್ಥರು ಮಾರುಕಟ್ಟೆಗೆ ಬರುವ ಈರುಳ್ಳಿಯಲ್ಲಿ ಶೇಕಡಾ 70ರಷ್ಟು ಹಾನಿಯಾಗಿ ಬರುತ್ತಿದೆ. ಜೊತೆಗೆ ದರ ಹೆಚ್ಚಾಗಿದ್ದು, ಮಳೆಯಿಂದ ಈರುಳ್ಳಿ ಜೊತೆಗೆ ಇತರೆ ತರಕಾರಿಗಳು ಹಾನಿಯಾಗಿದ್ದು, ತರಕಾರಿಗಳ ದರ ಹೆಚ್ಚಾಗುತ್ತಿದೆ. ಸರ್ಕಾರ ಗ್ರಾಹಕರ, ವ್ಯಾಪಾರಸ್ಥರ, ರೈತರಿಗೆ ಅನುಕೂಲ ಕಲ್ಪಿಸಬೇಕು ವ್ಯಾಪಾರಸ್ಥರು ಕೋವಿಡ್ ಹಿನ್ನೆಲೆ ಸರಿಯಾಗಿ ವ್ಯಾಪಾರ ವಹಿವಾಟು ಇಲ್ಲ ಸರ್ಕಾರ ಪರಿಹಾರ ಒದಗಿಸಲಿ ಎಂದು ವ್ಯಾಪಾರಸ್ಥೆ ಮಕ್ತುಂಬಿ ಚೌಧರಿ ಹೇಳುತ್ತಾರೆ.
ಒಟ್ಟಿನಲ್ಲಿ ಈರುಳ್ಳಿ ಬೆಳೆ ಹಾನಿಯಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದ್ದರೆ. ಇದೀಗ ಗ್ರಾಹಕರಿಗೆ ಹೊರೆಯಾಗತೊಡಗಿದೆ. ಈರುಳ್ಳಿ ತಿನ್ನುವುದಕ್ಕೆ ಯೋಚಿಸುವಂತಾಗಿದೆ.
Published by:
G Hareeshkumar
First published:
October 22, 2020, 5:50 PM IST