ಮಂಡ್ಯ: ಮುಖ್ಯಮಂತ್ರಿ ಯಡ್ಡಿಯೂರಪ್ಪ ಪಿಎ ನಾನು ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಕೆಎಸ್ಆರ್‌ಟಿಸಿ ಬಸ್ ಚಾಲಕನಿಗೆ ವಂಚಸಿರುವಂತ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಈಚಗೆರೆ ಗ್ರಾಮದ ಪುರುಷೋತ್ತಮ್ ವಂಚನೆಗೊಳಗಾದ ವ್ಯಕ್ತಿ. ಇವ್ರು ಧರ್ಮಸ್ಥಳದ ಕೆಎಸ್ಆರ್‌ಟಿಸಿ ಡಿಪೋನಲ್ಲಿ ಹಲವು ವರ್ಷಗಳಿಂದ ಚಾಲಕನಾಗಿ ಕೆಲಸ ನೀರ್ವಹಿಸುತ್ತಿದ್ದಾರೆ. ಹಿಗಾಗಿ ಧರ್ಮಸ್ಥಳದ ಹೋಟೆಲ್ ಒಂದಕ್ಕೆ ಪ್ರತಿ ನಿತ್ಯ ಊಟಕ್ಕೆ ಹೋಗ್ತಿದ್ರು. ಇತ್ತೀಚೆಗೆ ಆ ಹೋಟೆಲ್ ಒಂದರಲ್ಲಿ ಶೈಲೇಶ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ಬಳಿಕ ಆತ ತಾನು ಯಡ್ಡಿಯೂರಪ್ಪ ಪಿಎ ಆಗಿದ್ದೆ, ನನಗೆ ಯಡ್ಡಿಯೂರಪ್ಪ ತುಂಬ ಚೆನ್ನಾಗಿ ಗೊತ್ತು, ಡಿಕೆ ಶಿವಕುಮಾರ್ ಗೊತ್ತು ಅಂತ ಅವರ ಜೊತೆಗಿನ ಫೋಟೋಗಳನ್ನ ತೋರಿಸಿ ಪುರುಷೋತ್ತಮ್ ಅವರನ್ನ ನಂಬಿಸಿದ್ದಾನೆ.
ಚುನಾವಣೆಯಲ್ಲಿ ಯಡ್ಡಿಯೂರಪ್ಪ ಹಣ ಹಂಚುವುದು ನಾನೆ ಎಂದು ನಂಬಿಸಿದ ಭೂಪ!
ಹೌದು, ಚುನಾವಣೆಯಲ್ಲಿ ಹಣ ಹಂಚಲು ಯಡ್ಡಿಯೂರಪ್ಪ ನವರು ನನ್ನನ್ನೆ ನೇಮಿಸಿದ್ದರು ಅಂತ ಹಣದ ರಾಶಿ ಇರುವ ಫೋಟೋ ಒಂದನ್ನ ತೋರಿಸಿ ಚಾಲಕ ಪುರುಷೋತ್ತಮ್ ಅವರನ್ನ ನಂಬಿಸಿದ್ದಾನೆ. ಬಳಿಕ ಪುರುಷೋತ್ತಮ್ ಅವರಿಗೆ ಧರ್ಮಸ್ಥಳ ದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಅವರ ಬಳಿ ಮೊದಲು ಐವತ್ತು ಸಾವಿರ ಹಣ ಪಡೆದಿದ್ದಾನೆ.
ದೇವರ ದರ್ಶನಕ್ಕೆ ಬಂದಿದ್ದಾಗಿ ಹೇಳಿ ಮತ್ತೆ ಹಣ ಪೀಕಿದಾ ಆಸಾಮಿ;
ಹೌದು ಮೊದಲ ಕಂತಿನಲ್ಲಿ ಐವತ್ತು ಸಾವಿರ ನಗದು ಪಡೆದ ಶೈಲೇಶ್ ಬಳಿಕ ಮಂಡ್ಯಕ್ಕೆ ಆಗಮಿಸಿದ್ದ ಈ ಸಂದರ್ಭ ಚಾಲಕ ಪುರುಷೋತ್ತಮ್ ಭೇಟಿ ಮಾಡಿದ ಅವನು. ಪುರುಷೋತ್ತಮ್ ರನ್ನ ಕರೆದುಕೊಂಡು ಪಾಂಡವಪುರದ ಆರತಿ ಹುಕ್ಕಡ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದ್ದಾನೆ. ಆನಂತರ ಮತ್ತೆ ಐವತ್ತು ಸಾವಿರಕ್ಕೆ ಬೇಡಿಕೆ ಇಟ್ಟು, ಮೂರೇ ದಿನಗಳಲ್ಲಿ ವರ್ಗಾವಣೆ ಮಾಡಿಸುವುದಾಗಿ ಭರವಸೆ ನೀಡಿದ್ದಾನೆ. ಆತನ ಮಾತನ್ನ ನಂಬಿದ ಪುರುಷೋತ್ತಮ್ ಮತ್ತೆ ಫೋನ್ ಪೇ ಮೂಲಕ ನಲವತ್ತೆಂಟು ಸಾವಿರ ಹಣ ನೀಡಿದ್ದಾರೆ.
ಇದನ್ನೂ ಓದಿ: Lakshadeep| ಲಕ್ಷದ್ವೀಪಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ; ಆಯೆಷಾ ಸುಲ್ತಾನ್
ಒಟ್ಟು 98 ಸಾವಿರ ಹಣ ಪಡೆದ ಬಳಿಕ ಮೊಬೈಲ್ ಸ್ವಿಚ್ ಆಫ್;
ಹೌದು, 98 ಸಾವಿರ ಹಣ ಪಡೆದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಶೈಲೇಶ್ ನಾಪತ್ತೆಯಾಗಿದ್ದಾನೆ. ಬಳಿಕ ಪುರುಷೋತ್ತಮ್ ಮಂಡ್ಯ ಪೂರ್ವ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ದೂರು ಪಡೆದು ಪೊಲೀಸರು ಇದುವರೆಗೂ ಆರೋಪಿಯ ಸುಳಿವು ಪತ್ತೆ ಹಚ್ಚಿಲ್ಲ. ಹಿಗಾಗಿ ಪುರುಷೋತ್ತಮ್ ಇಂದು ಮಂಡ್ಯ ಎಸ್ಪಿ ಕಚೇರಿಗೆ ತೆರಳಿ ವಂಚನೆ ಬಗ್ಗೆ ಮತ್ತೊಂದು ದೂರು ದಾಖಲಿಸಿದ್ದಾರೆ.
ಪುರುಷೋತ್ತಮ್ ಸಂಕಷ್ಟಕ್ಕೆ ಸ್ನೇಹಿತರ ಸಾಥ್;
ಇನ್ನು ಪುರುಷೋತ್ತಮ್ ಸಂಕಷ್ಟ ನೋಡಿ ಅವರ ಸ್ನೇಹಿತ ಚಂದ್ರು ಕೂಡ ಅವರಿಗೆ ಸಾಥ್ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಹೆಸರು ಹೇಳಿಕೊಂಡು ಈ ರೀತಿ ವಂಚನೆ ಮಾಡುವವರನ್ನ ಆದಷ್ಟು ಬೇಗ ಬಂಧಿಸಬೇಕು. ಇಲ್ಲದಿದ್ರೆ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹಾಳಾಗತ್ತೆ. ಅಲ್ಲದೆ ಪುರುಷೋತ್ತಮ್ 5 ರೂ ಬಡ್ಡಿಯಂತೆ ಹಣವನ್ನ ತಂದು ಆತನಿಗೆ ನೀಡಿದ್ದಾರೆ. ಹಿಗಾಗಿ ಅವರು ಕಷ್ಟದಲ್ಲಿದ್ದು, ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಹಿಗಾಗಿ ಆರೋಪಿಯನ್ನ ಆದಷ್ಟು ಬೇಗ ಬಂಧಿಸಿ ಹವನ್ನ ವಾಪಸ್ ಕೊಡಿಸಿಕೊಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.
(ವರದಿ- ಸುನೀಲ್ ಕುಮಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ