ಜಮಖಂಡಿಯಲ್ಲಿ ಕುಸಿದು ಬಿದ್ದ ಮನೆ ಮೇಲ್ಛಾವಣಿ; ಅದೃಷ್ಟವಶಾತ್ ವ್ಯಕ್ತಿ ಬಚಾವ್

ಅದೃಷ್ಟಕ್ಕೆ, ಛಾವಣಿ ಕುಸಿದ ಆ ಮನೆಯಲ್ಲಿ ಒಬ್ಬ ವ್ಯಕ್ತಿಯಷ್ಟೇ ವಾಸವಾಗಿದ್ದನು. ಸ್ಥಳೀಯ ಯುವಕರ ಸಮಯ ಪ್ರಜ್ಞೆ, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಯಿಂದ ಪವನ್ ಮತ್ತೆ ಬದುಕಿ ಬಂದಿದ್ದಾನೆ.

news18-kannada
Updated:July 13, 2020, 8:38 AM IST
ಜಮಖಂಡಿಯಲ್ಲಿ ಕುಸಿದು ಬಿದ್ದ ಮನೆ ಮೇಲ್ಛಾವಣಿ; ಅದೃಷ್ಟವಶಾತ್ ವ್ಯಕ್ತಿ ಬಚಾವ್
ಬಾಗಲಕೋಟೆಯಲ್ಲಿ ಮನೆಯ ಛಾವಣಿ ಕುಸಿದಿರುವುದು
  • Share this:
ಬಾಗಲಕೋಟೆ(ಜು 12): ನಿರಂತರ ಮಳೆಯಿಂದಾಗಿ ಶಿಥಿಲವಾಗಿದ್ದ ಮನೆ ಮೇಲ್ಛಾವಣಿ ಏಕಾಏಕಿ ಕುಸಿದುಬಿದ್ದಿದೆ. ಮಣ್ಣಿನ ಅವಶೇಷಗಳಡಿ ಸಿಲುಕಿದ ವ್ಯಕ್ತಿ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ. ಬರೋಬ್ಬರಿ 2ಗಂಟೆ ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ಹೊರ ತೆಗೆದಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಿರಂತರ ಮಳೆಯಾಗಿತ್ತು. ನಗರದ  ಹುಲ್ಯಾಳಕರ ಗಲ್ಲಿಯಲ್ಲಿ ಪವನ್ ಸವದತ್ತಿ ಎಂಬಾತ ಮನೆಯಲ್ಲಿ  ಊಟ ಮಾಡುತ್ತಾ ಕುಳಿತಿದ್ದಾನೆ. ಈ ವೇಳೆ ಏಕಾಏಕಿ ಶಿಥಿಲವಾಗಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಮಣ್ಣಿನ ಅವಶೇಷಗಳಡಿ ಸಿಲುಕಿದವನನ್ನು ಹೊರತೆಗೆಯಲು ಸ್ಥಳೀಯ ಯುವಕರು ಹರಸಾಹಸ ನಡೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬರೋಬ್ಬರಿ 2 ಗಂಟೆ ಕಾರ್ಯಾಚರಣೆ ನಡೆಸಿ, ಮಣ್ಣು, ಕಟ್ಟಿಗೆ ಮಧ್ಯೆ ಸಿಲುಕಿದವನನ್ನು ಹೊರತೆಗೆದಿದ್ದಾರೆ.

roof collapse in Jamakhandi, Bagalkot
ಮನೆ ಛಾವಣಿ ಕುಸಿತದ ನಂತರ ಮಣ್ಣಿನ ಅವಶೇಷದಡಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಿದ್ದು


ಘಟನೆ ನಡೆದ ವೇಳೆ ಸ್ಥಳೀಯ ಜನರು ಕೊರೊನಾ ಲಾಕ್ ಡೌನ್ ಲೆಕ್ಕಿಸದೇ ಜಮಾಯಿಸಿದ್ದರು. ಮಣ್ಣಿನಡಿ ಸಿಲುಕಿದ ವ್ಯಕ್ತಿ ಹೊರಬಂದ ಬಳಿಕ ಬದುಕಿದೆ ಬಡಜೀವ ಎಂದು ನಿಟ್ಟುಸಿರು ಬಿಟ್ಟಿದ್ದಾನೆ. ಗಾಯಾಳು ಪವನ್ ಸವದತ್ತಿ ಅವರನ್ನ ಕೂಡಲೇ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪವನ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವ ಸಾಫ್ಟ್​ವೇರ್ ಯುವತಿಅದೃಷ್ಟಕ್ಕೆ, ಛಾವಣಿ ಕುಸಿದ ಆ ಮನೆಯಲ್ಲಿ ಒಬ್ಬ ವ್ಯಕ್ತಿಯಷ್ಟೇ ವಾಸವಾಗಿದ್ದನು. ಸ್ಥಳೀಯ ಯುವಕರ ಸಮಯ ಪ್ರಜ್ಞೆ, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಯಿಂದ ಪವನ್ ಮತ್ತೆ ಬದುಕಿ ಬಂದಿದ್ದಾನೆ.ಇದೇ ವೇಳೆ, ಮನೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Published by: Vijayasarthy SN
First published: July 13, 2020, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading